ಬೆಂಗಳೂರು :ಇತ್ತೀಚೆಗೆ ಪುರುಷನ ಮೇಲೆ ನಡೆಯುತ್ತಿರುವ ಮಹಿಳಾ ದೌರ್ಜನ್ಯ ಹೆಚ್ಚಾಗುತ್ತಿದ್ದು, ಬೆಂಗಳೂರಿನಲ್ಲಿ ನಡೆದ ಘಟನೆಯೊಂದು ಮನಕಲುವಂತಿದೆ. ಹೌದು..ಇತ್ತೀಚಿಗೆ ಬೆಂಗಳೂರಿನಲ್ಲಿ ಪತ್ನಿಯ ಕಾಟಕ್ಕೆ ಮನನೊಂದು ಟೆಕ್ಕಿ ಅತುಲ್ ಸುಭಾಷ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಒಂದು ಘಟನೆ ಮಾಸುವ ಮುನ್ನವೇ ಇದೀಗ ಬೆಂಗಳೂರಿನಲ್ಲಿ ಪತ್ನಿ ಹಾಗೂ ಮಾವನ ಕಾಟಕ್ಕೆ ಬೇಸತ್ತು ಹೆಡ್‌ಕಾನ್ಸ್ಟೆಬಲ್ ಒಬ್ಬರು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿ ನಡೆದಿದೆ. ಹುಳಿಮಾವು ಠಾಣೆಯ ಹೆಡ್ ಕಾನ್ಸ್ಟೇಬಲ್ ತಿಪ್ಪಣ್ಣ ಮೃತರು. ಇವರಿಗೆ ಅವರ ಪತ್ನಿ ಹಾಗೂ ಮಾವ ಕಿರುಕುಳ ಕೊಡುತ್ತಿದ್ದರು ಎಂದು ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಳೆದ ಮೂರು ವರ್ಷಗಳ ಹಿಂದೆ ತಿಪ್ಪಣ್ಣ ಮದುವೆಯಾಗಿದ್ದರು. ಒಂದು ವರ್ಷದ ವರೆಗೆ ಎಲ್ಲವೂ ಚೆನ್ನಾಗಿತ್ತು. ಆದರೆ ಒಂದು ವರ್ಷದ ಬಳಿಕ ಸಂಸಾರದಲ್ಲಿ ವೈಮನಸ್ಸು, ಕಲಹ ಉಂಟಾಗಿದೆ. ಅಲ್ಲದೆ ಪತ್ನಿ ತಂದೆ ಯಮುನಪ್ಪ ಎನ್ನುವವರು ಮಾನಸಿಕವಾಗಿ ಹಿಂಸೆ ನೀಡಿದ್ದು, ಅಶ್ಲೀಲವಾಗಿ ಬೈದು ಕಿರುಕುಳ ನೀಡಿದ್ದಾರೆ. ಮಾವ ಯಮನಪ್ಪ ಜೀವ ಬೆದರಿಕೆ ಹಾಕಿರುವ ಬಗ್ಗೆ ಡೆತ್ Suggestion ತಿಪ್ಪಣ್ಣ ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share.
Leave A Reply

Exit mobile version