Close Menu
Davangere VijayaDavangere Vijaya
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog

Subscribe to Updates

Get the latest creative news from FooBar about art, design and business.

What's Hot

DG & IGP ಕಮೆಂಡೇಶನ್ ಡಿಸ್ಕ್ ಪದಕ ಸ್ವೀಕರಿಸಿದ ಎಸ್ಪಿ ಉಮಾಪ್ರಶಾಂತ್ : ಪದಕ ಸಿಕ್ಕಿದ್ದು ಇದಕ್ಕಾಗಿಯೇ?

24 May 2025

ಮಂಗಳವಾರದ ರಾಶಿ ಭವಿಷ್ಯ ಹೇಗಿದೆ ತಪ್ಪದೇ ನೋಡಿ?

20 May 2025

ಜ್ಞಾನದ ಹಸಿವ ತಣಿಸುವ ವ್ಯಾಸ ಗುರು ತೇಜಸ್ವಿ ಕಟ್ಟೀಮನಿ

19 May 2025
Facebook X (Twitter) Instagram
Facebook X (Twitter) Instagram
Davangere VijayaDavangere Vijaya
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog
Davangere VijayaDavangere Vijaya
Home»Blog»ಹರಪನಹಳ್ಳಿ : ಜಿಎಂ ಚಾರಿಟಿ ಫೌಂಡೇಶನ್ ನಿಂದ ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರ
Blog

ಹರಪನಹಳ್ಳಿ : ಜಿಎಂ ಚಾರಿಟಿ ಫೌಂಡೇಶನ್ ನಿಂದ ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

davangerevijaya.comBy davangerevijaya.com24 November 2023No Comments2 Mins Read
Facebook WhatsApp Twitter
Share
WhatsApp Facebook Twitter Telegram

ದಾವಣಗೆರೆ ; ಹರಪನಹಳ್ಳಿ ತರಳಬಾಳು ಕಲ್ಯಾಣ ಮಂಟಪದಲ್ಲಿ ಜಿ ಮಲ್ಲಿಕಾರ್ಜುನಪ್ಪ ಮತ್ತು ಶ್ರೀಮತಿ ಹಾಲಮ್ಮ ಚಾರಿಟಿ ಫೌಂಡೇಶನ್ ಭೀಮಸಮುದ್ರ ಮತ್ತು ಅಶ್ವಿನಿ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ, ಹಿಮೋಫೀಲಿಯ ಸೊಸೈಟಿ , ಲೈಫ್ ಲೈನ್ ಬ್ಲಡ್ ಬ್ಯಾಂಕ್, ಜಿಎಂ ಹಾಸ್ಪಿಟಲ್ ಬೆಂಗಳೂರು ಇವರುಗಳ ಸಹಯೋಗದಲ್ಲಿ ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ನಡೆಯಿತು.

ಆರೋಗ್ಯ ಮೇಳದಲ್ಲಿ ಭಾಗವಹಿಸಿದ್ದ ಜಿ.ಎಸ್.ಅನಿತ್

ಸಂಸದ, ಮಾಜಿ ಕೇಂದ್ರ ರಾಜ್ಯ ಸಚಿವ ಜಿಎಂ ಸಿದ್ದೇಶ್ವರ ಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು,
ಜಿ ಮಲ್ಲಿಕಾರ್ಜುನಪ್ಪ ಮತ್ತು ಶ್ರೀಮತಿ ಹಾಲಮ್ಮ ಚಾರಿಟಿ ಫೌಂಡೇಶನ್ ವತಿಯಿಂದ ಬಡವರು ಮತ್ತು ನಿರ್ಗತಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ, ಶಿಕ್ಷಣ ಮತ್ತು ಉದ್ಯೋಗ ಒದಗಿಸುತ್ತಾ ಬಂದಿದೆ.

ಇದಲ್ಲದೆ ಮಹಿಳೆಯರಿಗೆ ಸ್ವಂತ ಉದ್ದಿಮೆ ನಡೆಸಲು ಬೇಕಾದ ಸಂಪನ್ಮೂಲ, ಯುವ ಜನತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ತರಬೇತಿ ಮತ್ತು ಮಾರ್ಗದರ್ಶನನ್ನು ನೀಡುತ್ತಾ ಬಂದಿದ್ದು, ಇಂದು ಈ ಚಾರಿಟಿ ಫೌಂಡೇಶನ್ ಬೃಹದಾಕಾರದಲ್ಲಿ ಬೆಳೆದು ನಿಂತಿದೆ ಎಂದರು.

ಗುಣಮಟ್ಟದ ಆರೋಗ್ಯ ಎಲ್ಲರ ಹಕ್ಕು, ಆರೋಗ್ಯವೇ ಭಾಗ್ಯ, ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ, ಚಾರಿಟಿ ಫೌಂಡೇಶನ್ ವತಿಯಿಂದ ನಡೆಯುತ್ತಿರುವ ಈ ವೈದ್ಯಕೀಯ ಶಿಬಿರದಲ್ಲಿ ಪಾಲ್ಗೊಂಡು ಉಚಿತ ತಪಾಸಣೆಗೆ ಒಳಪಡಬೇಕೆಂದು ವಿನಂತಿಸಿ ಕೊಂಡರು.

ಮತ್ತೋರ್ವ ಅತಿಥಿ, ಬಿಜೆಪಿ ನಾಯಕ ಜಿ ಎಸ್ ಅನಿತ್ ಕುಮಾರ್ ಮಾತನಾಡಿ, ಸುಮಾರು 11 ನುರಿತ ವೈದ್ಯಕೀಯ ತಜ್ಞರುಗಳಿಂದ ವೈದ್ಯಕೀಯ ಪರೀಕ್ಷೆಗಳು ನಡೆಯುತ್ತಿದ್ದು, ಅಗತ್ಯವುಳ್ಳ ರೋಗಿಗಳಿಗೆ ಉಚಿತ ಔಷಧಿಗಳನ್ನು ವಿತರಿಸಲಾಗುವುದು ಮತ್ತು ಅಗತ್ಯತೆ ಕಂಡು ಬಂದಲ್ಲಿ ಉಚಿತವಾಗಿ ಆಪರೇಷನ್ ಟ್ರಸ್ಟ್ ವತಿಯಿಂದ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಶಿಬಿರದಲ್ಲಿ 350 ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದು, ರಕ್ತದೊತ್ತಡ, ರಕ್ತಹೀನತೆ, ಮಧುಮೇಹ, ಕಣ್ಣಿನ ಸೋಂಕು, ಮೂಲವ್ಯಾಧಿ, ಪಾಶ್ವವಾಯು, ಸೊಂಟ ಮತ್ತು ಕಾಲಿನ ಸಮಸ್ಯೆ ಸೇರಿದಂತೆ ವಿವಿಧ ಕಾಯಿಲೆಗಳ ತಪಾಸಣೆ ನಡೆಸಲಾಯಿತು.

ರೋಗಿಗಳಿಗೆ ಉಚಿತ ಔಷಧಿಗಳು, ಶಿಲೀಂಧ್ರ ನಿವಾರಕ ಮುಲಾಮುಗಳು, ಕೆಮ್ಮಿನ ಸಿರಪ್ ಮತ್ತು ವಿಟಮಿನ್ ಪೂರಕಗಳನ್ನು ಸಹ ಉಚಿತವಾಗಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಚಾರಿಟಿ ಫೌಂಡೇಶನ್ ವತಿಯಿಂದ ಸದಸ್ಯರಾದ ಶ್ರೀ ಪ್ರಭುದೇವ್, ಸಂಯೋಜಕರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿ ಆರ್, ನ್ಯಾಮತಿ ತಾಲೂಕಿನ ಮುಖಂಡರುಗಳು, ಆಶಾ ಕಾರ್ಯಕರ್ತರುಗಳು, ಸ್ವಯಂಸೇವಕರುಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

anith Davangere Featured mp siddesh ಜಿ.ಎಸ್ಅನಿತ್ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಹರಪನಹಳ್ಳಿ
Share. WhatsApp Facebook Twitter Telegram
davangerevijaya.com
  • Website

Related Posts

DG & IGP ಕಮೆಂಡೇಶನ್ ಡಿಸ್ಕ್ ಪದಕ ಸ್ವೀಕರಿಸಿದ ಎಸ್ಪಿ ಉಮಾಪ್ರಶಾಂತ್ : ಪದಕ ಸಿಕ್ಕಿದ್ದು ಇದಕ್ಕಾಗಿಯೇ?

24 May 2025

ಮಂಗಳವಾರದ ರಾಶಿ ಭವಿಷ್ಯ ಹೇಗಿದೆ ತಪ್ಪದೇ ನೋಡಿ?

20 May 2025

ಜ್ಞಾನದ ಹಸಿವ ತಣಿಸುವ ವ್ಯಾಸ ಗುರು ತೇಜಸ್ವಿ ಕಟ್ಟೀಮನಿ

19 May 2025
Leave A Reply Cancel Reply

Top Posts

ಹೈಕೋರ್ಟ್ ಆದೇಶ ತಪ್ಪು ತಿಳಿಯಲಾಗಿದೆ : ಸಿಪಿಐ ಮಂಜುನಾಥ್  ಅರ್ಜುನ್ ಲಿಂಗಾರೆಡ್ಡಿ

16 February 202412,633 Views

ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್

5 May 20259,231 Views

ಭದ್ರಾವತಿಯಲ್ಲಿ ಮೀಟರ್ ಬಡ್ಡಿಗೆ ಬಲಿಯಾಯಿತು ಜೀವ, ಪೊಲೀಸ್ ಇಲಾಖೆಯಲ್ಲಿದ್ದ ಅಣ್ಣನಿಂದ ಧಮಕಿ

2 April 20247,065 Views

ಪೊಲೀಸ್ ಠಾಣೆಗೆ ಕರೆತಂದಿದ್ದ ಆರೋಪಿ ಸಾವು, ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಬದುಕಿದ್ದೇ ಹೆಚ್ಚು…ಅಷ್ಟಕ್ಕೂ ಘಟನೆ ನಡೆದಿದ್ದೇನೂ?

25 May 20243,580 Views
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo
Don't Miss
ಕ್ರೈಂ ಸುದ್ದಿ

DG & IGP ಕಮೆಂಡೇಶನ್ ಡಿಸ್ಕ್ ಪದಕ ಸ್ವೀಕರಿಸಿದ ಎಸ್ಪಿ ಉಮಾಪ್ರಶಾಂತ್ : ಪದಕ ಸಿಕ್ಕಿದ್ದು ಇದಕ್ಕಾಗಿಯೇ?

By davangerevijaya.com24 May 20250

ನಂದೀಶ್ ಭದ್ರಾವತಿ, ದಾವಣಗೆರೆ ಅದೊಂದು ರಾತ್ರಿ ಇಡೀ ಚನ್ನಗಿರಿ ಪಟ್ಟಣ ಹೊತ್ತು ಉರಿಯುತ್ತಿತ್ತು, ಪೊಲೀಸ್ ಠಾಣೆಯನ್ನೇ ಕಿಡಿಗೇಡಿಗಳು ಧ್ವಂಸ ಮಾಡಿದ್ದರು..ನಗರದಲ್ಲಿ…

ಮಂಗಳವಾರದ ರಾಶಿ ಭವಿಷ್ಯ ಹೇಗಿದೆ ತಪ್ಪದೇ ನೋಡಿ?

20 May 2025

ಜ್ಞಾನದ ಹಸಿವ ತಣಿಸುವ ವ್ಯಾಸ ಗುರು ತೇಜಸ್ವಿ ಕಟ್ಟೀಮನಿ

19 May 2025

ದಾವಣಗೆರೆ ಎಸ್ಪಿ ಉಮಾಪ್ರಶಾಂತ್ ಗೆ ಸಿಕ್ಕಿತ್ತು ಈ ಪದಕ..ಅದು ಯಾಕಾಗಿ?

18 May 2025
About Us
About Us

Davanagere Vijaya Kannada News Portal

Facebook X (Twitter) Pinterest YouTube WhatsApp
Our Picks

DG & IGP ಕಮೆಂಡೇಶನ್ ಡಿಸ್ಕ್ ಪದಕ ಸ್ವೀಕರಿಸಿದ ಎಸ್ಪಿ ಉಮಾಪ್ರಶಾಂತ್ : ಪದಕ ಸಿಕ್ಕಿದ್ದು ಇದಕ್ಕಾಗಿಯೇ?

24 May 2025

ಮಂಗಳವಾರದ ರಾಶಿ ಭವಿಷ್ಯ ಹೇಗಿದೆ ತಪ್ಪದೇ ನೋಡಿ?

20 May 2025

ಜ್ಞಾನದ ಹಸಿವ ತಣಿಸುವ ವ್ಯಾಸ ಗುರು ತೇಜಸ್ವಿ ಕಟ್ಟೀಮನಿ

19 May 2025
Most Popular

ಹೈಕೋರ್ಟ್ ಆದೇಶ ತಪ್ಪು ತಿಳಿಯಲಾಗಿದೆ : ಸಿಪಿಐ ಮಂಜುನಾಥ್  ಅರ್ಜುನ್ ಲಿಂಗಾರೆಡ್ಡಿ

16 February 202412,633 Views

ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್

5 May 20259,231 Views

ಭದ್ರಾವತಿಯಲ್ಲಿ ಮೀಟರ್ ಬಡ್ಡಿಗೆ ಬಲಿಯಾಯಿತು ಜೀವ, ಪೊಲೀಸ್ ಇಲಾಖೆಯಲ್ಲಿದ್ದ ಅಣ್ಣನಿಂದ ಧಮಕಿ

2 April 20247,065 Views

Subscribe to Updates

Get the latest creative news from SmartMag about art & design.

Recent Posts
  • DG & IGP ಕಮೆಂಡೇಶನ್ ಡಿಸ್ಕ್ ಪದಕ ಸ್ವೀಕರಿಸಿದ ಎಸ್ಪಿ ಉಮಾಪ್ರಶಾಂತ್ : ಪದಕ ಸಿಕ್ಕಿದ್ದು ಇದಕ್ಕಾಗಿಯೇ?
  • ಮಂಗಳವಾರದ ರಾಶಿ ಭವಿಷ್ಯ ಹೇಗಿದೆ ತಪ್ಪದೇ ನೋಡಿ?
  • ಜ್ಞಾನದ ಹಸಿವ ತಣಿಸುವ ವ್ಯಾಸ ಗುರು ತೇಜಸ್ವಿ ಕಟ್ಟೀಮನಿ
  • ದಾವಣಗೆರೆ ಎಸ್ಪಿ ಉಮಾಪ್ರಶಾಂತ್ ಗೆ ಸಿಕ್ಕಿತ್ತು ಈ ಪದಕ..ಅದು ಯಾಕಾಗಿ?
  • ಅಪಘಾತದಲ್ಲಿ ಕುಟುಂಬವನ್ನೇ ಕಳೆದುಕೊಂಡ ಕ್ರಷರ್ ಮಾಲೀಕ : ನರಳಿ, ನರಳಿ ಮೃತಪಟ್ಟ ಒಂದು ವರ್ಷ, ನಾಲ್ಕುವರ್ಷದ ಮಗು…ಹಾಗಾದ್ರೆ ಆ ಘಟನೆ ಹೇಗಾಯ್ತು?
Davangere Vijaya
Facebook X (Twitter) Instagram Pinterest
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog
© 2025 Davangere Vijaya. the website designed and maintend by kInsta infotech bangalore

Type above and press Enter to search. Press Esc to cancel.