ದಾವಣಗೆರೆ : ಹರಿಹರ ನಗರ ಮತ್ತು ಗ್ರಾಮಾಂತರ ಮಂಡಲ ಚುನಾವಣೆ ಪ್ರಭಾರಿಯನ್ನಾಗಿ ರೈತ ಮುಖಂಡ ಕೊಳೇನಹಳ್ಳಿ ಬಿ ಎಂ ಸತೀಶ್ ರವರನ್ನು ನೇಮಕ ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್ ರಾಜಶೇಖರ್ ತಿಳಿಸಿದ್ದಾರೆ. ಬಿ.ಎಂ.ಸತೀಶ್ ರೈತ ಹೋರಾಟಗಾರರಾಗಿದ್ದು, ಸರಕಾರದ ರೈತ ವಿರೋಧಿ ನೀತಿ ಖಂಡಿಸಿ ಸಾಕಷ್ಡು ಬಾರಿ ಹೋರಾಟ ನಡೆಸಿದ್ದಾರೆ.
ಭದ್ರಾ ನೀರು ತಲುಪದೇ ಇದ್ದ ಸಮಯದಲ್ಲಿ ಬಿಎಂ ಸತೀಶ್ ದಾವಣಗೆರೆ ಬಂದ್ ಮಾಡಿದ್ದರು. ಅಲ್ಲದೇ ಸಾಮಾಜಿಕ ಹೋರಾಟದಲ್ಲಿ ಅವರು ಭಾಗಿಯಾಗುತ್ತಿದ್ದು ವಿಶೇಷ.