ದಾವಣಗೆರೆ : ಜಗದೀಶ್ ಶೆಟ್ಟರ್.. ಬಿಜೆಪಿಯ ಮಾಜಿ ಸಿಎಂ.. ಇವರು ಕಳೆದ ವರ್ಷ ಬಿಜೆಪಿಯ ಎಂಎಲ್ಎ ಟಿಕೆಟ್ ಸಿಗ್ಲಿಲ್ಲ ಅಂತೇಳಿ ಕಾಂಗ್ರೆಸ್ ಸೇರಿದ್ರು. ಆದ್ರೆ ಬಂದಷ್ಟೇ ವೇಗವಾಗಿ ಕೆಲ ತಿಂಗಳ ಹಿಂದೆ ಮತ್ತೆ ಬಿಜೆಪಿಗೆ ವಾಪಸ್ ಹೋಗಿದ್ರು. ಅಂದ್ರೆ ಇವರಿಗೆ ಈ ಸಲದ ಲೋಕಸಭಾ ಚುನಾವಣಾ ಟಿಕೆಟ್ ಕೊಡ್ತಾರೆ ಅನ್ನೋ ಆಫರ್ ಸಿಕ್ಕಮೇಲೆನೇ ಬಿಜೆಪಿಗೆ ವಾಪಸ್ ಆಗಿದ್ದು ಅನ್ನೋ ಮಾತುಗಳಿದ್ವು.
ಆದ್ರೀಗ ಬಿಜೆಪಿಯ 20 ಕ್ಷೇತ್ರಗಳ ಟಿಕೆಟ್ ಘೋಷಣೆಯಾಗಿದ್ದು, ಶೆಟ್ರು ನಿರೀಕ್ಷೆ ಇಟ್ಟಿದ್ದ ಹಾವೇರಿ ಇಲ್ವೇ ಧಾರವಾಡ ಕ್ಷೇತ್ರಗಳ ಬಿಜೆಪಿ ಟಿಕೆಟ್ ಕೈ ತಪ್ಪಿದೆ. ಹಾಗಾದ್ರೆ ಬಿಜೆಪಿಯಲ್ಲಿ ಜಗದೀಶ್ ಶೆಟ್ರನ್ನ ಹರಕೆಯ ಕುರಿ ಮಾಡ್ತಾಯಿದ್ದಾರಾ..? ರೆಸ್ಪೆಕ್ಟೂ ಇಲ್ಲ, ಎಂಪಿ ಟಿಕೆಟೂ ಕೊಟ್ಟಿಲ್ಲ. ಹಾಗಾದ್ರೆ ಜಗದೀಶ್ ಶೆಟ್ಟರ್ ಕಿವಿಗೆ ಕಾಲಿ ಫ್ಲವರ್ ಇಟ್ರಾ ಬಿಜೆಪಿ ನಾಯಕರು.., ಬರೀ ಪಕ್ಷದಿಂದ ಪಕ್ಕಕ್ಕೆ ಜಂಪ್ ಹೊಡೆದು ಹೈಕಮಾಂಡ್ ನಾಯಕರ ನಂಬಿಕೆಯನ್ನೇ ಕಳ್ಕೊಂಡ್ರಾ.? ಆ ಮೂಲಕ ಶೆಟ್ರ ರಾಜಕೀಯ ಜೀವನವೇ ಖತಂ ಆಯ್ತಾ..? ಅಷ್ಟಕ್ಕೂ ಬಿಜೆಪಿಯಲ್ಲಿ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಮಿಸ್ ಆಗಿದ್ದು ಹೇಗೆ ಗೊತ್ತಾ?
ಮಾಜಿ ಸಿಎಂ ಜಗದೀಶ್ ಶೆಟ್ಟರ್. ಪ್ರಭಾವಿ ಲಿಂಗಾಯತ ಮುಖಂಡ ಅಂತ್ಲೇ ಫೇಮಸ್ಸು. ಆದ್ರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಟಿಕೆಟ್ ಕೊಟ್ರೂ ಗೆಲ್ಲೋಕೆ ಆಗಿರ್ಲಿಲ್ಲ. ಅಂದ್ರೆ ಶೆಟ್ರಿಗೆ ಜಾತಿ ಬಲ ಇದ್ರೂ ವೈಯಕ್ತಿಕ ವರ್ಚಸ್ಸು ಇಲ್ಲ ಅನ್ನೋದು ಸಾಬೀತಾಗಿತ್ತು. ಇದೇ ಕಾರಣಕ್ಕೆ ಈ ಸಲ ಮತ್ತೆ ಬಿಜೆಪಿಗೆ ಯೂಟರ್ನ್ ಹೊಡೆದಿರೋ ಶೆಟ್ರಿಗೆ ಬಿಜೆಪಿಯಲ್ಲಿ ಎಂಪಿ ಟಿಕೆಟ್ ಸಿಕ್ಕಿಲ್ಲ ಎನ್ನಲಾಗುತ್ತಿದೆ.
ಇದ್ರಿಂದ ತೀವ್ರ ಅಸಮಾಧಾನಗೊಂಡಿರೋ ಜಗದೀಶ್ ಶೆಟ್ರು, ಮುಖ ಊದಿಸಿಕೊಂಡು ಕೂತಿದ್ದಾರೆ. ಇಂಟ್ರೆಸ್ಟಿಂಗ್ ವಿಚಾರ ಏನಂದ್ರೆ ಶೆಟ್ರ ಪ್ರಭಾವ ಇರೋ ಹಾವೇರಿ, ಧಾರವಾಡ ಕ್ಷೇತ್ರಗಳ ಟಿಕೆಟ್ ಕೊಡದ ಬಿಜೆಪಿ ಹೈಕಮಾಂಡ್ ಇದೀಗ ಶೆಟ್ರಿಗೆ ಇನ್ನು ಬಿಜೆಪಿ ಟಿಕೆಟ್ ಅನೌನ್ಸ್ ಆಗದೇ ಉಳಿದಿರೋ ಬೆಳಗಾವಿ ಟಿಕೆಟ್ ಕೊಡೋ ಭರವಸೆ ಕೊಟ್ಟಿದ್ಯಾಯಂತೆ..
ಈ ಬಗ್ಗೆ ಖುದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಶೆಟ್ರಿಗೆ ಫೋನ್ ಮಾಡಿ ಮುನಿಸಿಕೊಂಡ್ರೋ ಶೆಟ್ರನ್ನ ಸಮಾಧಾನ ಮಾಡಿದ್ದಾರಂತೆ. ಆದ್ರೆ ರಾಜ್ಯ ಬಿಜೆಪಿಯಲ್ಲೇ ಈ ಬಗ್ಗೆ ಕೆಲ ಅಪಸ್ವರಗಳು ಕೇಳಿಬರ್ತಾಯಿವೆ.. ಶೆಟ್ರಿಗೆ ಬೆಳಗಾವಿ ಬಿಜೆಪಿ ಟಿಕೆಟ್ ಕೂಡ ಸಿಗೋದು ಅನುಮಾನ ಎನ್ನಲಾಗುತ್ತಿದೆ.
ಬೆಳಗಾವಿಯಲ್ಲಿ ಶೆಟ್ರಿಗೆ ಸೋಲಿನ ಭೀತಿ!?
ಇದೇ ನೋಡಿ ನಂಬಿಸಿ ವಂಚಿಸೋದು ಅಂದ್ರೆ. ಜಗದೀಶ್ ಶೆಟ್ರು ಆಸೆ ಇಟ್ಕೊಂಡಿದ್ದದ್ದು ಹಾವೇರಿ ಇಲ್ಲವೇ, ಧಾರವಾಡ ಲೋಕಸಭಾ ಕ್ಷೇತ್ರಗಳ ಮೇಲೆ. ಆದ್ರೆ ಹೈಕಮಾಂಡ್ ಧಾರವಾಡದಿಂದ ಪ್ರಹ್ಲಾದ್ ಜೋಷಿಗೆ, ಹಾವೇರಿಯಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ಕೊಟ್ಟು ಶೆಟ್ರಿಗೆ ಆಸೆಗೆ ತಣ್ಣೀರು ಸುರಿದಿದೆ. ಈಗ ಶೆಟ್ರು ಮುನಿಸಿಕೊಂಡಿದ್ದು, ಇನ್ನೂ ಅನೌನ್ಸ್ ಆಗದೆ ಇಳಿದಿರೋ ಬೆಳಗಾವಿ ಟಿಕೆಟ್ ಕೊಡೋ ಭರವಸೆ ಕೊಟ್ಟಿದೆ. ಆದ್ರೆ ಬೆಳಗಾವಿಯಲ್ಲಿ ಶೆಟ್ರ ಪ್ರಭಾವ ಏನೇನೂ ನಡೆಯಲ್ಲ.
ಅಲ್ಲಿ ಕಾಂಗ್ರೆಸ್ನಿಂದ ಜಾರಕಿಹೊಳಿ ಕುಟುಂಬದ ಯಾರಾದರೊಬ್ಬರಿಗೆ ಟಿಕೆಟ್ ಕೊಟ್ರೆ ಪಕ್ಷ ಭೇದ ಮರೆತು ಜಾರಕಿಹೊಳಿ ಕುಟುಂಬ ನಾಯಕರು ತಮ್ಮ ಕುಟುಂಬದ ಸದಸ್ಯರನ್ನ ಗೆಲ್ಲಿಸಿಕೊಳ್ಳಲು ಶ್ರಮಿಸುತ್ತಾರೆ. ಇದ್ರಿಂದ ಶೆಟ್ರು ಬೆಳಗಾವಿ ಟಿಕೆಟ್ ಆಫರ್ ಅನ್ನ ತಿರಸ್ಕರಿಸೋ ಸಾಧ್ಯತೆ ಇದೆ. ಈ ಬಗ್ಗೆ ಅಮಿತ್ ಶಾ ಆಫರ್ ಕೊಟ್ಟಾಗ. ನನಗೆ ಒಂದ್ ಸ್ವಲ್ಪ ಟೈಂ ಕೊಡಿ. ಯೋಚ್ನೆ ಮಾಡ್ತೀನಿ ಅಂದಿದ್ದಾರಂತೆ.
ಅದೇನೇ ಇರ್ಲಿ, ಜಗದೀಶ್ ಶೆಟ್ರು ತಾವೇ ಬುದ್ಧಿವಂತರು. ತಾವು ದೊಡ್ಡ ಲೀಡರ್ ಅಂತ ಅಂದ್ಕೊಂಡಿದ್ರು. ಜೊತೆಗೆ ನಾನು ಮಾಜಿ ಸಿಎಂ. ನನಗೆ ಈ ಸಲ ಬಿಜೆಪಿ ಮೋಸ ಮಾಡಲ್ಲ. ಖಂಡಿತ ಹಾವೇರಿ ಇಲ್ಲವೇ, ಧಾರವಾಡ ಲೋಕಸಭಾ ಕ್ಷೇತ್ರಗಳ ಪೈಕಿ ಒಂದು ಟಿಕೆಟ್ ಪಕ್ಕಾ ಕೊಡ್ತಾರೆ ಅಂತಾನೇ ನಂಬಿದ್ರು. ಆದ್ರೆ ಶೆಟ್ರು ಬಯಸಿದ್ಯಾವುದೂ ಆಗ್ಲಿಲ್ಲ. ಬಿಜೆಪಿಗೆ ವಾಪಸ್ ಆದ ಶೆಟ್ರ ಕೈಗೆ ಹೈಕಮಾಂಡ್ ದೊಡ್ಡ ಚೆಂಬು ಕೊಟ್ಟಿದೆ. ಶೆಟ್ರು ಈಗ ಮತ್ತೆ ಕಾಂಗ್ರೆಸ್ಗೆ ಯೂಟರ್ನ್ ಹೊಡೆಯೋಕೂ ಆಗಲ್ಲ. ಬಿಜೆಪಿಯಲ್ಲಿ ಕೆ.ಎಸ್ ಈಶ್ವರಪ್ಪನವರ ಥರ ಸೈಡ್ಲೈನ್ ಆದ ನಾಯಕನಾಗಿ ಉಳಿದುಬಿಡಬೇಕಷ್ಟೇ.. ಹಾಗಿರೋದಕ್ಕಿಂತ ಹೆಚ್ಚಾಗಿ ರಾಜಕೀಯ ಸನ್ಯಾಸ ಸ್ವೀಕರಿಸಿದ್ರೆ ಒಳಿತು ಅನ್ನೋ ಮಾತುಗಳೂ ಕೇಳಿ ಬರ್ತಾಯಿವೆ. ಜಗದೀಶ್ ಶೆಟ್ರಿಗೆ ಬಿಜೆಪಿಯಲ್ಲಿ ಎದುರಾಗಿರೋ ಈ ದುಸ್ಥಿತಿಯ ಬಗ್ಗೆ ನೀವೇನಂತಿರಾ?