ಭದ್ರಾವತಿ: ಎಲ್ಲಾ ವರ್ಗದ ಜನರ ಪ್ರೀತಿಗಳಿಸಿ, ಕಲೆಯನ್ನು ಉಸಿರಾಗಿಸಿಕೊಂಡಿದ್ದ ಕಲಾವಿದ ಹಫೀಜ್, ಕೇವಲ ಕಲಾವಿದನಾಗಿರದೆ ವೃತ್ತಿಯ ನಡುವೆಯೇ ದುಡಿದ ಬಹುಪಾಲು ಹಣ ಸಮಾಜಸೇವೆಗೆ ವಿನಿಯೋಗಿಸಿದ ಮಾದರಿ ವ್ಯಕ್ತಿಯಾಗಿದ್ದಾರೆ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್.ರಾಜು ಹೇಳಿದರು.
ನಗರದ ಬಿ.ಎಚ್.ರಸ್ತೆಯ ಕಾಮತ್ ಬೇಕರಿ ಮೇಲ್ಬಾಗದ ಸಭಾಂಗಣದಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ಹಾಗು ತಾಲ್ಲೂಕು ಕುಂಚ ಕಲಾವಿದರ ಸಂಘದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕುಂಚ ಕಲಾವಿದ ದಿವಂಗತ ಹಫೀಜ್ ಉರ್ ರಹ್ ಮಾನ್ ಸವಿನೆನಪು ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದ ಪ್ರಾಮಾಣಿಕ ವ್ಯಕ್ತಿಗಳನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ಶ್ರಮಿಸುತ್ತಿದೆ. ಕಲಾವಿದ ಹಫೀಜ್ ಕೇವಲ ಒಂದು ಸಮಾಜಕ್ಕೆ ಸೀಮಿತವಾಗದೆ ಎಲ್ಲ ವರ್ಗದವರ ಜೊತೆ ಬೆರೆತು ಸಮಾಜಸೇವಕರಾಗಿ ಗುರುತಿಸಿಕೊಂಡಿದ್ದಂಥ ವ್ಯಕ್ತಿ.ಮಾಡುವ ವೃತ್ತಿಯಲ್ಲಿ ಕ್ರಿಯಾಶೀಲತೆಯಿಂದ ಗುರುತಿಸಿ ಕೊಂಡಿದ್ದ ವ್ಯಕ್ತಿ ಎಂದರು.
ಹಫೀಜ್ ಕುಂಚಕಲಾವಿದರಾದರೂ ಸಮಾಜಸೇವಕರಾಗಿ ಅನೇಕ ಜನಪರ ಕಾರ್ಯಗಳನ್ನು ನಿರ್ವಹಿಸಿ ಸಾಂಸ್ಕೃತಿಕ ವ್ಯಕ್ತಿಯಾಗಿದ್ದರು. ಅಲ್ಲದೆ 15ಕ್ಕೂ ಹೆಚ್ಚು ಕೆಲಸಗಾರರಿಗೆ ವೃತ್ತಿ ನೃಪುಣ್ಯತೆ ಕಲಿಸುವುದರ ಜೊತೆಗೆ ಸ್ವಂತ ಉದ್ಯೋಗ ನಡೆಸಲು ತಿಳಿಸಿ ಅನೇಕರ ಮಾರ್ಗದರ್ಶಕರಾಗಿದ್ದರು ಎಂದರು.
ಮುಖಂಡರಾದ ಫೀರ್ ಷರೀಪ್ ಮಾತನಾಡಿ, ಹಫೀಜ್ ರಾಜಕಾರಣಕ್ಕೆ ಹಾತೊರೆಯದ ನಿಸ್ವಾರ್ಥ ಸಮಾಜಸೇವಕ. ಈತ ಗಳಿಸಿರುವ ಜನಬಳಕೆಯ ಆತನ ಅಂತಸ್ತು. ಆಮೀಷಗಳಿಗೆ ಒಳಗಾಗದ ಸಾಜನ್ಯಯುತ ವ್ಯಕ್ತಿ ಎಂದರು.ಶಿಮಕ್ಷಕ ಹಾರೋನಹಳ್ಳಿ ಸ್ವಾಮಿ, ಎಚ್.ಜಿ.ನಾಗೇಶ್, ಧಾರ್ಮಿಕಗುರುಗಳು ಸೇರಿದಂತೆ ಅನೇಕರು ಹಫೀಜ್ ಜೀವನದ ಬಗ್ಗೆ ಸ್ಮರಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಹಿರಿಯ ಕಾರ್ಮಿಕ ಮುಖಂಡ ಡಿ.ಸಿ.ಮಾಯಣ್ಣ ಹಫೀಜ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಚಾಲನೆ ನೀಡಿದರು.
ಅನಂತ ರಾಮು, ಚಲನಚಿತ್ರನಟ ಹಾಗು ರಂಗಕರ್ಮಿ ಎಸ್.ಆಂಜನೇಯ, ಮುಖಂಡರುಗಳಾದ ಅಮೀರ್ ಜಾನ್, ಶಶಿಕುಮಾರ್ ಎಸ್ ಗೌಡ, ಬಸವರಾಜಯ್ಯ, ಕುಂಚಕಲಾವಿದರಾದ ಸುಬ್ಬಣ್ಣ, ಮಹಮದ್ ಸಮೀಉಲ್ಲಾ, ಬಿ.ಗುರು, ವಿಷ್ಣು ಸೇರಿದಂತೆ ಹಲವರು ಹಾಜರಿದ್ದರು