ಶಿವಮೊಗ್ಗ: ಮಾಜಿ ಪ್ರಧಾನಿ, ಜೆಡಿಎಸ್ ಹೆಚ್.ಡಿ. ದೇವೇಗೌಡ ಅವರ 92ನೇ ಹುಟ್ಟುಹಬ್ಬದ ಅಂಗವಾಗಿ ನಗರದ ರವೀಂದ್ರ ನಗರದ ಶ್ರೀ ಗಣಪತಿ ದೇವಸ್ಥಾನದಲ್ಲಿ ಜೆಡಿಎಸ್ ನಗರಾಧ್ಯಕ್ಷ ದೀಪಕ್ ಸಿಂಗ್ ಅವರ ನೇತೃತ್ವದಲ್ಲಿ ಶಿವಮೊಗ್ಗ ನಗರ ಜೆಡಿಎಸ್ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ದೇವೇಗೌಡರ ಹೆಚ್ಚಿನ ಅರೋಗ್ಯಕ್ಕಾಗಿ ಪ್ರಾರ್ಥಿಸಿ ಭಕ್ತಾದಿಗಳಿಗೆ ಸಿಹಿ ವಿತರಣೆ ಮಾಡಿದರು.
ಇದೇ ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಾ. ಕಡಿದಾಳು ಗೋಪಾಲ್, ಮಾಜಿ ಶಾಸಕ, ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಸಿದ್ದಪ್ಪ, ಪ್ರಮುಖರಾದ ಸಂಗಯ್ಯ, ಕೃಷ್ಣಪ್ಪ ಗೋವಿಂದ್ ದಯಾನಂದ್,ಚಂದ್ರು, ಶ್ಯಾಮ್ ಸಿದ್ದೇಶ್, ಪ್ರಶಾಂತ್ ಮಹಿಳಾ ಮುಖಂಡರಾದ ಜ್ಯೋತಿ, ಲಕ್ಷ್ಮಿ ನರಸಿಂಹ, ಯುವ ನಗರ ಅಧ್ಯಕ್ಷ ಸಂಜಯ್ ಕಶ್ಯಪ್ ನಿಹಾಲ್ ಖಾನ್ ಅರುಣ್ ಆಧಿತ್ಯನ್ ಇದ್ದರು.
(ಫೋಟೋ ಇದೆ)