ಘಟ್ಟದ ಕೆಳ ಪ್ರದೇಶದಲ್ಲಿ ಅಡಕೆ ಬೆಳೆಗೆ ಹೆಚ್ಚು ಹಾನಿ. ಚುಕ್ಕೆ ರೋಗ ಭಾದೆ ನಿವಾರಣಕ್ಕೆ ಸರ್ಕಾರ ಬದ್ದ.

ಬೆಳಗಾವಿ/ ದಾವಣಗೆರೆ

ಅಡಕೆ ಬೆಳೆಗೆ ಚುಕ್ಕೆ ರೋಗ ಹಾಗೂ ಇತರೆ ರೋಗದಿಂದ ಬೆಳೆಯ ಇಳುವರಿ ಕುಂಠಿತವಾಗಿರುವುದು ಗಮನಕ್ಕೆ ಬಂದಿದ್ದು ರೋಗ ನಿವಾರಣೆಗೆ 50 ಲಕ್ಷ ಮಂಜೂರು ಮಾಡಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್ ಅವರು ತಿಳಿಸಿದರು.

ಬೆಳಗಾವಿಯ ಸುವರ್ಣ ಸೌಧದಲ್ಲಿನ ಚಳಿಗಾಲದ ಅಧಿವೇಶನದಲ್ಲಿ ಶಾಸಕರುಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಬದಲಾದ ಹವಾಮಾನ ವೈಪರೀತ್ಯಗಳಿಂದ 53 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬೆಳೆದ ಅಡಕೆ ಬೆಳೆಗೆ ಎಲೆ ಚುಕ್ಕೆ ರೋಗ ಹಾಗೂ ಇತರೆ ಭಾದೆ ಕಾಣಿಸಿಕೊಂಡಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಹಲವಾರು ಸಭೆಗಳನ್ನು ಸಂಬಂಧ ಪಟ್ಟವರೊಂದಿಗೆ ಮಾಡಲಾಗಿದೆ. ರೋಗದ ನಿವಾರಣೆಗೆ ಔಷಧ ಕಂಡು ಹಿಡಿಯಲು ಸೂಚಿಸಲಾಗಿದ್ದು ಶಿವಮೊಗ್ಗ ವಿವಿಗೆ 50 ಲಕ್ಷ ರೂಪಾಯಿ ಅನುದಾನ ನೀಡಲಾಗಿದೆ ಎಂದರು.

ಶೇ.18 ರಷ್ಟು ಹವಮಾನ ವೈಪರೀತ್ಯದಿಂದಾಗಿ ಘಟ್ಟ ಪ್ರದೇಶದ ಕೆಳ ಭಾಗದಲ್ಲಿ ಅಡಕೆ ಬೆಳೆಯುವ ಪ್ರದೇಶದಲ್ಲಿ ಅಡಕೆಗೆ ಎಲೆ ಚುಕ್ಕಿರೋಗ, ಚುಕ್ಕಿರೋಗ ಇದ್ದು, ಇದು ಅಡಕೆ ಬೆಳೆಯುವ ಪ್ರದೇಶಕ್ಕೂ ಆವರಿಸಿದೆ. ಅಡಕೆ ಬೆಳೆ ರೋಗ ತಡೆ ಸೇರಿದಂತೆ ಬೆಳೆಯ ರಕ್ಷಣೆಗೆ, ಸಬ್ಸಿಡಿಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು ಎರಡು ಹಂತದಲ್ಲಿ ರೂ. 225 ಕೋಟಿ ಅನುದಾನ ಬರಲಿದೆ. ಅಡಕೆ ಬೆಳೆಗಾರರ ಹಿತ ಕಾಪಾಡಲು ಸರ್ಕಾರ ಬದ್ದವಾಗಿದೆ ಎಂದು ಪ್ರಶ್ನಿಸಿದ ಶಾಸಕರುಗಳಿಗೆ ತಿಳಿಸಿದರು.

Share.
Leave A Reply

Exit mobile version