ಭದ್ರಾವತಿ: ಹಣಕ್ಕಾಗಿ ಮೊಮ್ಮಗನೇ ತನ್ನ ಅಜ್ಜಿಯನ್ನು ಕೊಲೆ ಮಾಡಿರುವ ಘಟನೆ ತಾಲೂಕಿನ ಅಂತರಗಂಗೆ ಗ್ರಾಮದ ಭೋವಿ ಕಾಲೋನಿಯಲ್ಲಿ ನಡೆದಿದೆ.ರಾಮಕ್ಕ (72) ಕೊಲೆಯಾದ ವೃದ್ದೆ ಎಂದು ಗುರುತಿಸಲಾಗಿದೆ.
ಮೊಮ್ಮಗ ಚೇತನ್ ಹಾಗು ಇತರರು ಕೊಲೆ ಮಾಡಿರುವುದು ಪೊಲೀಸರಿಗೆ ನೀಡಿರುವ ದೂರಿನಿಂದ ತಿಳಿದು ಬಂದಿದೆ.ರಾಮಕ್ಕನವರ ಪುತ್ರ ಗೋವಿಂದ ಜೆಸಿಬಿ ಖರೀದಿಸಿದ್ದು, ಜೆಸಿಬಿ ಕಂತು ಕಟ್ಟಲು ರಾಮಕ್ಕರಿಗೆ 20 ಸಾವಿರ ರೂ. ಹಣ ನೀಡಿ ದಾವಣಗೆರೆಗೆ ತೆರಳಿದ್ದಾರೆ.
ಈ ವಿಚಾರ ಮೊಮ್ಮಗ ಚೇತನ್ ತಿಳಿದಿದ್ದು, ಅಜ್ಜಿ ಮಲಗಿದ್ದಾಗ ಆಕೆಯನ್ನು ಕೊಲೆ ಮಾಡಿ ಅಜ್ಜಿಯ ಸೊಂಟದಲ್ಲಿದ್ದ 20 ಸಾವಿರ ರೂ ಮತ್ತು ಕಿವಿ ಓಲೆ ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಚೇತನ್ ರಾಮಕ್ಕನ ಇನ್ನೊಬ್ಬ ಪುತ್ರ ಹನುಮಂತಪ್ಪನವರ ಪುತ್ರನಾಗಿದ್ದು, ಪ್ರಕರಣ ಸಂಬಂಧ ಗೋವಿಂದ ಅವರು ಚೇತನ್. ಭರತ್, ರೋಹಿತ್, ಆದರ್ಶ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.