ದಾವಣಗೆರೆ: ದಾವಣಗೆರೆಯಲ್ಲಿ  ನಾನು ಕೂಡ ಸಿದ್ದರಾಮೋತ್ಸವ ಮಾಡುತ್ತೇನೆ ಎಂದು ದಾವಣಗೆರೆಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿ ಜಿ.ಬಿ ವಿನಯಕುಮಾರ್ ಹೇಳಿದ್ದಾರೆ.

ನಮ್ಮ ದಾವಣಗೆರೆವಿಜಯ.ಕಾಂ ನೊಂದಿಗೆ ಕೆಲವೊತ್ತು‌ ಬಿಡುವು ಮಾಡಿಕೊಂಡು ಮಾತನಾಡಿದ ವಿನಯ್ ಕುಮಾರ್, ಬೆಣ್ಣೆನಗರಿಯಲ್ಲಿ ನಡೆದ ಸಿದ್ದರಾಮೋತ್ಸವ ಇತಿಹಾಸ ಸೃಷ್ಟಿಸಿದೆ. ಆದ್ದರಿಂದ ನಾನು ಕೂಡ ದಾವಣಗೆರೆಯಲ್ಲಿ ಮತ್ತೊಮ್ಮೆ ನಾನು ಸಿದ್ದರಾಮೋತ್ಸವ ಮಾಡುತ್ತೇನೆ. ಇಲ್ಲೂ ಕೂಡ ಸಿಎಂ ಸಿದ್ದರಾಮಯ್ಯ ಅಭಿಮಾನಿಗಳು ಸಾಕಷ್ಟೀದ್ದು, ಅವರಿಗೋಸ್ಕರ ನಾನೂ ಕೂಡ ಸಿದ್ದರಾಮೋತ್ಸವ ಮಾಡಲು ರೆಡಿ ಎಂದರು.

ನನ್ನದು ಪವರ್ ಪಾಲಿಟಿಕ್ಸ್ ಅಲ್ಲ ಅಭಿವೃದ್ಧಿ ರಾಜಕಾರಣ

ದಾವಣಗೆರೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ನನ್ನ ಎದುರು ನರೇಂದ್ರ ಮೋದಿಯವರು ಬಂದು ಸ್ಪರ್ಧಿಸಿದ್ದರೂ ನಾನು ಸೋಲಿಸುತ್ತೇನೆ ಆ ವಿಶ್ವಾಸ ನನಗಿದೆ. ನನ್ನದು ಪವರ್ ಪಾಲಿಟಿಕ್ಸ್ ಅಲ್ಲ, ಅಭಿವೃದ್ಧಿ ರಾಜಕಾರಣ. ನನಗೆ ಯಾರೂ ಸಹ ಕಾಂಪಿಟೇಟರ್ಸ್ ಗಳು ಇಲ್ಲ ಎಂಬುದು ನನ್ನ ಅಭಿಪ್ರಾಯ.

ನನಗೆ ನಾನೇ ಕಾಂಪಿಟೇಟರ್

ಪ್ರಸ್ತುತ ರಾಜಕಾರಣ ಗಮನಿಸಿದರೆ ದಾವಣಗೆರೆ ಕ್ಷೇತ್ರದಲ್ಲಿ ವಿನಯ್ ಕುಮಾರ್ ಎಂಬ ಹೆಸರೇ ಕೇಳಿಬರುತ್ತಿದೆ. ಹಾಗಾಗಿ ನನಗೆ ನಾನೇ ಕಾಂಪಿಟೇಟರ್ ಅನಿಸುತ್ತಿದೆ. ನನಗೆ ಶಾಮನೂರು ಕುಟುಂಬದವರಿಂದ ಯಾವ ಅಡ್ಡಿ ಇಲ್ಲ ಅನಿಸುತ್ತದೆ .  ೨೦೦೦ದ ಕಾಲಘಟ್ಟಕ್ಕೂ , ಪ್ರಸ್ತುತ 2023 ರ ಕಾಲಕ್ಕೂ ಸಾಕಷ್ಟು ವ್ಯತ್ಯಾಸ ಹಾಗೂ ಬದಲಾವಣೆಗಳಾಗಿವೆ.

ಆಗ ಯುವಕರಿದ್ದರು ಆದರೆ ಅಷ್ಟು  ಅವೇರ್ ನೆಸ್ ಇರಲಿಲ್ಲ. ಈಗಿನ ಯುವಕರು ವಿದ್ಯಾವಂತರು ಸಾಕಷ್ಟು ತಿಳಿವಳಿಕೆ ಹೊಂದಿದ್ದಾರೆ. ಹಾಗಾಗಿ ಇಂದಿನ ರಾಜಕಾರಣ ಬದಲಾಗುತ್ತಿದೆ. ಇದಕ್ಕೆ ನಾನೇ ಸ್ಪಷ್ಟ ಉದಾಹರಣೆ‌. ಕಾರಣ ಇಂದು ನಾನು ದಾವಣಗೆರೆ ಜಿಲ್ಲೆಯ ಕ್ಷೇತ್ರಕ್ಕೆ ಹೋದಾಗ ಸಾಕಷ್ಟು ಜನ ನನ್ನನ್ನು ಗುರುತಿಸುತ್ತಾರೆ.  ಹೆಗಲಮೇಲೆ ಹೊತ್ತು ಅಭಿಮಾನ ವ್ಯಕ್ತಪಡಿಸುತ್ತಾರೆ. ಮನೆ ಮಗನಂತೆ ನೋಡುತ್ತಾರೆ. ಬದಲಾದ ರಾಜಕಾರಣ ಎಂದರೆ ಇದೇ ಅಲ್ವವೇ ಎಂದರು.

ದೊಡ್ಡ ಪಡೆಯೇ ನಿರ್ಮಾಣ

ನನ್ನ ಗೆಲುವಿಗೆ  ದೊಡ್ಡ ಪಡೆಯೇ ನಿರ್ಮಾಣವಾಗುತ್ತಿದೆ. ಆದ್ದರಿಂದ ಕ್ಷೇತ್ರದಲ್ಲಿ ಬೇರೆಯವರು ಬರಲು ಹತ್ತಾರು ಬಾರಿ ಯೋಚನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿನಯ್ ಕುಮಾರ್ ಹೇಳಿದರು.

ಶಾಮನೂರು ಕುಟುಂಬದ ಪ್ರೀತಿ ವಿಶ್ವಾಸಗಳಿಸುತ್ತೇನೆ

ಶಾಮನೂರು ಕುಟುಂಬದವರ ಪ್ರೀತಿ ಹಾಗೂ ವಿಶ್ವಾಸ ಬೇಕಿದೆ. ಅವರು ದಾವಣಗೆರೆ ನಿರ್ಮಾಣ ಮಾಡಿದವರು ಮೂವತ್ತು ವರ್ಷ ದಾವಣಗೆರೆ ನಡೆಸಿದವರು. ಅವರ ನೆರಳಿನಲ್ಲಿ ಬೆಳೆದಿದ್ದೇನೆ. ಅವರು ದಾವಣಗೆರೆ ಜಿಲ್ಲೆಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದಾರೆ. ಅವರನ್ನು ಎದುರು ಹಾಕಿಕೊಂಡು ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ.  ಮುಂದಿನ ದಿನಗಳಲ್ಲಿ ಅವರನ್ನು ಭೇಟಿಯಾಗಿ ಅವರ ಮಾರ್ಗದರ್ಶನ ಪಡೆಯಲಿದ್ದೇನೆ. ದಾವಣಗೆರೆ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ ಎಂಬುದು ವಿನಯ್ ಅಭಿಪ್ರಾಯ.

ಜಿಲ್ಲಾ ಉಸ್ತುವಾರಿ ಸಚಿವರು ನನ್ನ ಗುರುಗಳು

ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ ಅವರು ನನಗೆ ಗುರುಗಳಿದ್ದಂತೆ. ಈ ಹಿಂದೆ ನಾನು ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದಾಗ, ಅವರು ನನಗೆ ಹೇಳಿದ್ದರು. ಕೆಲಸ ಮಾಡಿ‌ಬಂದು ಟಿಕೇಟ್ ಕೇಳು ಎಂದು.  ಅದೇ ರೀತಿ ನಾನು ಕೆಲಸ ಮಾಡಿ ಅವರ ಬಳಿ ಹೋಗುತ್ತೇನೆ ಎಂಬುದು ವಿನಯ್ ವಿಶ್ವಾಸ.

ಕೆಲಸ ಎಂದರೆ ಪಕ್ಷ ಕಟ್ಟುವುದು

ಕೆಲಸ ಎಂದರೆ ನನ್ನ ಪ್ರಕಾರ ಪಕ್ಷ‌ಕಟ್ಟುವುದು ಹಾಗೂ ಪಕ್ಷ ಬೆಳೆಸುವುದಾಗಿದೆ . ಜೊತೆಗೆ ಸಮಾಜವನ್ನು ಒಗ್ಗೂಡಿಸುವುದು ಅವರಲ್ಲಿ ಅವೇರ್ನೆಸ್ ಮೂಡಿಸುವುದು. ಜೊತೆಗೆ ಕ್ಷೇತ್ರದಲ್ಲಿ ಬೆಳಗಿನಿಂದ ರಾತ್ರಿಯವರೆಗೂ  ಕ್ಷೇತ್ರ ಸಂಚಾರ ಮಾಡುತ್ತಲೇ ಇದ್ದೇನೆ ಹಾಗೂ ಅದರಿಂದ ಸಾಕಷ್ಟು ಅಭಿಪ್ರಾಯ ಬರುತ್ತಿದೆ.

ಜನರು ಕೂಡ ಗುರುತಿಸುತ್ತಿದ್ದಾರೆ. ಆದರೂ ನನಗೆ ತೃಪ್ತಿ ದೊರೆತಿಲ್ಲ. ಇನ್ನೂ ಸಾಕಷ್ಟು ಗ್ರಾಮಗಳಿಗೆ ಭೇಟಿ ನೀಡಬೇಕು. ಜನರ ಕಷ್ಟ ಸುಖ ಆಲಿಸಬೇಕು. ಅವರ ಸಮಸ್ಯೆಗಳನ್ನು ಪರಿಹರಿಸಬೇಕು. ಮಾಡುವ ಕೆಲಸಗಳು ಬಹಳಷ್ಟು ಇವೆ .ಹಾಗಾಗಿ ನಾನು ಅಂದುಕೊಂಡಿದ್ದನ್ನು ಸಾಧಿಸಿದ ಬಳಿಕವೇ ಸಚಿವರ ಬಳಿ ಹೋಗಿ ನನ್ನ ರೆಕಾರ್ಡ್ ಅವರ ಮುಂದೆ ಇಡುವೆ. ಮಾಡಿರುವ ಕೆಲಸಗಳನ್ನು ಅವರ ಮುಂದೆ ಇಡುವೆ. ಹಾಗೂ‌ ನನಗೆ ಟಿಕೇಟ್ ನೀಡಲು ಶಿಫಾರಸ್ಸು ಮಾಡುವಂತೆ ಕೇಳುವೆ ಎಂದರು.

ಅಹಿಂದ ವರ್ಗಕ್ಕೆ ಎಂಪಿ ಟಿಕೆಟ್ ನೀಡಲಿ

ಕಳೆದ ಮೂವತ್ತು ವರ್ಷದಿಂದ ದಾವಣಗೆರೆ ಏನಾಗಿದೆ ಎಂದು ಜನರಿಗೆ ಗೊತ್ತಿದೆ. ದಾವಣಗೆರೆ ಹಿಂದುಳಿದ ಕ್ಷೇತ್ರ. ಸಾಮಾಜಿಕ ನ್ಯಾಯದ ಅಡಿಯಲ್ಲಿ ಅಹಿಂದ ವರ್ಗಕ್ಕೆ ಟಿಕೇಟ್ ನೀಡಬೇಕು. ಕಾರಣ ಶೇ ೭೦ ರಷ್ಟು ಅಹಿಂದ ವರ್ಗದವರೇ ಇದ್ದಾರೆ.  ಅಹಿಂದ ವರ್ಗಕ್ಕೆ ಟಿಕೇಟ್ ಸಿಗದ ಕಾರಣ ಅದು ಬಿಜೆಪಿಯವರಿಗೆ ವರವಾಗಿದೆ ಎಂಬುದು ನನ್ನ ವೈಯುಕ್ತಿಕ ಅಭಿಪ್ರಾಯ.

ನಾನು ಯಾವುದೇ ಜಾತಿವಾದಿಯಲ್ಲ . ನಾನು ಸಂಪೂರ್ಣ ಜಾತ್ಯಾತೀತ. ನಾನು ಬಂದಿರುವುದು ಶಿಕ್ಷಣರಂಗದಿಂದ. ದಾವಣಗೆರೆ ಕ್ಷೇತ್ರದಲ್ಲಿ ಇರುವ ಜನಸಂಖ್ಯೆ ಯ ಆಧಾರದ ಮೇಲೆ ಸೂಕ್ತ ಅಭ್ಯರ್ಥಿ ಇಷ್ಟು ವರ್ಷ ಇರಲಿಲ್ಲ. ಆ ವರ್ಗಕ್ಕೆ ಅವಕಾಶ ಸಿಗಬೇಕು ಎಂಬುದು ನನ್ನ ಅಭಿಪ್ರಾಯ . ಒಂದು ವೇಳೆ ನನಗೆ ಟಿಕೇಟ್ ಸಿಕ್ಕರೆ ದೊಡ್ಡ ಮಾರ್ಜಿನ್ ನಲ್ಲಿ ಗೆಲುವು ಪಡೆಯಲಿದ್ದೇನೆ .ನನಗೆ ವಿಶ್ವಾಸ ಇದೆ. ಲಿಂಗಾಯತ ವರ್ಗ ಸೇರಿದಂತೆ ಎಲ್ಲಾ ಜನಾಂಗದವರು ನನಗೆ ಬೆಂಬಲ ನೀಡಲಿದ್ದಾರೆ ಎಂಬ ವಿಶ್ವಾಸ ಇದೆ.  ಎಲ್ಲರು ವಿದ್ಯಾವಂತರು ಇ ಇರುವುದರಿಂದ ಯೋಚಿಸಿ ಗೆಲ್ಲಿಸಬಹುದು. ನನಗೆ ಟಿಕೇಟ್ ನೀಡಿದರೆ ಲಿಂಗಾಯತರು ಹಾಗೂ ಅಹಿಂದ ವರ್ಗ ಇಬ್ಬರೂ ಒಂದಾಗಿ ಗೆಲುವಿಗೆ ಕಾರಣವಾಗಬಹುದು ಎಂದರು.

ಎರಡು ಪಕ್ಷದಲ್ಲಿ ಲಿಂಗಾಯಿತ ವರ್ಗಕ್ಕೆ ಟಿಕೆಟ್ ನೀಡಿದರೆ ಅಹಿಂದ ಮತಗಳು ಸಿಗೋದಿಲ್ಲ

ಎರಡೂ ಪಕ್ಷದಲ್ಲಿ ಲಿಂಗಾಯತ ವರ್ಗಕ್ಕೆ ಟಿಕೇಟ್ ನೀಡಿದರೆ ಅಹಿಂದ ಮತಗಳು ಎರಡೂ ಪಕ್ಷಗಳಿಗೂ ಸಿಗುವುದಿಲ್ಲ. ಇದರಿಂದ ಕಾಂಗ್ರೆಸ್ ಗೂ ಲಾಸ್ ಹಾಗೂ ಬಿಜೆಪಿಗೂ ಲಾಸಾಗುತ್ತದೆ. ಬಿಜೆಪಿಗೂ ಯಾವುದೇ ರೀತಿ ಪ್ರಯೋಜನವಾಗುವುದಿಲ್ಲ.  ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ವೀರಶೈವ  ಲಿಂಗಾಯತ ಅಧಿಕಾರಿಗಳಿಗೆ ಮನ್ನಣೆ ಸಿಗುತ್ತಿಲ್ಲ ಎಂಬ ದೂರುಗಳಿವೆ.

ಇದು ಬಿಜೆಪಿಗೆ ಅನುಕೂಲವಾಗುವ ಸಾಧ್ಯತೆಗಳಿವೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ‌ನೀಡಿದ ಅವರು ಇಂತಹ ಸನ್ನವೇಶಗಳು ಬರಬಾರದು ಎಂದರೆ ನಮ್ಮಂತವರಿಗೆ ಟಿಕೇಟ್ ನೀಡಬೇಕು. ಸಾಮಾಜಿಕ ನ್ಯಾಯ ಎಂದರೆ ಜನಸಂಖ್ಯೆ ಅನುಗುಣವಾಗಿ ಸ್ಥಾನ ಸಿಗಬೇಕು ಎಂದು ಹೇಳಿದರು.

ಸರಕಾರ ಬಂದು ಆರು ತಿಂಗಳಾದರೂ ಅನುದಾನ ನೀಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ವಿನಯ್ ಕುಮಾರ್, ಇದು ತಪ್ಪು ಕಾಂಗ್ರೆಸ್ ಸರ್ಕಾರ ಬಂದು ಆರು ತಿಂಗಳಾಗಿದೆ ಎಂದರು.

ಶಾಸಕರಿಗೆ ಅನುದಾನ ನೀಡಿಲ್ಲ ಎಂಬ ಅಂಶ ಕಾಂಗ್ರೆಸ್ ಗೆ ಹೊಡೆತ ನೀಡಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಹಂತಹಂತವಾಗಿ ಎಲ್ಲಾ ಯೋಜನೆಗಳನ್ನು ನೀಡಲಾಗುವುದು ಗ್ಯಾರಂಟಿ ಅನುಷ್ಠಾನದಿಂದಾಗಿ ಸರ್ಕಾರಕ್ಕೆ ಆರ್ಥಿಕ ತೊಂದರೆಯಾಗಿದೆ .

ಜಾತಿ ರಾಜಕಾರಣದಿಂದ ಗೆಲುವು ಸಾಧಿಸುವುದಿಲ್ಲ

ಅನುದಾನ ಬಂದಾಗ ಹಂತಹಂತವಾಗಿ ಶಾಸಕರಿಗೆ ನೀಡಲಾಗುವುದು. ಜಿಸ್ ಟಿ ಸೇರಿಸಿದಂತೆ ಸರ್ಕಾರಕ್ಕೆ ಆರ್ಥಿಕ ಲಾಭ ಬಂದಕೂಡಲೇ ಅನುದಾನ ಸಿಗಲಿದೆ. ವಿಪಕ್ಷಗಳು ಸಮರ್ಪಕ ಆಡಳಿತ ನಡೆಸಲು ಬಿಡುತ್ತಿಲ್ಲ. ಈಗ ಬಿಜೆಪಿಯವರು ಮಾಜಿ ಜಿಎಂಕುಮಾರಸ್ವಾಮಿ ಅವರನ್ನು ಮುಂದಿಟ್ಟು ಕೊಂಡು ಸುಖಾ ಸುಮ್ಮನೆ ತೊಂದರೆ ಮಾಡುತ್ತಿದ್ದಾರೆ ಎಂದರು.

ಈಗಿರುವ ಎಜುಕೇಡೆಟ್ ನವರು ಜಾತಿ ನೋಡೋದಿಲ್ಲ. ಜಾತಿ ರಾಜಕಾರಣದಿಂದ ಗೆಲುವು ಸಾಧಿಸುವುದಿಲ್ಲ. ಉತ್ತಮ ಶಿಕ್ಷಣ ನೀಡಿದರೆ ಹಾಗೂ ಅಭಿವೃದ್ಧಿ ಕಾರ್ಯ ಮಾಡಿದರೆ ಜನರೇ ಗೆಲ್ಲಿಸುತ್ತಾರೆ. ಕ್ಷೇತ್ರದಲ್ಲಿ ನಾನು ಸಂಚಾರ ಮಾಡುತ್ತಾ ಬಂದಾಗಿನಿಂದ ಇಲ್ಲಿಯವರೆಗೂ ನಮ್ಮ ಮನೆಗೆ ನೂರಾರು ಜನ ಬರುತ್ತಿದ್ದಾರೆ.

ಒಬ್ಬ ಎಂ.ಪಿ ಎಂಎಲ್ ಎ ಮನೆಗೂ ಅಷ್ಟು ಜನ ಬರುತ್ತಾರೋ ಗೊತ್ತಿಲ್ಲ ಆದರೆ ನಮ್ಮ‌ಮನೆಗೆ ಬರುತ್ತಿದ್ದಾರೆ. ಅವರೆಲ್ಲಾ ನನ್ನ ಬಳಿ ಹಣ ಕೇಳಲು ಬರುತ್ತಿಲ್ಲ. ಅವರ ಮನೆಯ ಕಾರ್ಯಕ್ರಮಗಳಿಗೆ ನನ್ನನ್ನು ಆಹ್ವಾನಿಸಲು ಬರುತ್ತಿದ್ದಾರೆ

ಪ್ರೀತಿಯಿಂದ ಊರಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಆಹ್ವಾನಿಸುತ್ತಿದ್ದಾರೆ. ನಾನೇನು ಗೆಲುವಿಗೆ ತಂತ್ರ ರೂಪಿಸುವ ಅವಶ್ಯಕತೆ ಇಲ್ಲ ಜನರೇ ನನಗೆ ಪ್ರೀತಿ ನೀಡುತ್ತಿದ್ದಾರೆ. ಜನರನ್ನು ಪ್ರೀತಿಯಿಂದ ಮಾತನಾಡಿಸಿ, ಅವರ ಸಮಸ್ಯೆಗಳನ್ನು ನಾನು ಅರ್ಥ ಮಾಡಿಕೊಂಡು ಅದಕ್ಕೆ ಪರಿಹಾರ ಕಲ್ಪಿಸಬೇಕು ಎಂದು ವಿವರಿಸಿದರು.

ಇಷ್ಟು ವರ್ಷಗಳಿಂದ ಅವರು‌ ಸಂಘಟನೆ ಮಾಡಿಲ್ಲ

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ ಮಂಜಪ್ಪ ಅವರಿಗೆ ಕೇವಲ ಹದಿನೈದು ದಿನ ಮೊದಲು ಟಿಕೇಟ್ ಸಿಕ್ಕಿದ್ದರಿಂದ ಕಾಂಗ್ರೆಸ್ ಸೋಲಲು ಕಾರಣ ಎನ್ನುವ‌ ಮಾತುಗಳು ಕೇಳಿಬರುತ್ತಿವೆ. ಆದರೆ ಮಂಜಪ್ಪ ಸಂಘಟನೆ ಮಾಡದೇ ಇರುವುದು ಸೋಲಿಗೆ ಕಾರಣ. ಇಷ್ಟು ವರ್ಷಗಳಿಂದ ಅವರು‌ ಸಂಘಟನೆ ಮಾಡಿಲ್ಲ ಎಂಬುದು ತಿಳಿದು ಬರುತ್ತದೆ. ಆದ್ದರಿಂದ ಮಂಜಪ್ಪ ಹಾಗೂ ನನ್ನ ನಡುವೆ ನೇರ ಹಣಾಹಣಿ ಇಲ್ಲ. ಜನ ನನ್ನ ನ್ನು ಒಪ್ಪಿಕೊಂಡಿದ್ದಾರೆ. ಆದ್ದರಿಂದ ನನಗೇ ಜನರ ಆಶೀರ್ವಾದ ಸಿಗಲಿದೆ. ಯಾಕೆಂದರೆ ನಾನು ಸಂಘಟನೆ ಮಾಡುತ್ತಿದ್ದೇನೆ.

ಮನವಿಗೆ ಸ್ಪಂದಿಸಿ ನನಗೆ ಬೆಂಬಲ

ಸಚಿವರು ಹಾಗೂ ದಾವಣಗೆರೆ ಉಸ್ತುವಾರಿಗಳಾದ ಈಶ್ವರ್ ಖಂಡ್ರೆ ದಾವಣಗೆರೆಗೆ ಬಂದಾಗ ಐದುನೂರು‌ ಕೊಟ್ಟು ಜನರನ್ನು ಕರೆದುಕೊಂಡು ಬಂದಿದ್ದಾರೆ ಎಂಬ ಆರೋಪದ ಬಗ್ಗೆ  ಪ್ರತಿಕ್ರಿಯೆ ನೀಡಿದ ಅವರು, ಜಿಲ್ಲೆಯ ಕಾಂಗ್ರೆಸ್ ‌ಮಖಂಡರುಗಳಾದ. ಹೊದಿಗೆರೆ ರಮೇಶ್, ಕತ್ತಲಗೆರೆ ತಿಪ್ಪಣ್ಣ, ತುರ್ಚಘಟ್ಟಬಸಣ್ಣ‌ಸೇರಿದಂತೆ ವಿವಿಧ ಸಮಾಜಗಳ ಮುಖಂಡರು ಐದುನೂರು ಕೊಟ್ಟು ಕರೆದುಕೊಂಡು ಬರುವವರಾ ಎಲ್ಲರೂ ನನ್ನ ಒಂದು ಕರೆಗೆ ಹಾಗೂ ಮನವಿಗೆ ಸ್ಪಂದಿಸಿ ನನಗೆ ಬೆಂಬಲ ನೀಡಲು ಬಂದಿದ್ದರು ಎಂದು ಉತ್ತರಿಸಿದರು.

ಜಿಲ್ಲೆಯ ಮುಖಂಡರುಗಳಾದ ಅವರು‌ ಮೂವತ್ತು ನಲವತ್ತು ವರ್ಷಗಳಿಂದ ಕ್ಷೇತ್ರದಲ್ಲಿ ಪಕ್ಷಕ್ಕಾಗಿ ದುಡಿದವರು. ಕೋಟಿ ರೂಪಾಯಿ ಕೊಟ್ಟರು ಆಮಿಷಕ್ಕೆ ಒಳಗಾಗದವರು. ಅವರೆಲ್ಲಾ ನನಗೆ ಬೆಂಬಲ ನೀಡಿದ್ದಾರೆ.  ಪ್ರಾಮಾಣಿಕ ರಾಜಕಾರಣಿಗಳು ಅಂದು ಬಂದಿದ್ದವರೆಲ್ಲಾ ಶೇ 66 ರಷ್ಟು ಜನರು ಪಕ್ಷಕ್ಕಾಗಿ ದುಡಿದವರೇ.  ವಿನಯ್ ಕುಮಾರ್ ಅಂತಹ ಅಭ್ಯರ್ಥಿ ಕ್ಷೇತ್ರದಲ್ಲಿ ಬೇಕಿದೆ ಎಂಬ ಭಾವನೆ ಜನರಲ್ಲಿದೆ ಎಂದರು.

ಬಿಜೆಪಿ ಈ ಬಾರಿ ಗೆಲುವು ಪಡೆಯುವುದು ಕಷ್ಟವಿದೆ. ಇನ್ನು ಕಾಂಗ್ರೆಸ್ ಮೆಂಬರ್ ಶಿಪ್ ನಂಬರ್ ನ್ನು ನಾನು ಎಲ್ಲಾಕಡೆ ಹಾಕಿದ್ದೇನೆ. ಅದನ್ನು ಪರಿಶೀಲಿಸಬೇಕಾದದ್ದು ಅವರ ಕೆಲಸ..ದಾವಣಗೆರೆ ನಾನು ಹುಟ್ಟಿಬೆಳೆದ ಹೂರು ಅದಕ್ಕಾಗಿ ಈ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡಿದ್ದೇನೆ ಎಂದರು. ಒಟ್ಟಾರೆ ವಿನಯ್ ಕುಮಾರ್ ಅವರ ಮನದಾಳದ ಮಾತನ್ನು ಹೇಳಿದ್ದು, ಯಾರಿಗೆ ಟಿಕೆಟ್ ಸಿಗುತ್ತೇ ಎಂದು ಕಾದು ನೋಡಬೇಕಿದೆ.

Share.
Leave A Reply

Exit mobile version