ದಾವಣಗೆರೆ : ದೇಶದ ಭವಿಷ್ಯಕ್ಕಾಗಿ ಮೋದಿ ಬೇಕಿದ್ದಾರೆ ಆದ್ದರಿಂದ ಜನರುಕೂಡ ಬಿಜೆಪಿ ಗೆಲ್ಲಿಸಬೇಕೆಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಹೇಳಿದ್ದಾರೆ.
ಜಗಳೂರು ಕ್ಷೇತ್ರದಲ್ಲಿ ಮತಯಾಚನೆ ಮಾಡುತ್ತಾ ಜನರೊಂದಿಗೆ ಮಾತನಾಡಿದ ಅವರು ಜಗಳೂರು ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ಉತ್ತಮ ಸಿಸಿ ರಸ್ತೆಗಳು ನಿರ್ಮಾಣವಾಗಿವೆ ಇದಕ್ಕೆಲ್ಲಾ ಕಾರಣ ಪ್ರಧಾನಿ ನರೇಂದ್ರ ಮೋದಿಜಿಯವರು.ಗ್ರಾಮ ಸಡಕ್ ಯೋಜನೆ ಮೂಲಕ ಪ್ರತಿ ಹಳ್ಳಿಯಲ್ಲೂ ಉತ್ತಮರಸ್ತೆ ನಿರ್ಮಾಣವನ್ನು ಸಂಸದ ಸಿದ್ದೇಶ್ವರ್ ಮಾಡಿದ್ದಾರೆ.ಕೇಂದ್ರದ ಹಲವಾರು ಯೋಜನೆಗಳನ್ನು ಜನತೆಗೆ ತಲುಪಿಸಿದ್ದಾರೆ ಎಂದರು.ಜನರ ಪ್ರೀತಿ ವಿಶ್ವಾಸ ನೋಡಿದರೆ ಗೆಲುವುಪಡೆದಷ್ಟೇ ಸಂತಸವಾಗುತ್ತಿದೆ.
ಕಾಂಗ್ರೆಸ್ ಸರ್ಕಾರದಿಂದ ಜನತೆಗೆ ಭದ್ರತೆ ಇಲ್ಲದಂತಾಗಿದೆ.ಕೋಮುಗಲಭೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ದುರಂತ.ಅಭಿವೃದ್ಧಿ ಕೆಲಸ ಮಾಡದ ಕಾಂಗ್ರೆಸ್ ನ್ನು ಬುಡಸಮೇತ ಕಿತ್ತೊಗೆಯುವ ಸಂಕಲ್ಪ ಮಾಡಬೇಕು.ಮೋದಿಗ್ಯಾರಂಟಿಯೇ ನಿಜವಾದ ಗ್ಯಾರಂಟಿ.ಕೋವಿಡ್ ಸಮಯದಲ್ಲಿ ಜನರಿಗೆ ವ್ಯಾಕ್ಸಿನ್ ನೀಡುವ ಮೂಲಕ ವಿಶ್ವಕ್ಕೆಮೋದಿ ವಿಶ್ವ ನಾಯಕರಾಗಿದ್ದಾರೆ ಅದಕ್ಕಾಗಿ ಮತ್ತೊಮ್ಮೆ ಮೋದಿ ಅಭಿಯಾನವಾಗಬೇಕು ಜನತೆ ಈ ಬಾರಿ ನನಗೆ ಆಶೀರ್ವಾದ ಮಾಡಬೇಕು ಎಂದರು.
ಈ ವೇಳೆ ಮಾಜಿ ಶಾಸಕ ಎಸ್ ವಿ.ರಾಮಚಂದ್ರ,ಹೆಚ್.ಪಿ ರಾಜೇಶ್, ಜಿ ಚಂದ್ರನಾಯ್ಕ , ಜಿ ಸುರೇಂದ್ರ , ಎಚ್ ಡಿ ರಾಜ್ ಕುಮಾರ್ , ಎಚ್ ಎಸ್ ಬಸವರಾಜ್ , ಸಿ ಜಿ ನಾಗರಾಜ್ , ಗ್ರಾಮ ಪಂಚಾಯತಿ ಅಧ್ಯಕ್ಷೆ ರೂಪ
ಗ್ರಾಮ ಪಂಚಾಯತಿ ಅಧ್ಯಕ್ಷೆ ರೂಪ , ಗಂಗಾಧರ ಗ್ರಾಮ ಪಂಚಾಯತಿ ಸದಸ್ಯರು , ಕೆಂಚನಗೌಡ , ಪ್ರದೀಪ ,ಬಸವರಾಜ್ , ಪ್ರಕಾಶ್, ಪ್ರವೀಣ್ ಮದನ್ , ಅನಿತ್ ಕುಮಾರ್ ಜಿ ಎಸ್ ಉಪಸ್ಥಿತರಿದ್ದರು