ದಾವಣಗೆರೆ : ಜನರ ಒಂದುಮತ ಮುಂದಿನ ಭವಿಷ್ಯ ನಿರ್ಧರಿಸಲಿದೆ ಅದಕ್ಕಾಗಿ ಎಲ್ಲರೂ ಮತ ಚಲಾಯಿಸುವ ಮೂಲಕ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಪಣ ತೊಡೋಣ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಕರೆ ನೀಡಿದರು.
ಹರಿಹರ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ಅವರು ಮತದಾರರೊಂದಿಗೆ ಮಾತನಾಡಿ ಕೇಂದ್ರ ಸರ್ಕಾರದ ಹಲವಾರು ಯೋಜನೆಗಳ ಬಗ್ಗೆ ತಿಳಿಸಿದರು. ಬಿಜೆಪಿಗೆ ನಮ್ಮ ಒಂದು ಮತ ಸದೃಢ ಭಾರತ ನಿರ್ಮಾಣಕ್ಕೆ ಕಾರಣವಾಗಲಿ.ಮಕ್ಕಳ ಭವಿಷ್ಯಕ್ಕೆ ಮಹಿಳೆಯರ ರಕ್ಷಣೆಗಾಗಿ ಮೋದಿಜಿ ಕೈ ಬಲಪಡಿಸಬೇಕು ಅದಕ್ಕಾಗಿ ನನ್ನ ಕಮಲದ ಗುರುತಿಗೆ ಜನರು ಆಶೀರ್ವಾದ ಮಾಡಬೇಕೆಂದರು.ಮಾಜಿ
ಸಚಿವ ಹೆಚ್.ಎಸ್ ಶಿವಶಂಕರ್ ಮಾತನಾಡಿ ಹರಿಹರ ಕ್ಷೇತ್ರದ ಜನತೆ ಹಾಗೂ ಕಾರ್ಯಕರ್ತರು ವ್ಯತ್ಯಾಸಗಳನ್ನು ಬದಿಗಿಟ್ಡು ಗಾಯತ್ರಿ ಸಿದ್ದೇಶ್ವರ್ ಗೆಲುವಿಗೆ ಪಣತೊಡಬೇಕು.ನಾನು ಕೊಟ್ಟ ಮಾತು ಇಟ್ಟ ಹೆಜ್ಜೆ ಯಾವಾಗಲೂ ತಪ್ಪುವುದಿಲ್ಲ.ನಮ್ಮ ಹಿರಿಯ ನಾಯಕರಾದ ದೇವೇಗೌಡರು ಹಾಗೂ ಮೋದೀಜಿಯವರು ದೇಶ ಉಳಿಸುವ ಸಂಕಲ್ಪ ಮಾಡಿದ್ದಾರೆ ನಾವೆಲ್ಲಾ ಅವರನ್ನು ಬೆಂಬಲಿಸಬೇಕು ಎಂದರು.
ಈ ವೇಳೆ ಶಾಸಕ ಬಿ.ಪಿ ಹರೀಶ್,ವೀರೇಶ್ ಹನಗವಾಡಿ,ಭಾರತಿ ಸದಾನಂದಗೌಡ,ಸಂಗಪ್ಪಗೌಡರು ಸೇರಿದಂತೆ ಬಿಜೆಪಿ ,ಜೆಡಿಎಸ್ ಕಾರ್ಯಕರ್ತರು ಇದ್ದರು.