ಚನ್ನಗಿರಿ: ದಾವಣಗೆರೆಯ ವಿಶ್ವರಾಧ್ಯ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯ ವತಿಯಿಂದ ಫೆ 29 ರಂದು ಚನ್ನಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆಯ ಅಡಳತಾಧಿಕಾರಿ ಡಿ.ರಾಘವೇಂದ್ರ ಹೇಳಿದರು.
ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ದಾವಣಗೆರೆಯಲ್ಲಿ ವಿಶ್ವರಾಧ್ಯ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯನ್ನು 2019 ರಲ್ಲಿ ಪ್ರಾರಂಭಿಸಲಾಗಿದ್ದು ಕ್ಯಾನ್ಸರ್ ರೋಗಿಗಳಿಗೆ ಉತ್ತಮ ಸೇವೆಯನ್ನು ನೀಡುತ್ತಾ ಬಂದಿದ್ದೇವೆ. ಆಸ್ಪತ್ರೆಯಲ್ಲಿ ನುರಿತ ವೈದ್ಯರ ತಂಡವಿದೆ. ಅದರಲ್ಲಿ ಸ್ಥನ ಕ್ಯಾನ್ಸರ್, ಗರ್ಭಕೋಶ ಕ್ಯಾನ್ಸರ್, ಗುದದ್ವಾರ ಕ್ಯಾನ್ಸರ್, ಅನ್ನನಾಳ ಕ್ಯಾನ್ಸರ್, ಕಿಡ್ನಿ ಕ್ಯಾನ್ಸರ್, ಬಾಯಿ, ಕುತ್ತಿಗೆ ಮತ್ತು ಗಂಟಲು ಕ್ಯಾನ್ಸರ್‌ಗಳಿಗೆ ಸರ್ಜರಿ ಮತ್ತು ಕಿಮೋಥೇರಫಿ, ಆತ್ಯಾದುನಿಕ ರೇಡಿಯೇಷನ್ ಸೌಲಭ್ಯವನ್ನು ಸಹ ಕಲ್ಪಿಸಲಾಗಿದೆ. ಮತ್ತು ಜನರ ಅನುಕೂಲಕ್ಕಾಗಿ ಎ.ಪಿ.ಎಲ್, ಬಿ.ಪಿ.ಎಲ್,., ಯಶಶ್ವಿನಿ, ಆಯುಷ್ಮಾನ್ ಕಾರ್ಡ, ಇ.ಎಸ್.ಐ. ಸೌಲಭ್ಯಗಳನ್ನು ಸಹ ನೀಡಲಾಗುವುದು ಎಂದರು.
ಚನ್ನಗಿರಿ ತಾಲೂಕಿನ ಸಾರ್ವಜನಿಕರು ಈ ಕಾರ್ಯಕ್ರಮದ ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಶಿಬಿರದ ಆಯೋಜಕರಾದ ಮಂಜುನಾಥ್, ಮಾರುಕಟ್ಟೆ ವ್ಯವಸ್ಥಾಪಕರಾದ ಸಂತೋಷ್‌ಕುಮಾರ್ ಹಾಜರಿದ್ದರು.