ದಾವಣಗೆರೆ: ಒಂದು ಕಾಲದಲ್ಲಿ ಮಾಜಿ ಸಂಸದ ಸಿದ್ದೇಶ್ವರ ಟಿಕೆಟ್ ಹರಿಯುತ್ತಿದ್ದರು ಎಂದು ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್ ಹೇಳಿದರು.
ನಗರದ ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಯಡಿ ಬಿಜೆಪಿ ಅವಧಿಯಲ್ಲಿ ಕಳಪೆ ಕಾಮಗಾರಿ ನಡೆದಿದೆ. ಹಳೇ ಬಸ್ ನಿಲ್ದಾಣ ಅವೈಜ್ಞಾನಿಕ ಕಾಮಗಾರಿ ನಡೆದಿದೆ.ಹೊಂದಾಣಿಗೆ ರಾಜಕೀಯ ಮಾಡುವುದಿಲ್ಲ. ಮಾಜಿ ಸಚಿವರಾದ ಎಸ್ ಎ ರವೀಂದ್ರನಾಥ್ ಪಕ್ಷಕ್ಕಾಗಿ ಜೀವ ಮುಡಿಪಾಗಿಟ್ಟಿದ್ದಾರೆ. ಅವರನ್ನು ಮೂಲೆಗುಂಪು ಮಾಡಿದ್ದಾರೆ ಹಿರಿಯರು ಸಾಕಷ್ಟು ಜನ ಇದ್ದಾರೆ. ಅವರೆಲ್ಲಾ ಪಕ್ಷ ಕಟ್ಟಿದಾಗ ಮಾಜಿ ಸಂಸದ ಜಿ.ಎಂಸಿದ್ದೇಶ್ವರ್ ಎಲ್ಲಿದ್ದರು? ಅವರದ್ದು
ಆ ಕಾಲದಲ್ಲಿ ಟೂರಿಂಗ್ ಟಾಕೀಸ್ ಇತ್ತು ಬೆಂಗಳೂರಿಗೆ ಹೋಗಿ ಸಿನಿಮಾ ರೀಲ್ ತರುತ್ತಿದ್ದರು. ಟಿಕೇಟ್ ಹರಿಯುತ್ತಿದ್ದರು ಜೊತೆಗೆ ಅಡಿಕೆ ಮಿಕ್ಸ್ ಮಾಡಿ ಅಡಿಕೆ ವ್ಯಾಪಾರ ಮಾಡುತ್ತಿದ್ದರು ಆದರೆ ಅವರ ತಂದೆ ಒಳ್ಳೆಯ ಮನುಷ್ಯರು. ಬಿಜೆಪಿಯಿಂದ ಟಿಕೇಟ್ ಪಡೆದು ಗೆದ್ದವರು..ದಾವಣಗೆರೆ ಜಿಲ್ಲೆಯಲ್ಲಿ ಸಿದ್ದೇಶ್ವರ ಅವಧಿಯಲ್ಲಿ ಯಾವ ಕೆಲಸ ನಡೆದಿಲ್ಲ. ಬಾಡಿಗಾರ್ಡ್ ಗಳನ್ನು ಇಟ್ಟುಕೊಂಡು ಓಡಾಡುತ್ತಿದ್ದರು ಅಷ್ಟೇ. ಅವರ ಕಾಮಗಾರಿಗಳಿಂದ ಜನ ರೋಸಿಹೋಗಿದ್ದಾರೆ ಅದಕ್ಕೆ ಅಶೋಕರಸ್ತೆಗೆ ಅವರ ಪ್ರತಿಮೆ ಹಾಕಿಸಬೇಕು ಬೇಕಾದರೆ ಅದಕ್ಕೆ ಹಣ ನಾನು ಕೊಡುತ್ತೇನೆ ಎಂದರು. ಅಶೋಕರಸ್ತೆ ಅಂಡರ್ ಪಾಸ್ ಸರಿಪಡಿಸಲು ಎಂ.ಪಿ ಜೊತೆಗೆ ಮಾತನಾಡಿ ಪ್ಯಾರಲಲ್ ರಸ್ತೆ ಮಾಡುತ್ತೇವೆ ಇದರ ಬಗ್ಗೆ ಚರ್ಚೆ ಮಾಡಲಾಗುವುದು. ಮಾಜಿ ಸಂಸದರು ಊರು ಉದ್ದಾರ ಮಾಡುವುದನ್ನು ಬಿಟ್ಟು ವೈಯಕ್ತಿಕ ಅಭಿವೃದ್ಧಿಯಾಗಿದ್ದಾರೆ ಅಷ್ಟೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ರವೀಂದ್ರನಾಥ್ ನನಗೆ ಆತ್ಮೀಯರು ಅವರನ್ನು ಮಾತನಾಡಿಸುವುದು ಬಿಜೆಪಿಯವರಿಗೆ ತಪ್ಪಾಗಿ ಕಂಡರೆ ಏನೂ ಮಾಡಲು ಸಾಧ್ಯ. ಇನ್ನು ಮಾಜಿ ಸಚಿವ ರೇಣುಕಾಚಾರ್ಯ ಪಕ್ಷ ಸೇರುವುದಾಗಿ ನಮ್ಮ ಬಳಿ ಬಂದಿದ್ದರು.ಆದರೆ ವಿಜಯೇಂದ್ರ ಅಧ್ಯಕ್ಷ ರಾದ ಮೇಲೆ ನನ್ನ ಬಳಿ ಬಂದಿಲ್ಲ.ಆಗಿ ಹೋಗಿರುವ ಘಟನೆ ಬಗ್ಗೆ ಮತ್ತೊಬ್ಬರ ಮೇಲೆ ಗೂಬೆ ಕೂರಿಸುವುದಲ್ಲ. ಮಾಜಿ ಸಂಸದರು ಆಲದ ಮರ ಬೇಡ ಜಾಲಿಮರದ ಕೆಳಗೆ ಕೂತು ಧ್ಯಾನ ಮಾಡಲಿ.ಅವರ ಪಾಪ ಅವರನ್ನೇ ತಿನ್ನುತ್ತದೆ.ಮೊದಲಿನಂತೆ ಮುಂದಿನ ಜನ್ಮ ಅಲ್ಲ ಈಗ ಅವರೇ ಅನುಭವಿಸಬೇಕು ಎಂದರು.

ಕಾಂಗ್ರೆಸ್ ಅವಧಿಯಲ್ಲಿ ಉತ್ತಮ ಅಭಿವೃದ್ದಿ ಕಾರ್ಯ ಮಾಡಲಾಗುವುದು.ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ.ಬಡವರಿಗೆ ಯೋಜನೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ.

ಪ್ರತಿ ಯೋಜನೆಗಳು ಬಡವರಿಗೆ ತಲುಪಬೇಕು. ಗ್ಯಾರಂಟಿ ಯೋಜನೆಗೆ ಯಾವ ಮಾನದಂಡ ಇಲ್ಲ ಹಾಗೂ ಪರಿಷ್ಕರಣೆ ಮಾಡುತ್ತಿಲ್ಲ.ಅರ್ಹರಿಗೆ ಸರ್ಕಾರದ ಯೋಜನೆ ತಲುಪಿಸಬೇಕು. ಗ್ಯಾರಂಟಿ ಯೋಜನೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗಿದೆ ಎಂದರು. ಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ, ಎಸ್ಪಿ ಉಮಾಪ್ರಶಾಂತ್,ಆಯುಕ್ತೆ ರೇಣುಕಾ,ದೂಡಾ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ,ಮೇಯರ್ ವಿನಾಯಕ್ ಪೈಲ್ವಾನ್,ಪಾಲಿಕೆ ಸದಸ್ಯರಾದ ಮಂಜುನಾಥ್ ಗಡಿಗುಡಾಳ್,ಕೆ.ಚಮನ್ ಸಾಬ್,ಆಯೂಬ್ ಪೈಲ್ವಾನ್,ಎ.ನಾಗರಾಜ್,ಗಣೇಶ್ ಹುಲ್ಲುಮನಿ ಮತ್ತಿತರರಿದ್ದರು.

Share.
Leave A Reply

Exit mobile version