ದಾವಣಗೆರೆ: ಶಾಸಕ ಯತ್ನಾಳ್ ಅವರು ಯಡಿಯೂರಪ್ಪ ಹಾಗೂ ವಿಜಯೇಂದ್ರ ಬಗ್ಗೆ ಮಾತನಾಡಿದರೆ ವಿಲನ್ ಆಗುತ್ತಾರೆ ಅಷ್ಟೇ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ

ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಯತ್ನಾಳ್ ಅವರು ಮಾತೆತ್ತಿದರೆ ದೆಹಲಿಗೆ ಹೊಗುವುದಾಗಿ ಹೇಳುತ್ತಾರೆ ನಮಗೂ ದೆಹಲಿಗೆ ಹೋಗಲು ಬರುತ್ತದೆ ಆದರೆ ನಾವು ದೂರು ಕೊಡಲು ಹೋಗುವುದಿಲ್ಲ. ನೂತನ ರಾಜ್ಯಾಧ್ಯಕ್ಷ ಬಿ.ವೈ‌.ವಿಜಯೇಂದ್ರ ಉತ್ತಮವಾಗಿ ಸಂಘಟನೆ ಮಾಡುತ್ತಿದ್ದಾರೆ.

ಕಾರ್ಯಕರ್ತರನ್ನು,ಸಂಘಪರಿವಾರದವರನ್ನು,ಮಠಾಧೀಶರನ್ನು ಭೇಟಿ ಮಾಡುತ್ತಿದ್ದಾರೆ. ಬಿಜೆಪಿ ಬೂಸ್ಟ್ ಆಗುತ್ತಿದೆ.ಯೂತ್ಸ್ ವಿಜಯೇಂದ್ರ ನಾಯಕತ್ವಕ್ಕೆ ಹುಚ್ಚೆದ್ದು ಕುಣಿಯುತ್ತಿದ್ದಾರೆ.ಬಿಜೆಪಿ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ ಎಂದರು.

ನಮ್ಮ ಸಂಘರ್ಷ ಕಾಂಗ್ರೆಸ್ ವಿರುದ್ದ

ನಮ್ಮ ಸಂಘರ್ಷ ಕಾಂಗ್ರೆಸ್ ವಿರುದ್ದ. ನಮ್ಮ ನಮ್ಮವರ ವಿರುದ್ದ ಸಂಘರ್ಷ ಬೇಡವೆಂದು ಯತ್ನಾಳ್ ಅವರಿಗೆ ಹೇಳಿದ್ದೇವೆ.ಯತ್ನಾಳ್ ಅವರಿಗೆ ಹಿರಿಯರು ಪದೇ ಪದೇ ಯಡಿಯೂರಪ್ಪ ಬಗ್ಗೆ ಹಾಗೂ ವಿಜಯೇಂದ್ರ ಅವರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ.ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಮಾಡಿರುವುದು ಪ್ರಧಾನಿ ನರೇಂದ್ರ ಮೋದಿಯವರು, ಅಮಿತ್ ಷಾ, ಜೆಪಿ ನಡ್ಡಾ ಹಾಗೂ ಸಂತೋಷ್ ಜೀಯವರು.ಹಾಗಾದರೆ ಯತ್ನಾಳ್ ಅವರು ಮೋದಿಯವರಿಗೆ ಅಪಮಾನ ಮಾಡಬಹುದಾ ಎಂದು ಪ್ರಶ್ನಿಸಿದರು.

ಯತ್ನಾಳ್ ಕೇಂದ್ರ ಸಚಿವರಾಗಲು ಯಡಿಯೂರಪ್ಪ ಕಾರಣ

ಯತ್ನಾಳ್ ಅವರನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇಂದ್ರದ ಸಚಿವರನ್ನಾಗಿ ಮಾಡಿಸಿದ್ದು ಯಡಿಯೂರಪ್ಪ ಅವರು.ಜೆಡಿಎಸ್ ನಿಂದ ಕರೆತಂದಿದ್ದು ಬಿಎಸ್ ವೈ. ಬಿಜೆಪಿಗೆ  ಅವರನ್ನು ಕರೆತಂದವರು ಬಿಎಸ್ ವೈ ಎಂಬುದನ್ನು ಮರೆಯಬಾರದು.ಅಟಲ್ ಜೀಯವರು ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದ ವೇಳೆ ಕರ್ನಾಟಕ ಕೋಟಾದಿಂದ ಕೇಂದ್ರ ಸಚಿವರಾಗಲು ಬಿಎಸ್ ವೈ ಕೊಡುಗೆ ಸಾಕಷ್ಟಿದೆ.

ಆ ಸಂದರ್ಭದಲ್ಲಿ ಜಗದೀಶ್ ಶೆಟ್ಟರ್ ಅವರನ್ನು ನಾನು ಸೇರಿದಂತೆ ಮುಖಂಡರೆಲ್ಲಾ ಭೇಟಿ ಮಾಡಿ ಯತ್ನಾಳ್ ಬಿಜೆಪಿ‌ಸೇರ್ಪಡೆಗೆ ಅನುಮತಿ ಬಗ್ಗೆ ಹೇಳಿದಾಗ.ಅವರು ಒಂದು ಕಿವಿ ಮಾತು ಹೇಳಿದ್ದರು ಯತ್ನಾಳ್ ಬಿಜೆಪಿಗೆ ಬಂದರೆ ಅಭ್ಯಂತರವಿಲ್ಲ. ಆದರೆ ಮುಂದೆ ಅದರ ಪರಿಣಾಮ ಯಾರಿಗೆ ಗೊತ್ತು‌ಎಂದಿದ್ದರು. ಹಾಗಾಗಿ‌ಪದೇ ಬಿಎಸ್ ವೈ ಹಾಗೂ ವಿಜಯೇಂದ್ರ ಬಗ್ಗೆ ಮಾತನಾಡುವುದು ಸರಿಯಲ್ಲ. ಯತ್ನಾಳ್ ಹಿರಿಯರು ಅವರ ಬಗ್ಗೆ ಬಹಳ ಗೌರವವಿದೆ ಆದರೆ ಪದೇ ಪದೇ ಹಗುರವಾಗಿ ಮಾತನಾಡುವುದು ಖಂಡನೀಯ ಎಂದರು..

ಪ್ರಚಾರಕ್ಕಾಗಿ ಹೇಳಿಕೆಗಳನ್ನು ನೀಡಬಾರದು

ಪ್ರಚಾರಕ್ಕಾಗಿ ಹೇಳಿಕೆಗಳನ್ನು ನೀಡಬಾರದು ಇದನ್ನೆಲ್ಲಾ ರಾಜ್ಯದ ಜನ ಬಹಳ ಸೂಕ್ಷ್ಮ ವಾಗಿ ಗಮನಿಸುತ್ತಾರೆ ಎಂದರು.ಯಡಿಯೂರಪ್ಪ ಕೇವಲ ವೀರಶೈವ ಲಿಂಗಾಯತರ ನಾಯಕರಲ್ಲ.ಅವರೊಬ್ಬ ಹೋರಾಟಗಾರರು.ಪ್ರಶ್ನಾತೀತ ನಾಯಕ.ಅವರ ಹೋರಾಟ,ಸಂಘಟನೆ,ಪಾದಯಾತ್ರೆ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣ ಯಡಿಯೂರಪ್ಪ ಅವರ ಹೋರಾಟದಿಂದ.ಪ್ರಸ್ತುತ ಬಿಜೆಪಿಯಲ್ಲಿ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಲು ಬಿಜೆಪಿ ವರಿಷ್ಠರು ಕಾರಣ ಇನ್ನುಮುಂದೆ ಅವರ ಬಗ್ಗೆ ಹಗುರ ಮಾತು ಬೇಡ ಎಂದು ಶಾಸಕ ಯತ್ನಾಳ್ ಗೆ ಸಲಹೆ ನೀಡಿದರು.

Share.
Leave A Reply

Exit mobile version