ಬೆಂಗಳೂರು : ಸದಾಶಿವನಗರದಲ್ಲಿರುವ ಅಖಿಲ ಭಾರತ ವೀರಶೈವ ಮಹಾಸಭೆಯ ವೀರಶೈವ- ಲಿಂಗಾಯತ ಭವನದಲ್ಲಿ ಶಾಸಕ, ಹಾಲಿ ಶಾಸಕ, ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಗುರುವಾರ ಮಹಾಸಭೆ ಅಧ್ಯಕ್ಷರ ಆಯ್ಕೆಗಾಗಿ ಅರ್ಜಿ ಸಲ್ಲಿಸಿದರು.

ಮಹಾಸಭೆಯ ಮುಖ್ಯ ಚುನಾವಣಾಧಿಕಾರಿ ಎಂ.ಬಿ.ದ್ಯಾಬೇರಿ ನಾಮಪತ್ರ ಸ್ವೀಕರಿಸಿದರು. ನಾಮಪತ್ರ ಸಲ್ಲಿಸಲು ಸೆ.11 ಕೊನೆ ದಿನ, ಸೆ.12ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದ್ದು, ಸೆ.19ಕ್ಕೆ ಹಿಂಪಡೆಯಲು ಅವಕಾಶವಿದೆ. ಅಗತ್ಯವಿದ್ದಲ್ಲಿ ಸೆ.29ಕ್ಕೆ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಘಟಕದ ನೂತನ ಅಧ್ಯಕ್ಷ ಶಂಕರ ಬಿದರಿ, ಚುನಾಯಿತ ಮಹಾಸಭೆಯ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಎ.ಎಸ್.ವೀರಣ್ಣ, ಎಂ.ಎನ್.ರಾಜಶೇಖರಪ್ಪ (ಅಣಬೇರು ರಾಜಣ್ಣ), ಬಿ.ಎಸ್.ಸಚ್ಚಿದಾನಂದಮೂರ್ತಿ, ಹೆಚ್.ಎಂ.ರೇಣುಕ ಪ್ರಸನ್ನ, ಚಿದಾನಂದ ಎಸ್.ಮಠದ, ಕೋರಿ ವಿರುಪಾಕ್ಷಪ್ಪ, ಗಂಗಮ್ಮ ಬಸವರಾಜು, ಚಂದ್ರಕಲ ಶ್ರೀಕಂಠರಾಧ್ಯ, ರೂಪಶೇಖರ ಮತ್ತು ಇನ್ನಿತರೇ ಸಮಿತಿ ಸದಸ್ಯರುಗಳು ಸೂಚಕರು ಮತ್ತು ಅನುಮೋದಕರಾಗಿ ಉಪಸ್ಥಿತರಿದ್ದರು.

ಪುನರಾಯ್ಕೆ ಸಂಭವವೇ ಹೆಚ್ಚು

ಮಾಜಿ ಸಚಿವರು, ಹಾಲಿ ಶಾಸಕರಾದ ಶಾಮನೂರು ಶಿವಶಂಕರಪ್ಪ ಅವರು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಪುನರಾಯ್ಕೆಯಾಗುವ ಸಂಭವ ಹೆಚ್ಚಿದೆ. ಇವರನ್ನು ಹೊರತುಪಡಿಸಿ ಯಾರು ಕೂಡ ನಾಮಪತ್ರ ಸಲ್ಲಿಸದ ಹೋದರೆ ಶಿವಶಂಕರಪ್ಪವರೇ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.

Share.
Leave A Reply

Exit mobile version