ಶಿವಮೊಗ್ಗ : ಗೋಪಾಳದ ಪ್ರಖ್ಯಾತ ಹೋಟೆಲ್ ವಿಧಾತ್ರಿ ಹೋಟೆಲ್ ಪಕ್ಕದಲ್ಲಿ ಇಟ್ಟಿದ್ದ ಗೂಡಂಗಡಿಯನ್ನು ರಾಜಕಾರಣಿಗಳು ದೌರ್ಜನ್ಯದಿಂದ ಎತ್ತಿಸಿದ್ದಾರೆ ಎಂದು ಗೂಡಂಗಡಿ ಮಾಲೀಕ ಮಂಜುನಾಥ್ ಆರೋಪಿಸಿದ್ದಾರೆ. ಈ ಅಂಗಡಿ ಹರಿಯುವ ಚರಂಡಿ ಮೇಲೆ ಇದ್ದು, ಎತ್ತಂಗಡಿ ಮಾಡಲಾಗಿದೆ. ಸರ್ಕಾರಿ ಜಾಗದ ಚರಂಡಿಯ ಮೇಲೆ ಇಟ್ಟಂತಹ ಗೂಡಂಗಡಿ ಇಟ್ಟು ಜೀವನ ನಡೆಸುತ್ತಿದ್ದವನ ಹೊಟ್ಟೆಯ ಮೇಲೆ ಹೊಡೆಯಲಾಗಿದೆ. ಪಕ್ಕದ ಖ್ಯಾತ ಹೋಟೆಲ್ ನ ಮಾಲೀಕರು ಕೆಲ ರಾಜಕಾರಣಿಗಳು ಸ್ಥಳಕ್ಕೆ ಧಾವಿಸಿ ಅಂಗಡಿಯನ್ನ ತೆಗೆಸಿದ್ದಾರೆ. ಪಾಲಿಕೆ ಅಥವಾ ಯಾವುದೇ ಸರ್ಕಾರಿ ಜಾಗವಿದ್ದರೆ ಸಂಬAಧಪಟ್ಟ ಇಲಾಖೆಗಳು ಬಂದು ಅಂಗಡಿಗಳನ್ನ ತೆಗೆಸುವುದು ಸರ್ವೇ ಸಾಮಾನ್ಯ. ಆದರೆ ಸಣ್ಣಪುಟ್ಟ ಅಂಗಡಿ ಖಾಲಿ ಮಾಡಿಸಲು ನಾಯಕರು ಮುಂದಾಗುತ್ತಿದ್ದಾರೆ. ಮಂಜುನಾಥ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಬಡಪಾಯಿಯ ಮೇಲೆ ಬರೆ ಎಳೆಯಲಾಗಿದೆ. ಬಂಡವಾಳಶಾಹಿ ಜೊತೆ ಸೇರಿ ರಾತ್ರಿ ಹೊತ್ತು ರಾಜಕೀಯ ನಾಯಕರು ಪೌರುಷ ತೋರಿರುವುದು ಎಷ್ಟು ಸರಿ ಎಂದು ಜನ ಪ್ರಶ್ನಿಸಿದ್ದಾರೆ.

Share.
Leave A Reply

Exit mobile version