ಭದ್ರಾವತಿ: ಮುಂಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಅಂಗವಾಗಿ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮತದಾರರ ಕುರಿತ “ರಾಜ್ಯ ಮಟ್ಟದ ಕಿರುಚಿತ್ರ ಸ್ಪರ್ಧೆ”ಯಲ್ಲಿ ಭದ್ರಾವತಿಯ ನಿವೃತ್ತ ಎಎಸ್ಐ ದಾನಂ ರವರು ನಟಿಸಿದ “POWER OF VOTE” ಕಿರುಚಿತ್ರ ಪ್ರಥಮ ಬಹುಮಾನಕ್ಕೆ ಆಯ್ಕೆಯಾಗಿದೆ.

ಮತದಾನ ಜಾಗೃತಿ ಮೂಡಿಸುವ 280 ಚಿತ್ರಗಳಲ್ಲಿ ಮೊದಲ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಭದ್ರಾವತಿಯ ಕ್ರೈಸ್ತ ಸಮುದಾಯದ ಮುಖಂಡರು ಸೇರಿದಂತೆ ವಿವಿಧಸಂಘ ಸಂಸ್ಥೆಗಳ ಮುಖಂಡರು ದಾನಂ ರವರನ್ನು ಅಭಿನಂದಿಸಿದ್ದಾರೆ.

Share.
Leave A Reply

Exit mobile version