ದಾವಣಗೆರೆ: ಕೊನೆಗೂ ಬಿಜೆಪಿ ಮುಖಂಡ ಕಂ ವಕೀಲ ದೇವರಾಜೇಗೌಡ ಅರೆಸ್ಟ್ ಆಗಿದ್ದಾರೆ. ಇದ್ರಿಂದ ಪ್ರಜ್ವಲ್ ಪೆನ್ಡ್ರೈವ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಆದ್ರೆ ಇಲ್ಲಿ ಗಮನಿಸಬೇಕಾದ ಅಂಶ ಏನಂದ್ರೆ 2 ತಿಂಗಳ ಹಿಂದೆಯೇ HDKಗೆ ಪೆನ್ಡ್ರೈವ್ ಸುಳಿವು ಸಿಕ್ಕಿತ್ತಂತೆ. ಹೀಗಿದ್ರೂ ಹೆಚ್ಡಿಕೆ ಸೈಲೆಂಟ್ ಆಗಿದ್ದಿದ್ದು ಯಾಕೆ.? ಪೆನ್ಡ್ರೈವ್ ಸ್ಕ್ರಿಪ್ಟ್, ಡೈರೆಕ್ಷನ್ ಎಲ್ಲವನ್ನೂ ಬಿಜೆಪಿ ಹೈಕಮಾಂಡ್ ನೋಡಿಕೊಂಡಿತ್ತಾ.? ಬ್ರದರ್ ಸ್ವಾಮಿದು ಇದೆಂಥಾ ಹೈಡ್ರಾಮಾ!?
ಹಾಸನ ಸಂಸದ ಪ್ರಜ್ವಲ್ ರೇವಣ್ಣ ರಾಸಲೀಲೆ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆನ್ ಡ್ರೈವ್ ಬಿಡುಗಡೆ ಮಾಡಿದ್ದ ವಕೀಲ ಮತ್ತು ಬಿಜೆಪಿ ಮುಖಂಡ ಜಿ.ದೇವರಾಜೇಗೌಡ ಅವರನ್ನು ಹಿರಿಯೂರು ಗ್ರಾಮಾಂತರ ಪೋಲಿಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ. ನಿಮಗೆ ಗೊತ್ತಿರ್ಲಿ, ವಕೀಲ ದೇವರಾಜೆಗೌಡ ಮೇಲೆ ಮಹಿಳೆಯೊಬ್ಬರು ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಹೀಗಾಗಿ ಇವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತಲೆಮರೆಸಿಕೊಂಡಿದ್ದರು. ಈ ಬಗ್ಗೆ ಹೊಳೆನರಸೀಪುರ ಪೋಲಿಸರು ಹಿರಿಯೂರು ತಾಲೂಕಿನ ಗೂಯಿಲಾಳು ಟೋಲ್ ಬಳಿ ಆರೋಪಿ ಇರುವ ಖಚಿತ ಮಾಹಿತಿ ಪಡೆದು ಶುಕ್ರವಾರ ಬಂಧಿಸಿದ್ದಾರೆ. ಹೀಗಾಗಿ ಪ್ರಜ್ವಲ್ ಅಶ್ಲೀಲ ವಿಡಿಯೋ ಇತ್ತು ಎನ್ನಲಾದ ಪೆನ್ಡ್ರೈವ್ಗಳನ್ನ ರಿಲೀಸ್ ಮಾಡಿದ್ದು ಯಾರು..? ದೇವರಾಜೇಗೌಡ್ರ ಬಳಿ ಇದ್ದ ಪೆನ್ಡ್ರೈವ್ಗಳನ್ನ ಯಾರ್ಯಾರಿಗೆ ಕೊಟ್ಟಿದ್ರು..? ಈ ಪ್ರಕರಣದ ಆಳ ಅಗಲ ಎಷ್ಟು ಅನ್ನೋದನ್ನ ಜಾಲಾಡಲು SIT ಅಧಿಕಾರಿಗಳಿಗೆ ಅನುಕೂಲವಾಗಲಿದೆ.
ಇನ್ನ ಪ್ರಜ್ವಲ್ ಪೆನ್ಡ್ರೈವ್ ಕಹಾನಿ ಹಿಂದೆ ಹೆಚ್ಡಿಕೆ ಮತ್ತು ಬಿಜೆಪಿ ಸ್ಕ್ರೀಪ್ಟ್, ಡೈರೆಕ್ಷನ್ ಇತ್ತು ಅಂತೇಳಿ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿ ಕೆಲವು ಮಹತ್ವದ ಅಂಶಗಳನ್ನ ಬಿಚ್ಚಿಟ್ಟಿದೆ. ಹಾಗಾದ್ರೆ ಆ ಟ್ವೀಟ್ನಲ್ಲಿ ಏನಿದೆ ಗೊತ್ತಾ.? ಅದನ್ನೂ ತೋರಿಸ್ತೀವಿ ನೋಡಿ. ದೇವರಾಜೇಗೌಡ ಏಕಾಏಕಿ ಪತ್ರಿಕಾಗೋಷ್ಠಿ ನಡೆಸಿ ಪೆನ್ ಡ್ರೈವ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಹೆಸರನ್ನು ಎಳೆದು ತಂದಾಗಲೇ ಇಲ್ಲೇನೋ ಮಸಲತ್ತಿದೆ ಅನ್ನೋ ಗುಮಾನಿ ದಟ್ಟವಾಗಿತ್ತು. ಆದರೆ ದೇವರಾಜೇಗೌಡನ ಮಾತುಗಳ ಸ್ಕ್ರೀಪ್ಟ್, ಡೈರೆಕ್ಷನ್ ಎಲ್ಲವೂ ಬಿಜೆಪಿ ಹೈಕಮಾಂಡಿನದ್ದು ಎಂದು ಬಹಿರಂಗವಾಗಿದೆ. ಒಂದೇ ಏಟಿನಲ್ಲಿ ಜೆಡಿಎಸ್ ಪಕ್ಷವನ್ನು ಮುಳುಗಿಸುವುದರ ಜೊತೆಗೆ ಕಾಂಗ್ರೆಸ್ ನಾಯಕರನ್ನೂ ಟಾರ್ಗೆಟ್ ಮಾಡುವ ಮಹಾ ಕುತಂತ್ರ ಅಮಿತ್ ಶಾ ಅವರದ್ದು. ಆದರೆ ಕಾಂಗ್ರೆಸ್ ನಾಯಕರ ಕೂದಲು ಕೊಂಕಿಸಲು ಅಸಾಧ್ಯದ ಮಾತು ಎಂಬುದನ್ನು ಅರ್ಥ ಮಾಡಿಕೊಂಡರೆ ಒಳಿತು. ಈ ಪೆನ್ ಡ್ರೈವ್ ಪ್ರಕರಣದ ಹಿಂದೆ ಬಿಜೆಪಿ ಹಾಗೂ ಬ್ರದರ್ ಸ್ವಾಮಿಯ ಬಹುದೊಡ್ಡ ಷಡ್ಯಂತ್ರ ಅಡಗಿದೆ. ಕರ್ನಾಟಕ ಬಿಜೆಪಿ ಎಂಬ ಅನೈತಿಕ ರಾಜಕೀಯ ಪಕ್ಷಕ್ಕೆ ಕನಿಷ್ಠ ನೈತಿಕ ಪ್ರಜ್ಞೆ ಇಲ್ಲದಿರುವುದು ರಾಜಕೀಯ ಕ್ಷೇತ್ರಕ್ಕೆ ಕಳಂಕತಂದಂತಾಗಿದೆ ಅಂತೇಳಿ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿ ಕಿಡಿಕಾರಿದೆ.
ಇನ್ನ ಇಷ್ಟಕ್ಕೆ ನಿಲ್ಲದ ರಾಜ್ಯ ಕಾಂಗ್ರೆಸ್, ಬ್ರದರ್ ಸ್ವಾಮಿಯವರಿಗೆ ಮೊದಲೇ ಪ್ರಜ್ವಲ್ ರೇವಣ್ಣನ ಕರ್ಮಕಾಂಡದ ಬಗ್ಗೆ ತಿಳಿದಿತ್ತು ಎಂಬುದನ್ನು ಸ್ವತಃ ದೇವರಾಜೇಗೌಡನೇ ಒಪ್ಪಿಕೊಂಡಿದ್ದಾರೆ. “ನಾನು 2 ತಿಂಗಳ ಹಿಂದೆಯೇ ಫೋನ್ ಮೂಲಕ ಬ್ರದರ್ ಸ್ವಾಮಿಯವರನ್ನು ಮಾತಾಡಿಸಿದ್ದೆ, ಡ್ರೈವರ್ ಕಾರ್ತಿಕ್ನ ಜಮೀನು ವಿವಾದವನ್ನು ಬಗೆಹರಿಸಲು ಹೇಳಿದ್ದೆ“ ಎಂದು ಹೇಳಿದ್ದಾರೆ ದೇವರಾಜೇಗೌಡ. ವಿಷಯ ಮೊದಲೇ ತಿಳಿದಿದ್ದರೂ ಬ್ರದರ್ ಸ್ವಾಮಿಗಳು ಏಕೆ ಸುಮ್ಮನಿದ್ದರು.? ರೇವಣ್ಣ ಕುಟುಂಬದ ಹಗರಣ ಹೊರಗೆ ಬಂದರೆ ಬರಲಿ ಎಂಬ ಧೋರಣೆಯಲ್ಲಿದ್ದರೆ.? ಮಹಿಳೆಯರಿಗಾದ ಅನ್ಯಾಯದ ಬಗ್ಗೆ ಕಾಳಜಿ ಬರಲಿಲ್ಲವೇ ಅಂತೇಳಿ ರಾಜ್ಯ ಕಾಂಗ್ರೆಸ್ ಹೆಚ್ಡಿಕೆ ಸೂಕ್ಷ್ಮ ನಡೆಯನ್ನ ಪ್ರಶ್ನೆ ಮಾಡಿದೆ.. ಹಾಗಾದ್ರೆ ಹಾಸನ ಸಂಸದ ಪ್ರಜ್ವಲ್ ಪೆನ್ಡ್ರೈವ್ ಪ್ರಕರಣದ ಮಾಸ್ಟರ್ ಮೈಂಡ್ ಯಾರು.? ಬಿಜೆಪಿಯೋ..? ಹೆಚ್ಡಿ ಕುಮಾರಸ್ವಾಮಿಯೋ..? ಕಾಂಗ್ರೆಸ್ ಎತ್ತಿರೋ ಗಂಭೀರ ಪ್ರಶ್ನೆಗಳ ಬಗ್ಗೆ ನೀವೇನಂತಿರಾ..?