ದಾವಣಗೆರೆ : ದಾವಣಗೆರೆ ಜಿಲ್ಲೆಯ ಹಿರಿಯ ರಾಜಕಾರಣಿ, ದಾವಣಗೆರೆ ಹಾಗೂ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕರಾಗಿ, ವಿಧಾನಸಭಾ ಉಪಾಧ್ಯಕ್ಷರಾಗಿ, ಕರ್ನಾಟಕ ಸರ್ಕಾರದ ಶಿಕ್ಷಣ ಮತ್ತು ಬೃಹತ್ ಕೈಗಾರಿಕಾ ಸಚಿವರಾಗಿ ಸೇವೆ ಸಲ್ಲಿಸಿದ ಶ್ರೀಮತಿ ನಾಗಮ್ಮ ಸಿ ಕೇಶವಮೂರ್ತಿ ನಿಧನರಾಗಿದ್ದು, ಕೈ ನಾಯಕಿ ಸವಿತಾಬಾಯಿ ಕಂಬನಿ ಮಿಡಿದಿದ್ದಾರೆ.
ಮೃತರ ಆತ್ಮ ಶಾಂತಿ ಸಿಗಲೆಂದು ಕೋರಿರುವ ಸವಿತಾಬಾಯಿ,ಮಾಜಿ ಸಚಿವೆ ನಾಗಮ್ಮ ಕೇಶವಮೂರ್ತಿ ಆರು ದಶಕಕ್ಕೂ ಹೆಚ್ಚಿನ ಕಾಲ ಬಡಜನರ ಸೇವೆಸಲ್ಲಿಸಿದ್ದು ಬಡಜನರು ಅವರನ್ನು ದಾವಣಗೆರೆಯ ಇಂದಿರಾ ಗಾಂಧಿ ಎಂದು ಕರೆಯುತಿದ್ದರು.ಅಪಾರ ಜನಪ್ರಿಯತೆ ಹೊಂದಿದ್ದ ಅವರು ಮಹಿಳಾ ಸಬಲೀಕರಣಕ್ಕಾಗಿ ದಾವಣಗೆರೆಯ ಪ್ರತಿಷ್ಠೆತೆಯ ಪಿ ಜೆ ಬಡಾವಣೆ ಹಾಗೂ ಎಂ ಸಿ ಸಿ ಎ ಬ್ಲಾಕ್ ನಲ್ಲಿ ವನಿತಾ ಸಮಾಜವನ್ನು ಸ್ಥಾಪನೆ ಮಾಡಿ ಸಾವಿರಾರು ಮಹಿಳೆಯರ ನೆರವಿಗೆ ನಿಂತರು.
ಶ್ರೀಮತಿ ನಾಗಮ್ಮ ಸಿ ಕೇಶವಮೂರ್ತಿ ಯವರ ನಿಧನದಿಂದ ದಾವಣಗೆರೆ ಜಿಲ್ಲೆ, ಕರ್ನಾಟಕ ರಾಜ್ಯ ಹಾಗೂ ದೇಶಕ್ಕೆ ತುಂಬಾ ನಷ್ಟವಾಗಿದೆ. ಮೃತರ ಆತ್ಮಕ್ಕೆ ದೇವರು ಶಾಂತಿ ನೀಡಲಿ. ಅವರ ಅಗಲಿಕೆಯ ದುಃಖ ಸಹಿಸುವ ಶಕ್ತಿ ಅವರ ಕುಟುಂಬ ವರ್ಗಕ್ಕೆ ದಯಪಾಲಿಸಲಿ ಎಂದು ದೇವರಲ್ಲಿ ಬೇಡುತ್ತೇನೆ ಎಂದು ಸವಿತಾಬಾಯಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.