ತೀರ್ಥಹಳ್ಳಿ: ತಾಲೂಕಿನ ದೇವಂಗಿ ಗ್ರಾ ಪಂ ವ್ಯಾಪ್ತಿಗೆ ಸೇರಿದ ಹಡಗಿನಮಕ್ಕಿಗೆ ಸಂಪರ್ಕಿಸುವ ದಾರಿಯನ್ನು ಸುಸಜ್ಜಿತವಾಗಿ ನಿರ್ಮಿಸದೇ ಇರುವ ಆಡಳಿತದ ವಿರುದ್ಧ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ ಫಲಕ ಹಾಕಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ನಮ್ಮ ಗೋಳು ಕೇಳದ ಜನಪ್ರತಿನಿಧಿಗಳೇ ಚುನಾವಣಾ ಪ್ರಚಾರಕ್ಕಾಗಿ ನಮ್ಮಲ್ಲಿಗೆ ಬರಬೇಡಿ ಎಂಬ ಬೋರ್ಡ್ ಅನ್ನು ರಾಷ್ಟ್ರ ಕವಿಗಳ ಜನ್ಮ ಸ್ಥಳ ಕುಪ್ಪಳಿ ಸಮೀಪದ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಹಾಕಲಾಗಿದೆ.
ಚುನಾವಣಾ ಸಮಯದಲ್ಲಿ ಜನಪ್ರತಿನಿಧಿ ಗಳಿಗೆ ಹಾಗೂ ಯಾವುದೇ ಪಕ್ಷದ ಕಾರ್ಯಕರ್ತರಿಗೆ ನಮ್ಮ ಗ್ರಾಮಕ್ಕೆ ಪ್ರವೇಶವಿರುವುದಿಲ್ಲ ಎಂದು ಹೇಳಿದ್ದಾರೆ.ಕಳೆದ 20 ದಿನದ ಹಿಂದೆ ಇದೆ ಗ್ರಾ ಪಂ ವ್ಯಾಪ್ತಿಯ ಬಾಣಂಕಿ ಗ್ರಾಮದ ಗ್ರಾಮಸ್ಥರು ರಸ್ತೆ ಸರಿ ಇಲ್ಲವೆಂದು ಚುನಾವಣೆ ಬಹಿಷ್ಕಾರ ಮಾಡಿದ್ದರು. ಈಗ ಇದು ಎರಡನೇ ಬಹಿಷ್ಕಾರದ ಕೂಗು ಒಂದೇ ಗ್ರಾಪಂ ಯಲ್ಲಿ ಎದ್ದಿದೆ.