ದಾವಣಗೆರೆ : ಬಂಜಾರಾ ಸಮುದಾಯದಲ್ಲಿ ಜನಿಸಿ ಸಾಹಿತ್ಯಕ್ಷೇತ್ರದಲ್ಲಿ ಉನ್ನತ ಕಾರ್ಯ ಮಾಡುತ್ತಿರುವ ಇಂದುಮತಿ ಲಮಾಣಿಯವರಿಂದ ಶ್ರೀ ಸೇವಾಲಾಲ್ ಮಹಾರಾಜರ ಕುರಿತಾದ ಗ್ರಂಥ ಹೊರಬರಲಿ ಎಂದು ಪಂಪ ಪ್ರಶಸ್ತಿ ಪುರಸ್ಕೃತ ಶ್ರೀ ಬಾಬು ಕೃಷ್ಣಮೂರ್ತಿ ಹೇಳಿದರು.
ಬಸವನ ಬಾಗೇವಾಡಿಯಲ್ಲಿ ನಡೆದ ಶರಣ ಸಾಹಿತ್ಯ ಪರಿಷತ್ತು ಹಾಗೂ ಗೋರ ಬಾಯಿ ಟೋಳಿ (ರಿ ) ಸಹಯೋಗದೊಂದಿಗೆ ದಿವಂಗತ ಶ್ರೀ ಶಂಕರ ಢಾಕಪ್ಪ ಲಮಾಣಿಯವರ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ ಪ್ರದಾನ ಹಾಗೂ ಇಂದುಮತಿ ಲಮಾಣಿ ಅವರು ಬರೆದ ” ಕಾಡಿನ ಕರಡಿ ನಾಡಿಗೆ ಬಂತು”  ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಸಾಹಿತ್ಯಕ್ಕೆ ಯಾವುದೇ ಜಾತಿ ಮತ ಇರುವುದಿಲ್ಲ.

ಸಮಾಜ ಪರಿವರ್ತನೆಯ ಕಾಳಜಿ ಇಂದುಮತಿಯವರಿಗಿದೆ. ಸಮಾಜ ತಿದ್ದುವಲ್ಲಿ ವಿಶ್ವಗುರು ಬಸವಣ್ಣ ಮತ್ತು ಸಂತ ಸೇವಾಲಾಲರ ಪಾತ್ರ ಮಹತ್ವದ್ದಾಗಿದೆ..ಬಂಜಾರಾ ಜನಾಂಗವನ್ನು ಜಾಗೃತಿ ಮೂಡಿಸಿದವರು ಸಂತ ಸೇವಾಲಾಲರು. ಅವರು ಪ್ರಕೃತಿ ಮತ್ತು ಹಿರಿಯರನ್ನು ಬಹಳ ಗೌರವಿಸಿದರು ಎಂದರು.

ಸಾನಿಧ್ಯ ವಹಿಸಿದ್ದ ಸಿದ್ದಲಿಂಗ ಮಹಾ ಸ್ವಾಮೀಜಿಯವರು ಇಂಥಹ ಸಮಾರಂಭವು ಇತರರಿಗೆ ಮಾದರಿ. ಇದು ಪತಿ ಪತ್ನಿಯರ ಸಮಭಾವ ಸಂಪ್ಪ್ರೀತಿ ದೋತ್ಯಕ ಅಭೂತಪೂರ್ವ ದತ್ತಿನಿಧಿ ಕಾರ್ಯಕ್ರಮವೆಂದು ನುಡಿದರು.

ಹಿರಿಯ ಸಾಹಿತಿ ಹಾಗೂ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ  ಇಂದುಮತಿ ಲಮಾಣಿ ಮಾತನಾಡಿ , ಒಬ್ಬ ಮಹಿಳೆಯಾದ ನಾನು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದು ಪತಿ ಶಂಕರ ನೀಡಿದ ಕೊಡುಗೆ.  ಅಲ್ಲದೆ  ಹೆಸರಾಂತ ಸಾಧಕರನ್ನು ಗುರುತಿಸಿ ಪತಿಯ ಹೆಸರಿನಲ್ಲಿ ಸಾಧಕರಿಗೆ ಪುರಸ್ಕಾರ ನೀಡಲು ಇಂಥಹ ವೇದಿಕೆ ರಚಿಸಲು  ಮಕ್ಕಳ ಸಹಕಾರ ಬಹು ಪ್ರಮುಖವಾಗಿದೆ ಎಂದರು.

ಪ್ರಮುಖರಾದ ಸುಧಾ ಬಿಜ್ಜರಗಿ ಮಾತನಾಡಿ, ಇದೊಂದು ಅಪರೂಪದ ಕಾರ್ಯಕ್ರಮ, ಬದುಕು ಅಂದರೇನು ಎಂದು ಅರಿತುಕೊಳ್ಳಲು ಈ ವೇದಿಕೆ ಒಂದು ಮಹತ್ತರವಾದ ಮಾರ್ಗದರ್ಶಿ ಎಂದರು.

ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಶ್ರೀ ಜಂಬುನಾಥ ಕಂಚಾಣಿಯವರು ಕೃತಿ ಬಿಡುಗಡೆ ಮಾಡಿ ಶರಣರ ಆದರ್ಶವೇ ಇಲ್ಲಿ ಬೆಳಕಾಯಿತು ಎಂದರು.

ಸಾಹಿತಿ ಕಮಲಾ ಗೆಜ್ಜೆ ಕೃತಿ ಪರಿಚಯ ಮಾಡಿ, ಶಿಶು ಸಾಹಿತ್ಯ ರಚಿಸುವುದು ಸುಲಭವಲ್ಲ. ಲೇಖಕರು ಮಕ್ಕಳೇ ತಾವಾಗಿ ಕಥೆ ಕವನ ಬರೆದಾಗ ಸುಲಲೀತ ಶಿಶು ಸಾಹಿತ್ಯ ಆಗಬಲ್ಲದು. ಆ ಸಾಮರ್ಥ್ಯ ಇಂದುಮತಿ ಅವರಿಗಿದೆ ಎಂದರು.

ಶರಣ ಸಾಹಿತ್ಯ ಪರಿಷತ್ತಿನ ತಾಲೂಕಾ ಅಧ್ಯಕ್ಷರು ಶ್ರೀ ವೀರಣ್ಣ ಮರ್ತುರ ಸೇರಿದಂತೆ ಅನೇಕ ಗಣ್ಯರು ಮಾತನಾಡಿದರು.ಈ ಸಂದರ್ಭದಲ್ಲಿ ಶ್ರೀ ವಸಂತ ಚವ್ಹಾಣ ಗೀತಗಾಯನ ಮಾಡಿದರು. ಡಿವೈಎಸ್ಪಿ ಬಸವರಾಜ್, ಶೇಖರ ಆರ್ ಲಮಾಣಿ, ವಿಕ್ರಾಂತ ಬಾಗೇವಾಡಿ, ಪ್ರೇಮಾ ಪವಾರ, ಅದ್ಯಕ್ಷರು ರಾಜ್ಯ ಬಂಜಾರಾ ರಕ್ಷಣಾ ವೇದಿಕೆ ಬಸವರಾಜ್, ಶ್ರೀ ಆರ್ ಬಿ ನಾಯಕ್, ಪತ್ರಕರ್ತ ಶ್ರೀ ಚಂದು ಜಾಧವ, ತಾಲೂಕಾ ಕಸಾಪ ಅಧ್ಯಕ್ಷ ಶಿವಾನಂದ ಡೋಣೂರು, ನ್ಯಾಯವಾದಿ ಸಂಘದ ಅಧ್ಯಕ್ಷ ಎಚ್ ಎಸ್ ಗುರಡ್ಡಿ ಎಚ್ ಎಸ್ ಬಿರಾದಾರ, ಎಸ್ ಎಸ್ ಝಳಕಿ, ಪರಶುರಾಮ, ಶ್ರೀಮತಿ ಗೀತಾ ದಾಮೋದರ, ಜ್ಯೋತಿ ಶೇಖರ, ಶಾಂತಾ ಧರ್ಮೆಂದ್ರ ಪಾಟೀಲ, ಗಜಲ್ ಸಾಹಿತಿ ಪ್ರಭಾವತಿ ದೇಸಾಯಿ, ಶ್ರೀ ತುಕಾರಾಂ ರಜಪೂತ, ಮಾನಸಿಂಗ ನಾಯಕ, ಜಯಶ್ರೀ ನಾಯಕ, ಸೀಮಾ ಕೇದಾರಿ ಧನವಡೆ, ಕದಳಿ ವೇದಿಕೆ ಅಧ್ಯಕ್ಷೆ ಸಾವಿತ್ರಿ ಕಲ್ಯಾಣ ಶೆಟ್ಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಸುನಂದಾ ಕೋರಿ ಪ್ರಾರ್ಥನೆ ಸಲ್ಲಿಸಿದರು.ಪಂಡೀತ ಅವಜಿ ಸಮಾರೋಪ ಭಾಷಣ ಮಾಡಿದರು. ಅಶೋಕ ಸಾಲ್ಹಳ್ಳಿ ನೀರೂಪಣೆ ಮಾಡಿದರು…

 

 

Share.
Leave A Reply

Exit mobile version