ಸಾಗರ: ಮಾಜಿ ಸಿಎಂ ಬಂಗಾರಪ್ಪ ಅವರಿಗೆ ಆಶ್ರಯ ಕೊಡಲಾಗದ ಕುಮಾರ ಬಂಗಾರಪ್ಪ ಸ್ವಂತ ತಂದೆಯನ್ನು ಮನೆಯಿಂದ ಹೊರ ದೂಡಿದರು. ಇಂತವರಿಂದ ನೀತಿ ಪಾಠದ ಅವಶ್ಯಕತೆ ನನಗಿಲ್ಲ ಎಂದು ಸಾಗರ ಕ್ಷೇತ್ರದ ಶಾಸಕ ಗೋಪಾಲ ಕೃಷ್ಣ ಬೇಳೂರು ವಾಗ್ದಾಳಿ ನಡೆಸಿದರು.
ಆವಿನಳ್ಳಿಯಲ್ಲಿ ಬುಧವಾರ ಆಯೋಜಿಸಿದ್ದ ಗೀತಾ ಶಿವರಾಜಕುಮಾರ ಪರ ಮತಯಾಚನೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕುಮಾರ ಬಂಗಾರಪ್ಪ ಅವರಲ್ಲಿ ‘ಬಂಗಾರಪ್ಪ’ ಎನ್ನುವ ಹೆಸರು ಕಿತ್ತು ಬದಿಗಿಟ್ಟರೆ, ಅವರದು ನಾಯಿ ಪಾಡಾಗಲಿದೆ ಎಂದು ಕಿಡಿಕಾರಿದರು.