ದಾವಣಗೆರೆ : ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಂದು ಚುನಾವಣೆ ನಡೆಯುತ್ತಿದ್ದು, ಬೆಳಗ್ಗಿನಿಂದಲೇ ಸರತಿ ಸಾಲಿನಲ್ಲಿ ನಿಂತು ಜನರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
ನಗರದಲ್ಲಿ ಮಧ್ಯಾಹ್ನ 1ಗಂಟೆವರೆಗೆ ಶೇಕಡ 42 ಪ್ರತಿಶತ ಮತದಾನ ದಾಖಲಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು, ಕಾವಿಧಾರಿಗಳಿಂದ ತಮ್ಮ ಹಕ್ಕು ಚಲಾಯಿಸಿದರು. ಬೆಳಗ್ಗಿನಿಂದಲೇ ಮತದಾನ ಆರಂಭವಾಗಿದ್ದು, ಜನರು ಬಿರುಸಿನಿಂದ ಮತದಾನ ಮಾಡಲು ಮತಗಟ್ಟೆ ಕೇಂದ್ರಗಳಿಗೆ ಬರುತ್ತಿದ್ದಾರೆ.
ಮತಗಟ್ಟೆಗಳಲ್ಲಿ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆಮಾಡಿಕೊಡಲಾಗಿದೆ. ಅಲ್ಲದೇ, ಮತಗಟ್ಟೆಗೆ ಬರುವ ಮತದಾರರಿಗೆ ಬಿಸಿಲಿನಿಂದ ಸಮಸ್ಯೆಯಾಗದಂತೆ ನೆರಳಿನ ವ್ಯವಸ್ಥೆ ಮಾಡಲಾಗಿದೆ.ನಗರ ಸೇರಿದಂತೆ ಜಿಲ್ಲೆಯಲ್ಲಿ ಮತದಾನ ವೇಳೆ ಯಾವುದೇ ಅಕ್ರಮ, ಅಹಿತಕರ ಘಟನೆ ನಡೆಯದಂತೆ ಪೊಲೀಸರನ್ನು ನಿಯೋಜಿಸಲಾಗಿದೆ.
ಜಗಳೂರಿನಲ್ಲಿ ಶೇ.44, ಹರಿಹರ ಶೇ.45, ದಾವಣಗೆರೆ ಉತ್ತರ ಶೇ.41 ದಾವಣಗೆರೆ ದಕ್ಷಿಣ ಶೇ.37, ಮಾಯಕೊಂಡ ಶೇ.47, ಚನ್ನಗಿರಿ ಶೇ.41, ಹೊನ್ನಾಳಿ ಶೇ.41, ಹರಪನಹಳ್ಳಿ ಶೇ. 39ಮತದಾನವಾಗಿದ್ದು, ಒಟ್ಟು ಶೇ.42.33 ರಷ್ಟು ಮತದಾನವಾಗಿದೆ