ದಾವಣಗೆರೆ : ಗೋ ಬ್ಯಾಕ್ ಮೋದಿ, ಪ್ರಜ್ವಲ್ ರೇವಣ್ಣ ಮಿತ್ರ ಮೋದಿಗೆ ಧಿಕ್ಕಾರವೆಂದು ಘೋಷಿಸಿದವರನ್ನು ಪೊಲೀಸರು ಬಂಧಿಸಿದರು.
ಶಾಮನೂರು ರಸ್ತೆಯಿಂದ ಹದಡಿ ರಸ್ತೆಯ ಡಾಕ್ಟರ್ ಅಂಬೇಡ್ಕರ್ ಸರ್ಕಲ್ ವರೆಗೆ ಮೆರವಣಿಗೆ ಮೂಲಕ ಜಿಲ್ಲಾ ಕಾಂಗ್ರೆಸ್ ಮುಖಂಡರುಗಳು ಆಗಮಿಸಿ ಮೋದಿ ಕಾರ್ಯಕ್ರಮದ ಕಡೆಗೆ ಹೋಗಲು ಮುಂದಾದಾಗ ಪೊಲೀಸ ರು ಬಂಧಿಸಿ ವಿದ್ಯಾನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು.
ಕಪ್ಪು ಭಾವುಟ ಪ್ರತಿಭಟನೆ ನೇತೃತ್ವವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ, ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯರು ಗಳಾದ ಕೆ. ಚಮನ್ ಸಬ್, ಎ. ನಾಗರಾಜ್, ಜಿಲ್ಲಾ ಕಾಂಗ್ರೆಸ್ ಮುಖಂಡರುಗಳಾದ ಅಲಿ ರಹಮತ್ ಪೈಲ್ವಾನ್, ಗಿರಿಧರ್ ಸತಾಲ್, ಕೆ. ಎಂ. ಮಂಜುನಾಥ್, ಜಮಿರ್, ಮಾರುತಿ ಹರಿಹರ, ಡಿ. ಎಲ್. ನಾಗರಾಜ್, ತಾಹಿರ್ ಸಮೀರ್, ರೆಹಮಾನ್ ವಹಿಸಿಕೊಂಡಿದ್ದರು.