ಭದ್ರಾವತಿ : ವಂಶವೃಕ್ಷವನ್ನೇ ತಿದ್ದಿ ಸುಳ್ಳು ವರದಿ ನೀಡಿದ ಕಂದಾಯ ಇಲಾಖೆಯ ನಿರೀಕ್ಷಕ ಮಾನೋಜಿರಾವ್ ಅವರನ್ನು ಸೇವೆಯಿಂದ ವಜಾ ಮಾಡಬೇಕು ಎಂದು  ಮಾನವಹಕ್ಕುಗಳ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಬಿ.ಎನ್.ರಾಜು ಆಗ್ರಹಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭದ್ರಾವತಿ ತಾಲ್ಲೂಕು ಹೊಳೆಹೊನ್ನೂರು ಹೋಬಳಿಯ ಡಿ.ಬಿ.ಹಳ್ಳಿ ಗ್ರಾಮದ ಸರ್ವೆ ನಂ. 77/4ರ ವಿಚಾರ ಸಂಬಂಧ ವಂಶವೃಕ್ಷಕ್ಕಾಗಿ ಸಂಗಪ್ಪ ಎನ್ನುವರು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಭದ್ರಾವತಿ ತಹಶೀಲ್ದಾರ್ ಮತ್ತು ಉಪತಹಶೀಲ್ದಾರ್ ಪರಿಶೀಲನೆಗೆ ಬಂದಾಗ ತಿಮ್ಮಕ್ಕ ಎಂಬ ವ್ಯಕ್ತಿ ಇಲ್ಲ ಎಂದು ಸಾರ್ವಜನಿಕರು ತಿಳಿಸಿದ್ದರು.ಆದರೂ ಕೂಡ ಈತ ತಿಮ್ಮಕ್ಕ ಎನ್ನುವವರು ಇದ್ದರು ಅವರು ಮರಣ ಹೊಂದಿದಾರೆ ಎಂದು ಸುಳ್ಳು ವರದಿ ನೀಡಿದ್ದಾರೆ. ಇದಕ್ಕಾಗಿ ಅವರು ಲಂಚ ಪಡೆದಿದ್ದಾರೆ. ಗ್ರಾಮಸ್ಥರ ಹೇಳಿಕೆಯನ್ನೇ ತಿರುಚಿ ಬರೆದಿರುವ ಮಾನೋಜಿರಾವ್ ಅವರನ್ನು ಕೂಡಲೇ ಬಂಧಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಇದೇ ರೀತಿ ಭದ್ರಾವತಿ ತಾಲ್ಲೂಕಿನಲ್ಲಿ ಅನೇಕ ಘಟನೆಗಳು ನಡೆಯುತ್ತಿವೆ. ಖಾತೆ ಬದಲಾವಣೆ, ಪಿಂಚಣಿ ವರದಿ, ಪುನರ್‍ವಸತಿ ಯೋಜನೆ ಮುಂತಾದ ವಿಷಯಗಳಿಗೆ ಸಂಬಂಧಪಟ್ಟಂತೆ ಪರಿಶೀಲನೆಗೆ ಬಂದಾಗ ಈ ವ್ಯಕ್ತಿ ನಕಲಿ ದಾಖಲೆ ನೀಡುತ್ತಾನೆ. ಆದ್ದರಿಂದ ಇವನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಜೂ.10ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಬ್ರಹ್ಮಲಿಂಗಯ್ಯ, ಅಜಿತ್, ಜಮೀರ್, ಹೇಮಾವತಿ, ಯಲ್ಲಪ್ಪ, ಕುಮಾರ್, ಲೋಕೇಶ್ ಮುಂತಾದವರು ಇದ್ದರು.

 

Share.
Leave A Reply

Exit mobile version