ಶಿವಮೊಗ್ಗ.

ನಗರದ ಆಲ್ಕೋಳದಲ್ಲಿರುವ ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ(ರಿ) (ಎಸ್.ಎಮ್.ಎಸ್.ಎಸ್.ಎಸ್.) ವತಿಯಿಂದ ಶಿವಮೊಗ್ಗ ಜಿಲ್ಲಾ ಮೆಗಾನ್ ಬೋಧನಾ ಆಸ್ಪತ್ರೆಯ ಆವರಣದಲ್ಲಿ ರೋಗಿಗಳ ಜೊತೆಗೆ ಇರುವ ಸಹಾಯಕರಿಗೆ ಮತ್ತು ಬಡವರಿಗೆ ಕ್ರಿಸ್‍ಮಸ್ ದಿನಾಚರಣೆಯ ಅಂಗವಾಗಿ “ಚೈತನ್ಯ ಅನ್ನ” ಕಾರ್ಯಕ್ರಮದಲ್ಲಿ “ಹಸಿದವರಿಗೆ ಅನ್ನ ಯೋಜನೆ”ಯ ಮೂಲಕ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಮಾಡಲಾಯಿತು.

ಈ ಕಾರ್ಯಕ್ರಮದಲ್ಲ್ಲಿ ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಹಾಗೂ ಸಂಸ್ಥೆಯ ಅಧ್ಯಕ್ಷರಾದ ಡಾ. ಪ್ರಾನ್ಸಿಸ್ ಸೆರಾವೋ ಎಸ್.ಜೆ. ರವರು ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ “ಹಸಿದವರಿಗೆ ಅನ್ನ ಯೋಜನೆ”ಯನ್ನು ಊಟ ವಿತರಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ, ಮಾತನಾಡಿದ ಅವರು ಬಡವರಿಗೆ, ಹಸಿದವರಿಗೆ ಸಂಸ್ಥೆಯ ವತಿಯಿಂದ ಇದೊಂದು ಸಣ್ಣ ಸೇವಾ ಕಾರ್ಯಕ್ರಮವಾಗಿದ್ದು, ಕ್ರಿಸ್‍ಮಸ್ ಎಂದರೆ ಕೊಡುವುದು, ಪ್ರೀತಿಯ ಹಂಚಿಕೆ ಮತ್ತು ದಾನ ಮಾಡುವ ಮೂಲಕ ಸೇವೆ ಮಾಡುವುದಾಗಿದೆ. ಈ ದಿನ ಸಂಸ್ಥೆಯು ಮಾಡುತ್ತಿರುವ ಕೆಲಸವು ಉತ್ತಮವಾಗಿದ್ದು, ಪ್ರತಿಯೊಬ್ಬರು ಈ ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯತ್‍ನ ಮಾಜಿ ಅಧ್ಯಕ್ಷರಾದ ಶ್ರೀಯುತ ಕಲಗೋಡು ರತ್ನಾಕರ್‍ರವರು ಹಾಗೂ ಖ್ಯಾತ ವಕೀಲರು ಹಾಗೂ ಸಾಮಾಜಿಕ ಹೋರಾಟಗಾರರಾದ ಶ್ರೀಯುತ ಶ್ರೀಪಾಲ್‍ರವರು ಭಾಗವಹಿಸಿದ್ದರು. ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್ ಪಿಯುಸ್ ಡಿಸೋಜರವರು ಈ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿ ಸಂಸ್ಥೆಯ ವತಿಯಿಂದ “ಚೈತನ್ಯ ಅನ್ನ” ಕಾರ್ಯಕ್ರಮದ ಮೂಲಕ “ಹಸಿದವರಿಗೆ ಅನ್ನ ಯೋಜನೆ”ಯನ್ನು ಮುಂದಿನ ದಿನಗಳಲ್ಲಿ ನಡೆಸುವುದಾಗಿ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಸುಮಾರು 2000 ಕ್ಕೂ ಹೆಚ್ಚು ಜನರು ಈ ಅನ್ನ ಯೋಜನೆಯ ಸದುಪಯೋಗ ಪಡೆದುಕೊಂಡರು. ಈ ಕಾರ್ಯಕ್ರಮವನ್ನು ವೀಕ್ಷಿಸಿದ ಜನರು ಇದೊಂದು ಉತ್ತಮ ಕಾರ್ಯವಾಗಿದ್ದು, ಭಗವಂತನು ನೀವು ಮಾಡುವ ಕೆಲಸಕ್ಕೆ ನೂರ್ಮಡಿ ಸಂಭಾವನೆಯನ್ನು ನೀಡಿ ಆರ್ಶಿವದಿಸಿಲಿ ಹಾಗೂ ಕೆಲವು ಮಂದಿ ನಾವು ಸಹ ನಿಮ್ಮ ಕಾರ್ಯಕ್ರಮಕ್ಕೆ ಸಹಾಯ ಹಸ್ತ ನೀಡಿ ಸಹಕರಿಸುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದ ಸಮಯದಲ್ಲಿ ಉಪಸ್ಥಿತರಿದ್ದ ಜನರು ಸ್ವಯಂಪ್ರೇರಿತರಾಗಿ ಊಟ ಬಡಿಸುವಲ್ಲಿ, ಸ್ವಚ್ಛತೆಯಲ್ಲಿ ಭಾಗವಹಿಸಿ ಸಹಕಾರ ನೀಡಿದರು. ಹಾಗೂ ಈ ಕಾರ್ಯಕ್ರಮಕ್ಕೆ ಹೊಳಲೂರು, ಹಸೂಡಿ, ಕೋಟೆಗಂಗೂರು ಒಕ್ಕೂಟದ ಮಹಿಳಾ ಪ್ರತಿನಿಧಿಗಳು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದರು. ಸಂಸ್ಥೆಯ ಸಿಬ್ಬಂದಿಗಳು ಈ ಯೋಜನೆಯನ್ನು ಯಶಸ್ವಿಗೊಳಿಸುವಲ್ಲಿ ತಮ್ಮದೇ ಆದ ಸೇವೆಯನ್ನು ನೀಡಿರುತ್ತಾರೆ

Share.
Leave A Reply

Exit mobile version