ದಾವಣಗೆರೆ : ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆ ಮತ ಎಣಿಕೆ ಎರಡನೇ ಸುತ್ತು ಮುಕ್ತಾಯವಾಗಿದ್ದು, ಬಿಜೆಪಿ ಅಭ್ಯರ್ಥಿ ಧನಂಜಯ್ ಸರ್ಜಿ ತನ್ನ ಓಟವನ್ನು ಮುಂದುವರಿಸಿದ್ದಾರೆ. ಇನ್ನೂ ಪ್ರತಿಸ್ಪರ್ಧಿ ಆಯನೂರು ಮಂಜುನಾಥ್ ಎರಡನೇ ಸ್ಥಾನದಲ್ಲಿದ್ದು, ಮೂರನೇ ಸ್ಥಾನದಲ್ಲಿ ಬಿಜೆಪಿ ಅಭ್ಯರ್ಥಿ ರಘುಪತಿ ಭಟ್ ಇದ್ದಾರೆ.
ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎಸ್.ಪಿ.ದಿನೇಶ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಸದ್ಯ 2ನೇ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದ್ದು, ಡಾ.ಧನಂಜಯ ಸರ್ಜಿಗೆ 14054 ಮತಗಳು ಆಯನೂರು ಮಂಜುನಾಥ್ 4557 ಮತಗಳು, ರಘುಪತಿ ಭಟ್ 4877 ಮತಗಳು ಬಿದ್ದಿದೆ. ಒಟ್ಟು 28000 ಮತ ಎಣಿಕೆಯಾಗಿದೆ. ಒಟ್ಟು ಎರಡೂ ಸುತ್ತಿನ ಮತ ಎಣಿಕೆ 42000 ಆಗಿದೆ.