ದಾವಣಗೆರೆ : ಪಾತಕಿಗಳ ಲೋಕವನ್ನು ಲೇಡಿಸಿಂಗಂ ಖ್ಯಾತಿಯ ಉಮಾಪ್ರಶಾಂತ್ ನೇತೃತ್ವದ ಸೂಪರ್ ಕಾಪ್ ಡಿವೈಎಸ್ಪಿ ಬಸವರಾಜ್ ತಂಡ ಗಾಂಜಾ ಮಾರಾಟ ಮಾಡಲು ಸಜ್ಜಾಗಿದ್ದ ಒರಿಸ್ಸಾ ಮೂಲದವರನ್ನು ಹಿಡಿದು ಎಡೆಮುರಿಕಟ್ಟಿದ್ದಾರೆ.

ಡಿವೈಎಸ್ಪಿ ಬಸವರಾಜ್ ನೇತೃತ್ವದ ತಂಡ ಕ್ರೈಂ ಲೋಕದ ದುರುಳರನ್ನು ಹಿಡಿಯಲು ಸಾಕಷ್ಟು ಫೇಮೇಸ್ ಆಗಿದ್ದು, ಲೆಕ್ಕವಿಲ್ಲದಷ್ಟು ಪ್ರಕರಣ ಭೇದಿಸಿದ್ದಾರೆ. ಹಾಗಾಗಿಯೇ ಅವರ ಅನುಭವ ಗಾಂಜಾ ಮಾರಾಟ ಮಾಡುತ್ತಿದ್ದವರನ್ನು ಕಟ್ಟಿಹಾಕಲು ಸಹಕಾರಿಯಾಯಿತು. ಈ ಹಿನ್ನೆಲೆಯಲ್ಲಿ
ಅಕ್ರಮವಾಗಿ ಮಾರಾಟ ಮಾಡಲು ಸಂಗ್ರಹಿಸಿದ್ದ 10 ಲಕ್ಷ ಮೌಲ್ಯದ ಗಾಂಜಾವನ್ನು ಡಿವೈಎಸ್ಪಿ ನೇತೃತ್ವದ ತಂಡ ವಶಪಡಿಸಿಕೊಂಡು ಮೂವರನ್ನು ಅಂದರ್ ಮಾಡಿದೆ.‌

ಆರೋಪಿತರುಗಳಾದ 1] ಒರಿಸ್ಸಾದ ಖಾಲಿಕೋಟೆ ತಾಲೂಕ್, ಗಂಜಾಮ್ ಜಿಲ್ಲೆಯ ಕಂಚನ್ ಗ್ರಾಮದ
ಕೇಸಬಾ ಮೊಹಂತಿ (24), ಕಾಂಕ್ರಿಟ್ ಕೆಲಸ, ಇದೇ ಗ್ರಾಮದ ಸುಮಂತ ಸಾಹು (25), ಕೂಲಿ ಕೆಲಸ, ಸೈಯದ್ ಸಾಧಿಕ್ (27)ಕಾಂಕ್ರಿಟ್ ಕೆಲಸ, ವಾಸ: 1ನೇ ಮೇನ್, ಸರ್ಕಾರಿ ಶಾಲೆ ಹತ್ತಿರ, ಬೆಂಕಿನಗರ, ಹರಿಹರ ಇವರುಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ ಅಕ್ರಮವಾಗಿ ಮಾರಾಟ ಮಾಡಲು ಸಂಗ್ರಹಿಸಿಟ್ಟುಕೊಂಡಿದ್ದ ಸುಮಾರು 10 ಲಕ್ಷ ರೂ) ಮೌಲ್ಯದ ಸುಮಾರು 10 ಕೆಜಿ ಗಾಂಜಾವನ್ನು ಹಾಗು ಒಂದು ಬೈಕನ್ನು ಹರಿಹರದಲ್ಲಿ ವಶಪಡಿ ಸಿಕೊಂ ಡಿದ್ದಾರೆ.ಆರೋಪಿತರುಗಳನ್ನು ಹಾಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.

ಗಾಂಜಾ ವಾಸನೆ : ತಂಡ ರಚನೆ ಮಾಡಿದ್ದ ಎಸ್ಪಿ

ಸಾಮಾಜಿಕ ದೊಡ್ಡ ಪಿಡುಗಾದ ಮಾದಕ ವ್ಯಸನಮುಕ್ತ ಸಮಾಜ ನಿರ್ಮಾಣ ಹಾಗೂ ಮಾದಕ ವ್ಯಸನ ಮುಕ್ತ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಎಸ್ಪಿ ಉಮಾ ಪ್ರಶಾಂತ್ ದಾವಣಗೆರೆ ಜಿಲ್ಲೆಯಲ್ಲಿ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮಾದಕ ವಸ್ತುಗಳ ಸೇವೆನೆ ಹಾಗು ಮಾರಾಟ ಮಾಡುವವರ ಮೇಲೆ ನಿಗಾವಹಿಸಿ ಮಾಹಿತಿ ತೆಗೆದು ದಾಳಿ ಮಾಡಿ ಪ್ರಕರಣಗಳನ್ನು ದಾಖಲಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಸಿಬ್ಬಂದಿಗಳನ್ನೊಳಗೊಂಡ ತಂಡಗಳನ್ನು ರಚಿಸಿದ್ದು, ಪ್ರತಿದಿನ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸೇವನೆ ಹಾಗೂ ಅಕ್ರಮ ಮಾರಾಟ ಮಾಡುವವರ ವಿರುದ್ಧ ಕಾರ್ಯಾಚರಣೆ ಕೈಗೊಂಡಿದ್ದರು.

ಸಿಕ್ಕಿಬಿದ್ದಿದ್ದು ಹೇಗೆ

ಹರಿಹರ ನಗರದಲ್ಲಿ ಮಾದಕ ವಸ್ತುಗಳ ಸೇವನೆ ಮಾಡುವವರನ್ನು ವೈದ್ಯಕೀಯ ಪರೀಕ್ಷೆಗೆ ಮೊದಲು ಒಳಪಡಿಸಲಾಯಿತು. ಈ ಸಂಧರ್ಭದಲ್ಲಿ ಮಾದಕ ವ್ಯಸನಿಗಳಿಗೆ ಸಿಗುತ್ತಿದ್ದ ಗಾಂಜಾದ ಮೂಲವನ್ನು ಬೆನ್ನೆತ್ತಲಾಯಿತು. ಆಗ ಪೊಲೀಸರಿಗೆ ಹರಿಹರ ನಗರದಲ್ಲಿ ಕಾನೂನು ಬಾಹಿರವಾಗಿ ಗಾಂಜಾ ಸಾಗಾಟ ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು.‌ ಬಳಿಕ ಹರಿಹರ ನಗರದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಕಾನೂನು ಬಾಹಿರವಾಗಿ ಮಾರಾಟ ಮಾಡಲು ಗಾಂಜಾವನ್ನು ಸಂಗ್ರಹಿಸಿರುವ ಬಗ್ಗೆ ಹಾಗು ಮಾರಾಟ ಮಾಡಲು ಯತ್ನಿಸಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಎಸ್ಪಿ ಉಮಾ ಪ್ರಶಾಂತ್ ಎಎಸ್ಪಿ ವಿಜಯಕುಮಾರ ಎಂ ಸಂತೋಷ , ಜಿ. ಮಂಜುನಾಥ ಮಾರ್ಗದರ್ಶನದಲ್ಲಿ ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬಸವರಾಜ್.ಬಿ.ಎಸ್ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳನ್ನೊಳಗೊಂಡ ತಂಡವು
ಸ್ಥಳಕ್ಕೆ ಹೋಗಿ ದಾಳಿ ಮಾಡಿದೆ. ಈ ಸಮಯದಲ್ಲಿ
ಎ1 & ಎ2 ಆರೋಪಿತರುಗಳು ಹಾಲಿ ಹರಿಹರ ವ್ಯಾಪ್ತಿಯಲ್ಲಿ ರೆಲ್ವೇ ಹಳಿ ಕಾಮಗಾರಿ ನಡೆಯುತ್ತಿದ್ದು, ಅಲ್ಲಿ ಕಾಂಕ್ರಿಟ್ ಕೆಲಸ ಮಾಡಲು ಬಂದಿದ್ದರು. ಸದ್ಯ ಈ ಗಾಂಜಾವನ್ನು ಒಡಿಶಾ ರಾಜ್ಯದಿಂದ ತೆಗೆದುಕೊಂಡು ಬಂದು ಹರಿಹರದಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ತನಿಖೆ ವೇಳೆ ತಿಳಿದು ಬಂದಿರುತ್ತದೆ.

ನಕ್ಸಲ್ ರಿಂದ ಶುರುವಾಗಲಿದೆ ಗಾಂಜಾ

ಗಾಂಜಾ ಸರಬರಾಜು ಜಾಲವು ತುಂಬಾ ವ್ಯವಸ್ಥಿತವಾಗಿದೆ
ಒರಿಸ್ಸಾದ ಗಂಜಾಂ ಜಿಲ್ಲೆಯಲ್ಲಿ ಆಳವಾದ ಕಾಡುಗಳು ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿರುವ ಹಳ್ಳಿಗಳಲ್ಲಿ ಡಿಸೆಂಬರ್-ಜನವರಿಯಲ್ಲಿ ಗಾಂಜಾ ಬೆಳೆಯಲಾಗುತ್ತದೆ, ಅವುಗಳಲ್ಲಿ ಕೆಲವು ನಕ್ಸಲ್ ನಿಯಂತ್ರಣದಲ್ಲಿದೆ. ಅವುಗಳನ್ನು ನಕ್ಸಲರು ಹಣಕ್ಕಾಗಿ ಬೇರೆಯವರಿಗೆ ಮಾರಾಟ ಮಾಡುತ್ತಾರೆ. ಅವರು ಬೇರೆ, ಬೇರೆ ಜಿಲ್ಲೆಗೆ ಹೋಗಿ ಗಾಂಜಾ ಮಾರಾಟ ಮಾಡುತ್ತಾರೆ.

ಆರು ರಾಜ್ಯಗಳಿಗೆ ಮಾರಾಟ

ಒರಿಸ್ಸಾದಿಂದ ಟ್ರಕ್‌, ಟ್ರೈನ್ ಮೂಲಕ ಆರು ರಾಜ್ಯಗಳಿಗೆ ಗಾಂಜಾ ಸರಬರಾಜು ಮಾಡಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಮುಂಬೈ, ಥಾಣೆ ಮತ್ತು ವಸಾಯಿ-ವಿರಾರ್ ಇವರ ಪ್ರಮುಖ ಸ್ಥಳ.

ಐವತ್ತು, ನೂರು ಗ್ರಾಂ ಪ್ಯಾಕೇಟ್

ಈ ಒರಿಸ್ಸಾ ಮೂಲದವರು ತಂದಿದ್ದ ಗಾಂಜಾವನ್ನು ಸಣ್ಣ ಸಣ್ಣ ಪ್ಯಾಕೇಟ್ ಗಳನ್ನಾಗಿ ಮಾಡಿ, ನೂರರಿಂದ ನೂರವೈತ್ತು ರೂ.ಗಳನ್ನಾಗಿ ಮಾರಾಟ ಮಾಡಲು ಸಜ್ಜಾಗಿದ್ದರು. ಸಿಗರೇಟ್ ಸೇದುವರೆ ಇವರ ಮೂಲ ಟಾರ್ಗೇಟ್. ಖಾಲಿ ಜಾಗಗಳು, ಪಾಳು ಬಿದ್ದಿರುವ ಮನೆಗಳನ್ನು ಗಾಂಜಾ ಸೇದಲು ಬಳಸಿಕೊಳ್ಳುತ್ತಿದ್ದರು. ಕೆಲಸ ಮಾಡಲು ಬಂದು ಇಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರು.

ಆರೋಪಿಗಳ ಬಂಧಿಸದಿದ್ದರೆ ಕ್ರೈಂ ಹೆಚ್ಚಳ

ಪೊಲೀಸರು ಆರೋಪಿಗಳನ್ನು ಬಂಧಿಸದೇ ಹೋಗಿದ್ದರೇ ಗಾಂಜಾ ಅಮಲಿನಲ್ಲಿದ್ದವರು ಸಾಕಷ್ಟು ಕ್ರೈಂ ಮಾಡುತ್ತಿದ್ದರು. ಇದರಿಂದ ಸಮಾಜದಲ್ಲಿ ಅಶಾಂತಿ ವಾತಾವರಣ ಉಂಟಾಗುತ್ತಿತ್ತು. ಪೊಲೀಸರ ಈ ಕೆಲಸದಿಂದ ಸಮಾಜದಲ್ಲಿ ಶಾಂತಿ ಉಂಟಾಗಿದೆ.

ಎಸ್ಪಿ ಶ್ಲಾಘನೆ

ಮೇಲ್ಕಂಡ ಪ್ರಕರಣದಲ್ಲಿ ಆರೋಪಿತರ ಪತ್ತೆ ಹಾಗೂ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಅಧಿಕಾರಿಗಳಾದ ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬಸವರಾಜ್.ಬಿ.ಎಸ್ ರವರು, ಹರಿಹರ ನಗರ ಠಾಣೆಯ ಪೊಲೀಸ್ ನಿರೀಕ್ಷಕ ದೇವಾನಂದ, ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ ಹರಿಹರ ನಗರ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಪತಿ ಗಿನ್ನಿ ಮತ್ತು ವಿಜಯ್ ಜಿ.ಎಸ್, ಮಂಜುನಾಥ ಕುಪ್ಪೇಲೂರ ರವರುಗಳು ಹಾಗೂ ಸಿಬ್ಬಂದಿಯವರಾದ ನಾಗರಾಜ್ ಸುಣಗಾರ, ಲಿಂಗರಾಜ್, ಸಿದ್ದೇಶ, ಹೇಮಾನಾಯ್ಕ್, ರವಿ.ಆರ್, ರುದ್ರಸ್ವಾಮಿ.ಕೆ.ಸಿ, ಹನುಮಂತ ಗೋಪನಾಳ, ಮಂಜುನಾಥ ಕ್ಯಾತಮ್ಮನವರ್, ರವಿನಾಯ್ಕ್, ಕರಿಯಪ್ಪ, ತಿಪ್ಪೆಸ್ವಾಮಿ, ಸಿದ್ದರಾಜು.ಎಸ್.ಬಿ, ರಾಜಾಸಾಬ್, ರವಿನಾಯ್ಕ, ಸತೀಶ, ತಿಪ್ಪೇಸ್ವಾಮಿ ರವರುಗಳನ್ನು ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.

Share.
Leave A Reply

Exit mobile version