ಶಿವಮೊಗ್ಗ: ಮಾಜಿ ಸಚಿವ ಕುಮಾರ ಬಂಗಾರಪ್ಪ ಫೇಸ್ ಬುಕ್‌ನಲ್ಲಿ ನಟ ಶಿವರಾಜ್‌ಕುಮಾರ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದಕ್ಕೆ ಶಿವಮೊಗ್ಗ ಫ್ಯಾನ್ಸ್ ಆಕ್ರೋಶಗೊಂಡಿದ್ದಾರೆ. ಅಲ್ಲದೇ ಬೆಂಗಳೂರಿನ ಸದಾಶಿವನಗರದ ಕುಮಾರಬಂಗಾರಪ್ಪರ ನಿವಾಸಕ್ಕೆ ಫ್ಯಾನ್ಸ್ ದಾಂಗುಡಿ ಇಟ್ಟಿದ್ದಾರೆ.
ನಮ್ಮೂರ ಜಾತ್ರೆಯಲ್ಲಿ ಕುಣಿಯುವ ಕೆಲಸ ಖಾಲಿ ಇದೆ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದ ಹಿನ್ನಲೆಯಲ್ಲಿ ಶಿವಣ್ಣ ಫ್ಯಾನ್ಸ್ ಮಾಜಿ ಸಚಿವರ ಮನೆಗೆ ನುಗ್ಗಿದ್ದಾರೆ. ಅಲ್ಲದೇ ಗೇಟ್ ತೆಗೆದು ನಟ ರಾಜಕುಮಾರ್ ಪೋಸ್ಟರ್ ಹಿಡಿದು ಪ್ರತಿಭಟನೆಗೆ ಮುಂದಾಗಿದ್ದರು. ಇನ್ನು ಶಿವಣ್ಣ ಬಳಿ ಕುಮಾರ ಬಂಗಾರಪ್ಪ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದಾರೆ.
ಸದ್ಯ ಪೊಲೀಸರು ಬಿಗಿ-ಭದ್ರತೆ ಕೈಗೊಂಡಿದ್ದು, ಫ್ಯಾನ್ಸ್ ಹಾಗೂ ಪೊಲೀಸರ ನಡುವೆ ವಾಕ್ಸಮರ ನಡೆದಿತ್ತು. ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದು,ಮುಂದಿನ ಕ್ರಮ ಕೈಗೊಂಡಿದ್ದಾರೆ.