ವಾಣಿಜ್ಯ ನಗರಿ ದಾವಣಗೆರೆಯಲ್ಲಿ ನಡೆಯುವ ಪ್ರತಿದಿನದ ಕಾರ್ಯಕ್ರಮಗಳ ವಿವರ. ದಾವಣಗೆರೆ ನಗರ ಹಾಗೂ ಹರಿಹರ, ಹೊನ್ನಾಳಿ, ನ್ಯಾಮತಿ, ಜಗಳೂರು, ಚನ್ನಗಿರಿ ತಾಲೂಕುಗಳಲ್ಲಿ ಪ್ರತಿನಿತ್ಯ ನಡೆಯುವ ಪ್ರತಿ ಕಾರ್ಯಕ್ರಮದ ಮಾಹಿತಿಯನ್ನು ದಾವಣಗೆರೆವಿಜಯ.ಕಾಂ ನೀಡಲಿದೆ. ನಿಮ್ಮ ಊರುಗಳಲ್ಲಿ ನಡೆಯುವ ಕಾರ್ಯಕ್ರಮದ ಮಾಹಿತಿಯನ್ನು ಮೂರು ದಿನಗಳ ಮುಂಚಿತವಾಗಿ ನೀಡಿದರೆ ದಾವಣಗೆರೆವಿಜಯ.ಕಾಂ ಉಚಿತವಾಗಿ ಪ್ರಕಟಿಸಲಿದೆ. ನಿಮ್ಮೂರಿನಲ್ಲಿ ನಡೆಯುವ ಕಾರ್ಯಕ್ರಮದ ಮಾಹಿತಿಯನ್ನು ನಮ್ಮ 9113614148 ಈ ನಂಬರ್‌ಗೆ ವಾಟ್ಸ್ಆಪ್ ಮಾಡಿ

ನಗರದಲ್ಲಿಂದು ಪುಸ್ತಕ ಪಂಚಮಿ

ದಾವಣಗೆರೆ : ಪುಸ್ತಕ ಪಂಚಮಿಯ 14ನೇ ವಾರ್ಷಿಕೋತ್ಸವವು ಡಿ.12ರಂದು‌ ಪಿ.ಜೆ. ಬಡಾವಣೆಯ ಈಶ್ವರಮ್ಮ ಪ್ರೌಢಶಾಲೆಯಲ್ಲಿ ನಡೆಯಲಿದೆ’ ಎಂದು ಪ್ರತಿಷ್ಠಾನದ ಸಹ ಸಂಚಾಲಕ ಸಿ.ಆರ್. ಬಾಣಾಪುರಮಠ‌ ತಿಳಿಸಿದ್ದಾರೆ‌.

ಎಚ್.ಎಫ್. ಕಟ್ಟಿಮನಿ ಪ್ರೌಢಶಿಕ್ಷಣ ಪ್ರತಿಷ್ಠಾನ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬಾಣಾಪುರಮಠ ಮಕ್ಕಳ ಕ್ಲಿನಿಕ್ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಪುಸ್ತಕ ವಾಚನ ಸಹಾಯ ಯೋಜನೆಯ 21 ಶಾಲೆಗಳ ಫಲಾನುಭವಿಗಳಿಗೆ ಪುಸ್ತಕ ವಿತರಣೆ ನಡೆಯಲಿದೆ.

ಇಂದು ಕಾರ್ತಿಕ ಲಕ್ಷ ದೀಪೋತ್ಸವ

ಹರಿಹರ: ನಗರದ ರೈಲ್ವೆ ಕಾಲೋನಿಯ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಡಿ.12 ರಂದು ಕಾರ್ತಿಕ ಮಾಸದ ಪ್ರಯುಕ್ತ 35 ನೇ ವರ್ಷದ ಲಕ್ಷ ದೀಪೋತ್ಸವ ಆಯೋಜಿಸಿದೆ. ಡಿ 12 ರಂದು ಬೆಳಗ್ಗೆ  ರುದ್ರಾಭಿಷೇಕ ಸಂಜೆ 6 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಸಂಜೆ 7-30 ಕ್ಕೆ ಮಹಾ ಮಂಗಳಾರತಿ, ಲಕ್ಷ ದೀಪೋತ್ಸವ ಪ್ರಸಾದ ವಿನಿಯೋಗ ನಡೆಯಲಿದೆ.

ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಕೆ 

ನ್ಯಾಮತಿ: ದಲಿತರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಾಲ್ಲೂಕಿನ ಸುರಹೊನ್ನೆ ವೃತ್ತ ದಿಂದ ಪಟ್ಟಣದ ತಹಸೀಲ್ದಾರ್ ಕಚೇರಿಯವರೆಗೂ ಡಿ.12 ರಂದು ಮೆರವಣಿಗೆ ಮೂಲಕ ತೆರಳಿ ತಹಶಿಲ್ದಾರ್ ಅವರಿಗೆ ಮನವಿ ಸಲ್ಲಿಸುವುದಾಗಿ ರಾಜ್ಯ ದಲಿತ ಸಂಘರ್ಷ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

 ಸುರಹೊನ್ನೆ ವೃತ್ತದಿಂದ ಮಾನವ ಸರಪಳಿ ನಿರ್ಮಿಸಿ ಮೆರವಣಿಗೆ ಮೂಲಕ ಸಾಗಿ ಹಕ್ಕೊತ್ತಾಯ ಮಾಡಲಾಗುವುದು. ಮೆರವಣಿಯಲ್ಲಿ ಹಂಗಾಮಿ ತಾಲ್ಲೂಕು ಸಂಚಾಲಕ ಜ್ಯೋತಿಕುಮಾರ್ ಸುರಹೊನ್ನೆ ರೆಹಮಾನ್, ಚಿನ್ನಿಕಟ್ಟೆ ಶೇಖರಪ್ಪ ಟಿ.ಜಿ ಹಳ್ಳಿ ಪ್ರವೀಣ್  ಯರಗನಾಳ್ ಮಹಿಳಾ ಸಂಚಾಲಕರಾದ ರೇಖಾ ಸಿದ್ದಾಪುರ, ಮೀನಾಕ್ಷಮ್ಮ ಸೋಗಿಲು, ಶಿಲ್ಪಾ ಸುರಹೊನ್ನೆ ತಿರುಪತಮ್ಮ ಇತರರು ಭಾಗವಹಿಸಲಿದ್ದಾರೆ.

ಕೋಡಿ ಕ್ಯಾಂಪ್ ಕೊಟ್ಟೂರೇಶ್ವರ ಮಠದಲ್ಲಿ  ಛಟ್ಟಿ ಅಮಾವಾಸ್ಯೆ

ದಾವಣಗೆರೆ: ನಗರದ ಕೊಟ್ಟೂರು ಗುರು ಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಸಮಿತಿಯಿಂದ ಮಾಗನಹಳ್ಳಿ ಕೋಡಿ ಕ್ಯಾಂಪ್ ಬಿಳಿ ಇರುವ ಶ್ರೀ ಕೊಟ್ಟೂರೇಶ್ವರ ಸ್ವಾಮಿ ಮಠದಲ್ಲಿ ನಾಳೆ ಛಟ್ಟಿ ಅಮಾವಾಸ್ಯೆ ಪ್ರಯುಕ್ತ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಪಾದಗಳಿಗೆ ಅಭಿಷೇಕ, ಪೂಜೆ ನಂತರ ಪ್ರಸಾದ ದಾಸೋಹವನ್ನು ಏರ್ಪಡಿಸಲಾಗಿದೆ ಎಂದು ದೇವಸ್ಥಾನ ಸಮಿತಿಯ ಕಣಕುಪ್ಪಿ ಮುರುಗೇಶಪ್ಪ ತಿಳಿಸಿದ್ದಾರೆ.

ಶ್ರೀ ದಾನಮ್ಮ ದೇವಸ್ಥಾನದಲ್ಲಿ ಛಟ್ಟಿ ಅಮವಾಸ್ಯೆ ವಿಶೇಷ ಪೂಜೆ 

ದಾವಣಗೆರೆ : ನಗರದ ದೊಡ್ಡಪೇಟೆಯ ಶ್ರೀ ಬಸವೇಶ್ವರ ಮತ್ತು ಶ್ರೀ ಗುಡ್ಡಾಪುರದ ದಾನಮ್ಮ ದೇವಿ ದೇವಸ್ಥಾನದಲ್ಲಿ ಛಟ್ಟಿ ಅಮಾವಾಸ್ಯೆ ಪ್ರಯುಕ್ತ  ಸಂಜೆ 7 ಗಂಟೆಗೆ ಪುರಾಣ ಪ್ರವಚನ ನಡೆಯುತ್ತಿದೆ.

ಶ್ರೀಪುಟ್ಟರಾಜ ಕವಿ ಗವಾಯಿಗಳವರಿಂದ ರಚಿತವಾದ ಶಿವಶರಣೆ ಗುಡ್ಡಾಪುರದ ದಾನಮ್ಮ ದೇವಿ ಪುರಾಣ ಮತ್ತು ಶ್ರೀ ಅಕ್ಕಮಹಾದೇವಿಯ ಚರಿತ್ರೆ ಪ್ರವಚನಗಳನ್ನು ಶ್ರೀ ಪುಟ್ಟರಾಜ ಗವಾಯಿಗಳವರ ಶಿಷ್ಯರಾದ ವೇ. ಮಹಾಂತೇಶ ಶಾಸ್ತ್ರಿಗಳು ಹಿರೇಮಠ ಇವರು ನಡೆಸಿ ಕೊಡುತ್ತಿದ್ದಾರೆ. ಸ್ಥಳಿಯ ಶ್ರೀ ವೀರಶೈವ ಪುಣ್ಯಾಶ್ರಮ ದ ಯಲಗೂರೇಶ ಟಕ್ಕಳಿಕೆ ತಬಲ ವಾದನ ನುಡಿಸುವರು.ಛಟ್ಟಿ ಅಮಾವಾಸ್ಯೆ ಇದ್ದು,  ಬೆಳಗ್ಗೆ ಶ್ರೀ ಸ್ವಾಮಿಗೆ ಅಭಿಷೇಕ, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯ ನಡೆಯಲಿದೆ.

Share.
Leave A Reply

Exit mobile version