ವಾಣಿಜ್ಯ ನಗರಿ ದಾವಣಗೆರೆಯಲ್ಲಿ ನಡೆಯುವ ಪ್ರತಿದಿನದ ಕಾರ್ಯಕ್ರಮಗಳ ವಿವರ. ದಾವಣಗೆರೆ ನಗರ ಹಾಗೂ ಹರಿಹರ, ಹೊನ್ನಾಳಿ, ನ್ಯಾಮತಿ, ಜಗಳೂರು, ಚನ್ನಗಿರಿ ತಾಲೂಕುಗಳಲ್ಲಿ ಪ್ರತಿನಿತ್ಯ ನಡೆಯುವ ಪ್ರತಿ ಕಾರ್ಯಕ್ರಮದ ಮಾಹಿತಿಯನ್ನು ದಾವಣಗೆರೆವಿಜಯ.ಕಾಂ ನೀಡಲಿದೆ. ನಿಮ್ಮ ಊರುಗಳಲ್ಲಿ ನಡೆಯುವ ಕಾರ್ಯಕ್ರಮದ ಮಾಹಿತಿಯನ್ನು ಮೂರು ದಿನಗಳ ಮುಂಚಿತವಾಗಿ ನೀಡಿದರೆ ದಾವಣಗೆರೆವಿಜಯ.ಕಾಂ ಉಚಿತವಾಗಿ ಪ್ರಕಟಿಸಲಿದೆ. ನಿಮ್ಮೂರಿನಲ್ಲಿ ನಡೆಯುವ ಕಾರ್ಯಕ್ರಮದ ಮಾಹಿತಿಯನ್ನು ನಮ್ಮ 9113614148 ಈ ನಂಬರ್‌ಗೆ ವಾಟ್ಸ್ಆಪ್ ಮಾಡಿ

ಇಂದು ಸಶಸ್ತ್ರ ಪಡೆಗಳ ಧ್ವಜ ಬಿಡುಗಡೆ ಸಮಾರಂಭ

ದಾವಣಗೆರೆ: ಸಶಸ್ತ್ರ ಗಳ ಧ್ವಜ ದಿನಾಚರಣೆ ಅಂಗವಾಗಿ ಡಿ.15 ರಂದು ಮಧ್ಯಾಹ್ನ 3-30 ಕ್ಕೆ ಡಿ.ಸಿ ಕಚೇರಿಯಲ್ಲಿ ಸಶಸ್ತ್ರ ಗಳ ಧ್ವಜ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಮಾಜಿ ಸೈನಿಕರು, ವೀರ ನಾರಿಯರು ಹಾಗೂ ಮಾಜಿ ಸೈನಿಕರ ಅವಲಂಬಿರು ಕಾರ್ಯಕ್ರಮ ದಲ್ಲಿ ಭಾಗವಹಿಸಬಹುದು ಮಾಹಿತಿಗೆ ದೂ. ಸಂಖ್ಯೆ:   08182220925 ಸಂಪರ್ಕಿಸಲು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕ ಡಾ.ಸಿ.ಎ ಹಿರೇಮಠ ತಿಳಿಸಿದ್ದಾರೆ.

ನಗರದಲ್ಲಿ ಇಂದು ಯುವಕರಿಗಾಗಿ ಹಿಮೋಫಿಲಿಯಾ ಶಿಬಿರ

ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ವತಿಯಿಂದ ಹಿಮೋಫಿಲಿಯಾ ಮತ್ತು ಇತರೆ ರಕ್ತಸ್ರಾವ ಕಾಯಿಲೆಯಿಂದ ಬಳಲುತ್ತಿರುವವರಿಗಾಗಿ ಸೇವೆಯನ್ನು ಸಲ್ಲಿಸುತ್ತಿದ್ದು ಹಿಮೋಫಿಲಿಯಾ ಯುವಕರಿಗಾಗಿ ಹಿಮೋಫಿಲಿಯಾ ಶಿಬಿರವನ್ನು ಇಂದು ಮಧ್ಯಾಹ್ನ 1 ಗಂಟೆಗೆ ಆಯೋಜಿಸಲಾಗಿದೆ.

ಶಿಬಿರದಲ್ಲಿ ವ್ಯಕ್ತಿತ್ವ ವಿಕಸನ ತರಬೇತಿ, ಭೌತಿಕ ಚಿಕಿತ್ಸಾ ತರಬೇತಿ, ಮನೋ ಸಾಮಾಜಿಕ ಸಮಸ್ಯೆಗಳು, ಶೈಕ್ಷಣಿಕ ಮಾರ್ಗದರ್ಶನ ಈ ಎಲ್ಲಾ ವಿಷಯದ ಬಗ್ಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ 5 ದಿನಗಳ ಮಾಹಿತಿ ಮತ್ತು ತರಬೇತಿ ನೀಡಲಾಗುವುದು.

ನಗರಕ್ಕೆ ಇಂದು ಕೈವ ಚಿತ್ರತಂಡ

ನಗರದ ಅಶೋಕ ಚಿತ್ರಮಂದಿರಕ್ಕೆ ಇಂದು ಸಂಜೆ 4-30 ಕೈವ ಚಿತ್ರದ ನಾಯಕ ಧನವೀರ್, ನಟಿ ಮೇಘಾನಾ ಶೆಟ್ಟಿ, ನಿರ್ದೇಶಕರು ಮತ್ತು ನಿರ್ಮಾಪಕರು ಆಗಮಿಸಲಿದ್ದಾರೆ ಎಂದು ಚಿತ್ರದ ಪ್ರತಿನಿಧಿ ಪಿ.ಹೆಚ್ ಮಂಜುನಾಥ್ ತಿಳಿಸಿದ್ದಾರೆ.

 ನಗರದಲ್ಲಿಂದು ಶ್ರೀ ಬನ್ನಿ ಮಹಾಂಕಾಳಿ ದೇವಿಯ ಕಡೇ ಕಾರ್ತಿಕ, ದೀಪೋತ್ಸವ

ಶ್ರೀ ಮಹಾಂಕಾಳಿ ದೇವಸ್ಥಾನ ಅಭಿವೃದ್ಧಿ ಸಮಿತಿ ವತಿಯಿಂದ ಇಂದು ಆಂಜನೇಯ ಬಡವಣೆ. ಬಿಐಇಟಿ ಪಕ್ಕದಲ್ಲಿರುವ ಶ್ರೀ ಬನ್ನಿ ಮಹಾಕಾಳಿ ದೇವಿಯ 11 ನೇ ವರ್ಷದ ಕಡೇ ಕಾರ್ತಿಕ ಮತ್ತು ದೀಪೋತ್ಸವ ಸಮಾರಂಭವನ್ನು ಏರ್ಪಡಿಸಲಾಗಿದೆ. ಶ್ರೀ ಕ್ಷೇತ್ರ ಬಿದ್ದಹನುಮಪ್ಪನ ಹಟ್ಟಿ ಕಂಚಿಕೇರಿ ಶ್ರೀ ಬಸವರಾಜ್ ಗುರೂಜಿ ದೀಪೋತ್ಸವದ ಸಾನಿಧ್ಯ ವಹಿಸುವರು.

ದಾವಣಗೆರೆ ಜಿಲ್ಲಾ ವರದಿಗಾರರು ಕೂಟದ ಪತ್ರಿಕಾಗೋಷ್ಠಿಗಳು

  1. ಬೆಳಗ್ಗೆ 11.20. ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ.
  2. ಬೆಳಗ್ಗೆ 11.40. ಜಿಲ್ಲಾ ಭಗೀರಥ ಉಪ್ಪಾರ ಸಮಾಜ.1
  3. ಮಧ್ಯಾಹ್ನ 12.00. ವಿಷ್ಣುವರ್ಧನ್ ಅಭಿಮಾನಿ ಬಳಗ
  4. ಮಧ್ಯಾಹ್ನ 12.30 ಕ್ಕೆ  ವಿನಯ್ ಕುಮಾರ್. ಜಿ.ಬಿ. ಇನ್ಸೈಟ್ಸ್ ಐ.ಎ.ಎಸ್. ಸಂಸ್ಥೆ
Share.
Leave A Reply

Exit mobile version