ದಾವಣಗೆರೆ : ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದಂತೆ ಎನ್ನುವ ಗಾದೆಯಂತೆ ಕನ್ನಡಕ್ಕಾಗಿ ಹೋರಾಟ ಮಾಡುತ್ತಿದ್ದ ಸಂತೋಷ ನೇಣಿಗೆ ಶರಣಾಗಿದ್ದು, ಉದ್ಯಮಿ, ಲಾರಿ ಟ್ರಾನ್ಸ್ ಪೋರ್ಟ್ ಮಹಾಂತೇಶ್ ಒಣ ರೊಟ್ಟಿ ಸೇರಿದಂತೆ ಕನ್ನಡ ಪರ ಸಂಘಟನೆಗಳು ಕಂಬನಿ ಮಿಡಿದಿವೆ.
ಸಂತೋಷ್ ಸಾವಿಗೆ ಕೌಟುಂಬಿಕ ಕಲಹ ಕಾರಣವಾಗಿದ್ದು, ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಸದಾ ಹೋರಾಟದಲ್ಲಿ ಮುಳುಗಿದ್ದ ಸಂತೋಷ್ ಪತ್ನಿ ಜತೆ ಪ್ರತ್ಯೇಕವಾಗಿ ವಾಸವಾಗಿದ್ದರು. ಅಲ್ಲದೇ ಕನ್ನಡ ಪತ್ರಿಕೆಗಳ ಬೆಳವಣಿಗೆಗಾಗಿ ಶ್ರಮಿಸಿದವನು.
ದಾವಣಗೆರೆಯಲ್ಲಿ ಪ್ರತ್ಯೇಕವಾದ ಕನ್ನಡ ಪರ ಸಂಘಟನೆ ಕಟ್ಟಿಕೊಂಡ ಸಂತೋಷ ಅವರದ್ದೇ ಆದ ಸಂಘಟನೆಗೆ ರಾಜ್ಯಾಧ್ಯಕ್ಷ ಆಗಿದ್ದರು. ಅಪ್ಪಟ ಕನ್ನಡ ಅಭಿಮಾನಿಯಾಗಿದ್ದ ಸಂತೋಷ ಕೆಟಿಜೆ ನಗರದಲ್ಲಿ ಏನೇ ಸಮಸ್ಯೆ ಬಂದರೂ ಹೋರಾಟಕ್ಕೆ ಇಳಿಯುತ್ತಿದ್ದರು. ಕನ್ನಡಕ್ಕಾಗಿ ಕೈ ಎತ್ತು ನಿನ್ನ ಜನ್ಮ ಸಾರ್ಥಕವಾಗುತ್ತದೆ ಎನ್ನುವಂತೆ ಅದ್ದೂರಿ ರಾಜ್ಯೋತ್ಸವ ಆಚರಿಸಿದ್ದರು. ಅಲ್ಲದೇ ಕೆಟಿಜೆ ನಗರದಲ್ಲಿ ಕನ್ನಡ ಧ್ವಜ ಸ್ಥಂಬ ನೆಟ್ಟಿದ್ದರು.
ಸಂತೋಷ್ ಹೋರಾಟಕ್ಕೆ ಮಹಾಂತೇಶ್ ಒಣ ರೊಟ್ಟಿ ಬೆಂಬಲ
ಕನ್ನಡ ಪರ ಹೋರಾಟಗಾರ ಸಂತೋಷ್ ಗೆ ಉದ್ಯಮಿ ಹಾಂತೇಶ್ ಒಣರೊಟ್ಟಿ ಹಿಂದಿನಿಂದ ಆರ್ಥಿಕ ಸಹಾಯ ಮಾಡುತ್ತಿದ್ದರು. ಸಂತೋಷ್ ಗೆ ಏನೇ ಬೇಕಿದ್ದರೂ ಒಣರೊಟ್ಟಿ ಒದಗಿಸುತ್ತಿದ್ದರು. ಸಂತೋಷ್ ಕೂಡ ಅವರಿಗೆ ಅಷ್ಟೇ ಗೌರವ ಕೊಡುತ್ತಿದ್ದ. ಒಟ್ಟಿನಲ್ಲಿ ಒಬ್ಬ ಕನ್ನಡ ಪರ ಹೋರಾಟಗಾರನನ್ನು ದಾವಣಗೆರೆ ಕಳೆದುಕೊಂಡಿದೆ.