ದಾವಣಗೆರೆ: ಪ್ರಾರಂಭದಿಂದ ಕೊನೆಯವರೆಗೂ ಜಿದ್ದಾಜಿದ್ದಿ ಏರ್ಪಟ್ಟಿದ್ದ ದಾವಣಗೆರೆ ಕ್ಷೇತ್ರದಲ್ಲಿ ಸುಮಾರು 28 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ಗೆಲುವಿನ ನಗೆ ಬೀರಲಿದೆ.

ದಾವಣಗೆರೆ ಮೊದಲಿನಂದಲೂ ಬಿಜೆಪಿ ಆಡಳಿತ ನಡೆಸುತ್ತಿದ್ದು, ಈ ಬಾರಿ ಪ್ರಭಾಕ್ಕ ಆಡಳಿತ ನಡೆಸುವರು. ಈ ಕಾರಣದಿಂದ ದಾವಣಗೆರೆಯಲ್ಲಿ ತ್ರಿಬಲ್ ಎಂಜಿನ್ ಸರಕಾರ ಬರಲಿದೆ. ಮೊದಲಿನಿಂದಲೂ ಲೀಡ್‌ನಲ್ಲಿದ್ದ ಪ್ರಭಾಕ್ಕ ಕೆಲ ಸುತ್ತುಗಳಲ್ಲಿ ಮಾತ್ರ ಹಿಂದೆ ಇದ್ದರು. ನಂತರದ ಸುತ್ತಗಳಲ್ಲಿ ಪ್ರಭಾಕ್ಕ ತನ್ನ ಮತಗಳಲ್ಲಿ ಏರಿಕೆ ಕಂಡರು.

ನಿರೀಕ್ಷೆಯಂತೆ ಪಕ್ಷೇತರ ಅಭ್ಯರ್ಥಿ ವಿನಯ್‌ಕುಮಾರ್ ಮತಗಳು ತೆಗೆದುಕೊಳ್ಳದ ಕಾರಣ ಬಿಜೆಪಿ ಸೋಲುವ ಸಂಭವವಿದೆ. ಒಂದು ವೇಳೆ ವಿನಯ್ ಕುಮಾರ್ ಹೆಚ್ಚು ಮತಗಳನ್ನು ತೆಗೆದುಕೊಂಡಿದ್ದರೇ ಬಿಜೆಪಿ ಗೆಲ್ಲುವ ಸಾಧ್ಯತೆ ಇತ್ತು. ಆದರೆ ಮತದಾರರು ವಿನಯ್‌ಕುಮಾರ್‌ರನ್ನು ಒಪ್ಪಲಿಲ್ಲ. ಇಲ್ಲಿ ಯಾರೇ ಗೆದ್ದರೂ ದಾವಣಗೆರೆ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿ ಮಹಿಳೆಯೊಬ್ಬರು ಪಾರ್ಲಿಮೆಂಟ್ ಪ್ರವೇಶಿಸುತ್ತಾರೆ. ಇನ್ನು ಗಾಯಿತ್ರಿ ಸಿದ್ದೇಶ್ವರ ಕೂಡ ಕೊನೆ ಕ್ಷಣದವರೆಗೂ ಪೈಪೋಟಿ ನೀಡಿದ್ದು, ಯಾವ ಚಮತ್ಕಾರ ನಡೆಯಲಿಲ್ಲ

26 ವರ್ಷದ ನಂತರ ಕೈಗೆ ಆಡಳಿತ

ಸುಮಾರು 26 ವರ್ಷಗಳ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಪತಿ ಸಚಿವ ಮಲ್ಲಿಕಾರ್ಜುನ್ ನಂತರ ಈಗ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. 1998ರಲ್ಲಿ ಶಾಮನೂರು ಶಿವಶಂಕರಪ್ಪ ಗೆಲುವಿನ ನಂತರ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ 26 ವರ್ಷಗಳಿಂದ ಜಯಗಳಿಸಿದ್ದಿರಲಿಲ್ಲ.

2019ರ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಜಿಎಂ ಸಿದ್ದೇಶ್ವರ ಅ1,69,702 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಜಿಎಂ ಸಿದ್ದೇಶ್ವರ ಅವರು ಒಟ್ಟು 6,52,996 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ ಅಭ್ಯರ್ಥಿ ಹೆಚ್.ಬಿ ಮಂಜಪ್ಪ ಅವರು 4,83,294 ಮತಗಳನ್ನು ಗಳಿಸಿದ್ದರು. ಸಂಸದ ಜಿಎಂ ಸಿದ್ದೇಶ್ವರ್ ಸತತ ನಾಲ್ಕು ಬಾರಿ ಗೆಲುವು ಸಾಧಿಸಿದ್ದರಿಂದ ಕ್ಷೇತ್ರದ ಮೇಲೆ ಬಿಜೆಪಿ ಸಂಪೂರ್ಣ ಹಿಡಿತ ಸಾಧಿಸಿತ್ತು.

ಮತದಾರರ ಮಾಹಿತಿ

ಪುರುಷರು- 8,51,990, ಮಹಿಳೆಯರು – 8,57,117, ಇತರೆ-137, ಸೇವಾ- 565 ಸೇರಿ ಒಟ್ಟು ಮತದಾರರು- 17,09,244 ಇದ್ದಾರೆ. 2024ರ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಲ್ಲಿ ಶೇಕಡಾ 76.99 ರಷ್ಟು ಮತದಾನವಾಗಿತ್ತು. 2019ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಶೇಕಡಾ 73.03 ರಷ್ಟು ಮತದಾನವಾಗಿತ್ತು.

ಕಾಂಗ್ರೆಸ್‌ಗೆ ಎಲ್ಲೆಲ್ಲಿ ಎಷ್ಟು ಲೀಡ್

ದಾವಣಗೆರೆ ದಕ್ಷಿಣದಲ್ಲಿ 22500, ಜಗಳೂರು-9059, ಮಾಯಕೊಂಡ 3172, ಹರಿಹರ 4599 ಹೊನ್ನಾಳಿ-6900, ಚನ್ನಗಿರಿ 9979 ಕ್ಷೇತ್ರದಲ್ಲಿ ಕಾಂಗ್ರೆಸ್ ಲೀಡ್ ಪಡೆದುಕೊಂಡಿದೆ. ಇನ್ನು ಬಿಜೆಪಿ ದಾವಣಗೆರೆ ಉತ್ತರದಲ್ಲಿ 24988, ಹರಪನಹಳ್ಳಿ 3600 ಮತಗಳು ಮುನ್ನಡೆಯಲ್ಲಿತ್ತು. ಒಟ್ಟು 5 ಲಕ್ಷದ 609 ಮತಗಳನ್ನು ಕಾಂಗ್ರೆಸ್ ಪಡೆದಿಕೊಂಡಿದೆ.

ಕಾಂಗ್ರೆಸ್ ಪಾಳೆ, ಸಚಿವರ ಮನೆಯಲ್ಲಿ ಸಂಭ್ರಮಾಚಾರಣೆ

ನೂತನ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಗೆದ್ದ ನಂತರ ದಾವಣಗೆರೆ ಸೇರಿದಂತೆ ಇಡೀ ಜಿಲ್ಲೆಯಲ್ಲಿ ಸಂಭ್ರಾಮಾಚರಣೆ ನಡೆಯಿತು. ಇನ್ನು ಮಲ್ಲಿಕಾರ್ಜುನ್ ಕುಟುಂಬ ಮನೆಯಲ್ಲಿ ಸ್ವೀಟ್ ತಿನ್ನಿಸಿ ಖುಷಿಪಟ್ಟರು. ನಂತರ ಮಾತನಾಡಿದ ಪ್ರಭಾ ಮಲ್ಲಿಕಾರ್ಜುನ್, ಈ ಗೆಲುವಿನ ಹಿಂದೆ ಟೀಮ್ ವರ್ಕ್ ಕೆಲಸ ಮಾಡಿದೆ. ಕಾರ್ಯಕರ್ತರು ಶ್ರಮ ಪಟ್ಟಿದ್ದಾರೆ. ಕೆಲಸಗಳು ಬಾಕಿ ಇದೆ. ಅದನ್ನು ಮುಂದೆ ಮಾಡಿ ತೋರಿಸುತ್ತೇನೆ ಎಂದು ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ಬಿಜೆಪಿ ಸೋಲಿಗೆ ಏನು ಕಾರಣ

ಮೊದಲಿನಿಂದಲೂ ಬಿಜೆಪಿಯಲ್ಲಿದ್ದ ಬಂಡಾಯ, ನಂತರ ಒಳಜಗಳ, ಪಕ್ಷೇತರ ಅಭ್ಯರ್ಥಿ ವಿನಯ್‌ಕುಮಾರ್ ತೆಗೆದುಕೊಂಡ ಮತಗಳು, ಕೊನೆ ಕ್ಷಣದಲ್ಲಿ ತಟಸ್ಥ ನೀತಿ ಅನುಸರಿಸಿದ್ದು, ಮೋದಿ ನಾಮಬಲವನ್ನೇ ನಂಬಿದ್ದು, ಬಿಜೆಪಿ ಸೋಲಿಗೆ ಕಾರಣವಾಯಿತು. ಒಟ್ಟಾರೆ ಬಿಜೆಪಿ ಹಲವು ವರ್ಷಗಳಿಂದ ಅಧಿಕಾರ ಕಳೆದುಕೊಂಡಿದ್ದು, ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ.

Share.
Leave A Reply

Exit mobile version