ದಾವಣಗೆರೆ: ದಾವಣಗೆರೆ ಕಮಲಪಾಳಯದಲ್ಲಿ ವ್ಯಕ್ತಿ ಪರ ರಾಜಕೀಯ ಜೋರಾಗಿದ್ದು, ಬಿಜೆಪಿ ಶಾಸಕ ಬಿ.ಪಿ.ಹರೀಶ್ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ದ ಕಿಡಿಕಾರಿದ್ದಾರೆ.
ಶಿಕಾರಿಪುರ ಬಿಜೆಪಿ ಭದ್ರ ಕೋಟೆ ಅಂತಾರೆ. ಆದರೆ ಅಲ್ಲಿ ಆಗಿದ್ದೇ ಬೇರೆ ಎಂಬ ಮಾತು ಕೇಳುತ್ತಿದ್ದು, ಶಾಸಕ ಬಿ.ಪಿ.ಹರೀಶ್ ವಿಜಯೇಂದ್ರ ವಿರುದ್ದ ಕೆಲ ಪ್ರಶ್ನೆ ಎತ್ತಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿ, ಶಿಕಾರಿಪುರದಲ್ಲಿ
ನಾಗರಾಜಗೌಡಗೆ ಟಿಕೆಟ್ ತಪ್ಪಿಸಿ ವಿಜಯೇಂದ್ರಗೆ ಭಿಕ್ಷೆ ಕೊಟ್ಟಿದ್ದೇವೆ ಎಂದು ಡಿ. ಕೆ. ಶಿವಕುಮಾರ್ ಹೇಳಿದ್ದರು. ಇದಕ್ಕೆ ವಿಜಯೇಂದ್ರ ಉತ್ತರ ಕೊಡಬೇಕಲ್ವಾ? ಇಲ್ಲ ನಾನು ನ್ಯಾಯಯುತವಾಗಿ ಗೆದ್ದಿದ್ದೇನೆ ಎಂದು ಹೇಳಬೇಕಲ್ವಾ?. ಆದರೆ ಇದುವರೆಗೂ ಅವರು ಉತ್ತರ ಕೊಟ್ಟಿಲ್ಲ.
ಇದರ ಜೊತೆಗೆ ವಿಜಯೇಂದ್ರ ತಮ್ಮ ತಂದೆಯ ಫೋರ್ಜರಿ ಸಹಿ ಮಾಡಿದ್ದಾರೆ ಎಂದು ಸಚಿವರು ಆರೋಪಿಸುತ್ತಿದ್ದಾರೆ. ಅದು ಸುಳ್ಳು ಎಂದು ವಿಜಯೇಂದ್ರ ಹೇಳಬೇಕಲ್ವಾ?” ಯಾಕೆ ಪ್ರಶ್ನಿಸುತ್ತಿಲ್ಲ ಎಂಬ ಪ್ರಶ್ನೆ ಇಟ್ಟಿದ್ದಾರೆ. ಅಲ್ಲದೇ ವಿಜಯೇಂದ್ರ ಯಾವುದಕ್ಕೂ ಉತ್ತರ ಕೊಟ್ಟಿಲ್ಲ, ಇದರಿಂದ ನಮಗೆ ನಾಚಿಕೆ ಆಗ್ತಿದೆ. ಆಡಳಿತ ಪಕ್ಷದವರು ನಿಮ್ಮದು ಬಂಡವಾಳ ಬಿಚ್ಚಲಾ ಎಂದರೆ ಅಧ್ಯಕ್ಷರು ಹಿಂಬಾಗಿಲಿನಿಂದ ಹೋಗ್ತಾರೆ. ಅವರಿಂದ ವಿಧಾನಸೌಧದಲ್ಲಿ ನಮಗೆ ಮುಜುಗರ ಆಗ್ತಿದೆ” ಎಂದು ಹೇಳಿದರು.
ಯತ್ನಾಳ್ ರಾಜ್ಯಾಧ್ಯಕ್ಷರಾಗಬೇಕು
ಬಿ.ವೈ. ವಿಜಯೇಂದ್ರಗೆ ಅನುಭವದ ಕೊರತೆ ಇದೆ. ಹೀಗಾಗಿ ರಾಜ್ಯಾಧ್ಯಕ್ಷರ ಬದಲಾವಣೆ ಆಗಬೇಕು, ಬಸನಗೌಡ ಪಾಟೀಲ್ ಯತ್ನಾಳ್ ಅಂಥವರು ರಾಜ್ಯಾಧ್ಯಕ್ಷರಾಗಬೇಕು, ಇಲ್ಲವೇ ವಿಪಕ್ಷ ನಾಯಕ ಆಗುತ್ತಾರೆ”. ರಮೇಶ್ ಜಾರಕಿಹೊಳಿ ವಿಚಾರದಲ್ಲಿ ಭಯದ ವಾತಾವರಣ ಸೃಷ್ಟಿಸುವ ಹೇಳಿಕೆ, ಬಾಲಿಶವಾಗಿದೆ. ರಮೇಶ್ ಜಾರಕಿಹೊಳಿ 17 ಶಾಸಕರನ್ನು ಬಿಜೆಪಿಗೆ ಕರೆತಂದು ಯಡಿಯೂರಪ್ಪನವರನ್ನು ಸಿಎಂ ಮಾಡಿದ್ದು ನೆನಪು ಇದೆ ಎಂದುಕೊಂಡಿದ್ದೇನೆ ಎಂದರು.
ಪದೇಪದೇ ಪೂಜ್ಯ ತಂದೆ ಅಂತ ಹೇಳುವುದನ್ನು ಬಿಡಿ
ಪದೇ ಪದೆ ಪೂಜ್ಯ ತಂದೆ ಎಂದು ಹೇಳುವುದನ್ನು ಬಿಡಿ, ಪೂಜ್ಯ ತಂದೆಯವರನ್ನು ಬೇಡ ಎಂದು ಮನೆಗೆ ಕಳಿಸಿದ್ದಾರೆ. , ನಿಮಗೆ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ. ಆದರೆ ನಿಮ್ಮ ಸಾಧನೆ ಶೂನ್ಯ” ಎಂದು ಬಿ ವೈ ವಿಜಯೇಂದ್ರ ವಿರುದ್ಧ ಹರೀಶ್ ವಾಗ್ದಾಳಿ ನಡೆಸಿದರು.
ಗುಂಪುಗಾರಿಕೆ ಮಾಡುತ್ತಿದ್ದಾರೆ ಎಂದಿದ್ದ ಬಿ.ಪಿ.ಹರೀಶ್
ಶಾಸಕ ಬಿ.ಪಿ ಹರೀಶ್, ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಗುಂಪುಗಾರಿಕೆ ಮಾಡುತ್ತಿದ್ದಾರೆ. ಅವರ ನಿವಾಸದಲ್ಲಿ ಸಭೆ ನಡೆಸುತ್ತಿದ್ದಾರೆ. ಯತ್ನಾಳ್ ಅವರಿಗೆ ನೋಟಿಸ್ ಕೊಡ್ತಾರೆ ಅಂದ್ರೆ ಇವರಿಗೂ ನೋಟಿಸ್ ಕೊಡಬೇಕು ಎಂದಿದ್ದರು.
ಕೆಜೆಪಿಯಿಂದ ಹೋದವರಿಗೂ ಯಡಿಯೂರಪ್ಪ ಏನು ಮಾಡಿಲ್ಲ
ಕೆಜೆಪಿಯಿಂದ ಹೋದವರಿಗೂ ಯಡಿಯೂರಪ್ಪ ಏನು ಮಾಡಿಲ್ಲ. ವಿಜಯೇಂದ್ರ ಚೇಲಾಗಳು ಬಿಜೆಪಿ ನಡೆಸುತ್ತಿದ್ದಾರೆ. ಭ್ರಷ್ಟ ವಿಜಯೇಂದ್ರ ಅವರನ್ನು ಬದಲಿಸಬೇಕು ಎಂದು ಹರೀಶ್ ಕಿಡಿಕಾರಿದ್ದರು.ಇನ್ನೂ ಯತ್ನಾಳ್ ಅವರಿಗೆ ನೊಟೀಸ್ ಕೊಟ್ಟ ಮಾತನಾಡಿದ್ದ ಬಿ.ಪಿ.ಹರೀಶ್ ನಾವೆಲ್ಲರೂ ಉತ್ತರ ಕೊಟ್ಟಿದ್ದೇವೆ ಎಂದಿದ್ದರು. ಇನ್ನು ಪಕ್ಷ ವಿರೋಧಿ ಚಟುವಟಿಕೆ ಮಾಡಿದ ವಿಜಯೇಂದ್ರಗೆ ಯಾವಾಗ ನೋಟಿಸ್ ಕೋಡ್ತೀರಿ? ಎಂದು ಕೇಳಿದ್ದಕ್ಕೆ ಯತ್ನಾಳ್ ಉಚ್ಛಾಟನೆ ವಿರುದ್ಧ ಸುಳ್ಳು ಪ್ರಚಾರ ಮಾಡ್ತಿದ್ದಾರೆ. ವಿಜಯೇಂದ್ರ ಪರವಾಗಿ ಮಾತಾನಾಡುವವರೆಲ್ಲ ಕೆಜೆಪಿ ಪಕ್ಷದಿಂದ ಬಂದವರು. ಅವರ ಕಡೆ ಮಾತಾಡುವವರೆಲ್ಲ 80% ಅವರೇ ಇದ್ದಾರೆ. ಅವರೆಲ್ಲ ವಿಜಯೇಂದ್ರ ಪರವಾಗಿ ಮಾತನಾಡದೆ ಇನ್ಯಾರ ಪರ ಮಾತಾಡ್ತಾರೆ? ಎಂದು ಕಿಡಿಕಾರಿದ್ದರು.