ದಾವಣಗೆರೆ ಅಂದ್ರೆ ಬೆಣ್ಣೆ ದೋಸೆ ನಗರ, ಬೆಣ್ಣೆ ನಗರ ಎಂತೆಲ್ಲ ಕರೆಯುತ್ತಾರೆ..ಆದರೆ ಅದರ ಹಿಂದಿರುವ ಕರಾಳ ದಂಧೆ ಯಾರಿಗೂ ತಿಳಿದಿಲ್ಲ…ಅಲ್ಲದೇ ನೀವು ಬರುವ ದ್ವಾರ ಬಾಗಿಲಿಗೂ ಬೆಣ್ಣೆ ನಗರ ಅಂತ ಹೆಸರಿಲ್ಲ…ಅಷ್ಟೇ ಯಾಕೆ ಎಲ್ಲಿಯೂ ಬೆಣ್ಣೆ ನಗರ ಅಂತ ಹೆಸರು ಇಟ್ಟಿಲ್ಲ..ಈ ದಾವಣಗೆರೆಯಲ್ಲಿ ಮೊದಲು ಹತ್ತಿ ಬೆಳೆಯಲಾಗುತ್ತಿತ್ತು
ಮ್ಯಾಂಚೆಸ್ಟರ್ ಎಂಬ ಹೆಸರು ಬಂತು, ಕಮ್ಯೂನಿಸ್ಟ್ ನಾಯಕರು ಬಂದ ಮೇಲೆ ಹೋರಾಟದ ಊರಾಯಿತು. ಬಳಿಕ ನೀರಾವರಿ ಬಂತು ಕಬ್ಬು ಬೆಳೆದರು, ಆಗ ಸಕ್ಕರೆ ನಾಡಾಯಿತು. ಆಗ ಸಕ್ಕರೆ ಕಾರ್ಖಾನೆಗಳು ಬಂದವು.
ಇದಾದ ನಂತರ ರಾಜ್ಯದಲ್ಲಿಯೇ ಅತಿ ಹೆಚ್ಚು ಭತ್ತ ಬೆಳೆಯುವ ಎರಡನೇ ನಾಡಾಯಿತು. ಅಲ್ಲಿಂದ ಭದ್ರಾ ಡ್ಯಾಂ ನಲ್ಲಿ ನೀರಿ ಕಡಿಮೆಯಾದಾಗ ಮೆಕ್ಕೆಜೋಳ ಬೆಳೆದರು..ರಾಜ್ಯದಲ್ಲಿ ಅತಿ ಹೆಚ್ಚು ಮೆಕ್ಕೆಜೋಳ ಬೆಳೆಯುವುದು ದಾವಣಗೆರೆಯಲ್ಲಿ..ಇಲ್ಲಿ ಗರಡಿಮನೆ, ಕುಸ್ತಿಪಟುಗಳು, ಬಾಡಿ ಬಿಲ್ಡರ್ ಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.
ಕುರಿಹುಡ್ಡಿ, ಟಗರು ಕಾಳಗ ಈ ಊರಿನ ಅಸ್ಮಿತೆ ಕಾಪಾಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಇಲ್ಲಿನ ಸ್ಥಳೀಯರು ಅತಿ ಹೆಚ್ಚು ಇಷ್ಟಪಡುವುದು ಮಂಡಕ್ಕಿ, ಮೆಣಸಿನಕಾಯಿ, ಮಳೆಗಾಲದಲ್ಲಿ ಬಟ್ಟಲಿಗೆ ಮಂಡಕ್ಕಿ, ಖಾರ ಹಾಕಿ, ಒಂಚೂರು ಈರುಳ್ಳಿ ಹಾಕಿ, ಖಾರ ಮೆಣಸಿನಕಾಯಿ ಕಡಿದು, ಒಂಚೂರು ಚಹಾ ಹೀರಿದರೆ, ಅದರ ಮಜಾನಾ ಬೇರೆ….ಹೀಗಿರುವಾಗ ಆರೋಗ್ಯ ಕೆಡಿಸುವ, ದರ ಹೆಚ್ವಿರುವ ಬೆಣ್ಣೆ ದೋಸೆ ತಿನ್ನಲು ಬಡವನಿಂದ ಸಾಧ್ಯವಾ?…ಅದಕ್ಕಾಗಿ ಬೆಣ್ಷೆ ದೋಸೆ ಹಿಂದಿರುವ ಕರಾಳ ದಂಧೆ ಬಗ್ಗೆ ಒಂದಿಷ್ಟು ವಿವರಣೆ ನೀಡಲಾಗಿದೆ…ತಪ್ಪದೇ ಓದಿ.
ನಂದೀಶ್ ಭದ್ರಾವತಿ, ದಾವಣಗೆರೆ
ನೀವೇನಾದ್ರೂ ದಾವಣಗೆರೆ ಮಹಾಸಭಾ ಅಧಿವೇಶನಕ್ಕೆ ಬರುತ್ತೀದ್ದೀರಾ, ಖಂಡಿತ ಬನ್ನಿ ಅದ್ಬೂತ ವಾಗಿರುತ್ತದೆ…ಆದರೆ ದಾವಣಗೆರೆಗೆ ಬಂದಿದ್ದೀನಿ ಬೆಣ್ಣೆ ದೋಸೆ ತಿನ್ನೋಣ ಅಂತ ಯೋಚನೆ ಮಾಡುತ್ತಿದ್ದರೇ, ಒಂಚೂರು ಯೋಚನೆ ಮಾಡಿ ತಿನ್ನಿ..
ಹೌದು…ದೋಸೆ ಮಾಲೀಕರ ಹಿತ ಕಾಪಾಡುತ್ತಿರುವ ಜಿಲ್ಲಾಡಳಿತ, ಇತಿಹಾಸವುಳ್ಳ ಮಂಡಕ್ಕಿ ಮೆಣಸಿನಕಾಯಿ ಬಿಟ್ಟು, ಶ್ರೀಮಂತರ ಪಾಲಿನ ಬೆಣ್ಣೆ ದೋಸೆಗೆ ಮಣೆ ಹಾಕಿದೆ. ಅದರಲ್ಲೂ ಹೊರಗೆ ಇರುವ ದರಕ್ಕಿಂತ ಹೆಚ್ಚುದರ ವಿಧಿಸಿದೆ.
ಅಸಲಿಗೆ ಬೆಣ್ಣೆ ದೋಸೆ ಮಾಲೀಕರು ಬಳಸುವ ಬೆಣ್ಷೆ ಅಸಲಿಯೋ, ನಕಲಿಯೋ ಗೊತ್ತಿಲ್ಲ..ಅಸಲಿ ಇದ್ದರೂ, ನಿಮಗೆ ಕಾಣುವಂತೆ ಇರುತ್ತದೆ, ಆದರೆ ಅವರು ದೋಸೆಗೆ ಹಾಕುವ ಬೆಣ್ಣೆಯೇ ಬೇರೆ ಇರುತ್ತದೆ. ಇನ್ನು ದೋಸೆಗೆ ಬಳಸುವ ಹಿಟ್ಟಿನ ಬಗ್ಗೆ ನಾನಾ ಅನುಮಾನಗಳಿವೆ.
ನೀವೇನಾದ್ರೂ ಮನೆಯಲ್ಲಿ ದೋಸೆ ಮಾಡಿದರೆ, ಹೋಟೆಲ್ ನಲ್ಲಿರುವ ಬೆಣ್ಣೆ ದೋಸೆ ರೀತಿ ಬರೋದಿಲ್ಲ..ಅದು ನಿಮಗೆ ಗೊತ್ತಿರಬಹುದು..ಅದಕ್ಕೆ ವೈಜ್ಞಾನಿಕ ಕಾರಣವಿದೆ..ನಾವು ಅಕ್ಕಿಯನ್ನು ನೆನೆಇಟ್ಟು ಒಂಚೂರು ಸೋಡಾ ಹಾಕಿ ಬೆಳಗ್ಗೆ ಹಿಟ್ಟು ಉಕ್ಕಿದ ಮೇಲೆ ಫ್ರೇಶ್ ಆಗಿ ದೋಸೆ ತಿನ್ನುತ್ತೇವೆ..ಆದರೆ ಹೋಟೆಲ್ ನಲ್ಲಿ ಬಳಸುವ ದೋಸೆ ಫ್ರೇಶ್ ಆಗಿ ಇರೋದಿಲ್ಲ..ಮೂರು ದಿನಗಳ ಹಿಂದೆ ಹಿಟ್ಟು ಮಾಡಿ ಫೀಜರ್ ನಲ್ಲಿ ಇಡುತ್ತಾರೆ.
ಬಳಿಕ ಆ ಹಿಟ್ಟನ್ನು ಹೊರ ತೆಗೆದು ದೋಸೆ ಅಂಚಿನ ಮೇಲೆ ಇಟ್ಟಾಗ ಗರಿ-ಗರಿಯಾಗುತ್ತದೆ..ಬೇಕಾದರೆ ನೀವು ಕೂಡ ಮನೆಯಲ್ಲಿನ ಅಕ್ಕಿ ಹಿಟ್ಟನ್ನು ಫೀಜರ್ ನಲ್ಲಿ ಹಿಟ್ಟು ದೋಸೆ ಹಾಕಿದರೆ ಗರಿಗರಿಯಾಗುವುದಲ್ಲದೇ ರುಚಿಕರವಾಗಲಿದೆ ಎಂಬ ಅಭಿಪ್ರಾಯ ಕೆಲವರದ್ದು.
ಬೆಣ್ಣೆ ಅಸಲಿಯೋ, ನಕಲಿಯೋ
ದೋಸೆಗೆ ಹಾಕುವ ಬೆಣ್ಣೆ ಅಸಲಿಯೋ, ನಕಲಿಯೋ ಯಾರಿಗೂ ಗೊತ್ತಿಲ್ಲ. ಇದೇ ದಾವಣಗೆರೆಯಲ್ಲಿ ನಕಲಿ ಬೆಣ್ಣೆ ಬಳಸುವ ಹೋಟೆಲ್ ಗಳು ಪತ್ತೆಯಾಗಿತ್ತು. ನಿಮಗೆ ಗೊತ್ತಿರಲಿ ಗ್ರಾಹಕರೇ ಅಸಲಿ ಬೆಣ್ಣೆಗೆ ದರ ಕೆಜಿಗೆ 450 ರೂ. ಇದ್ದು, ಇಷ್ಟೋಂದು ಹಣ ಕೊಟ್ಟು ಅಸಲಿ ಬೆಣ್ಣೆ ಹಾಕ್ತಾರೆ ಎಂಬುದಕ್ಕೆ ಮಾತ್ರ ಉತ್ತರವಿಲ್ಲ. ಅಲ್ಲದೇ ಇದೇ ದಾವಣಗೆರೆಯಲ್ಲಿ ನಕಲಿ ನಂದಿನಿ ತುಪ್ಪ ಮಾರಾಟ ಮಾಡುತ್ತಿರುವವರನ್ನು ಖಾಕಿ ಪಡೆ ಹಿಡಿದಿತ್ತು.
ಅಸಲಿ ಬೆಣ್ಣೆ ಹೇಗಿರುತ್ತದೆ, ನಕಲಿ ಬೆಣ್ಣೆ ಹೇಗಿರುತ್ತದೆ
ಅಸಲಿ ಬೆಣ್ಣೆ ನೀರಿನಲ್ಲಿ, ಮಜ್ಜಿಗೆಯಲ್ಲಿ ತೇಲುತ್ತದೆ, ನಕಲಿ ಬೆಣ್ಣೆ ನೀರಿನಲ್ಲಿ ತೇಲುವುದಿಲ್ಲ, ಅಸಲಿ ಬೆಣ್ಣೆ ಕೈಗಳ ಉಷ್ಣತೆಗೆ ಕರುಗುತ್ತದೆ, ನಕಲಿ ಬೆಣ್ಣೆ ಕರಗುವುದಿಲ್ಲ, ಅಸಲಿ ಬೆಣ್ಣೆ ಸುವಾಸನೆ ಜಿಡ್ಡಿನ ಅಂಶ ಇರುತ್ತದೆ. ನಕಲಿ ಬೆಣ್ಣೆ ಸುವಾಸನೆ ಇರೋದಿಲ್ಲ, ಕೈಗೆ ಜಿಡ್ಡು ಅಂಟೋದಿಲ್ಲ…ಇನ್ನು ನಾಲಿಗೆಗೆ ಅಸಲಿ ಬೆಣ್ಣೆ ರುಚಿ ಗೊತ್ತಾಗುತ್ತದೆ, ನಕಲಿ ಬೆಣ್ಣೆ ಅಂಟುತ್ತದೆ…ಒಟ್ಟಾರೆ ಬರಗಾಲದಲ್ಲಿ ರೈತರ ಹಿತ ಕಾಪಾಡಾದ ಜಿಲ್ಲಾಡಳಿತ ಕೆಲವೇ ವ್ಯಕ್ತಿಗಳು ತಿನ್ನುವ ಬೆಣ್ಣೆ ದೋಸೆಗೆ ಹೆಚ್ಚು ಮಹತ್ವ ನೀಡಿರುವುದು ವಿಷಾಧನೀಯ.