ಹರಿಹರ: ಜನರು ಆರಕ್ಷಕರನ್ನು ದೇವರು ಎನ್ನುತ್ತಾರೆ, ಆದ್ರೆ ಆರಕ್ಷಕರೇ ಭಕ್ಷಕರಾದರೆ ಶ್ರೀ ಸಾಮಾನ್ಯನ ಗತಿ ಏನು…ಎಂಬುದಕ್ಕೆ ಇಲ್ಲೊಂದು ಪ್ರಕರಣ ಸಾಕ್ಷಿಯಾಗಿದೆ.

ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿತ್ತು. ಈ ಸಂಬಂಧ ಇದೇ ಠಾಣೆ ಪೇದೆ ಬಿ.ವಿ.ಮಂಜುನಾಥ್ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದಾನೆ. ಕೊಡದೇ ಹೋದರೆ ನಿನ್ನ ಮೇಲೆ ಕೇಸ್ ಹಾಕುತ್ತೇನೆ ಎಂದು ಹೆದರಿಸಿ ಪೋನ್ ಪೇ ಮೂಲಕ 25 ಸಾವಿರ ಹಣ ಹಾಕಿಸಿಕೊಂಡಿದ್ದಾನೆ.

ಪೇದೆ ಅಮಾನತು : ಪ್ರಕರಣಕ್ಕೆ ಸಂಬಂಧಿಸಿದಂತೆ ಫೋನ್ ಪೇ ಮೂಲಕ ಹಣ ಹಾಕಿಸಿಕೊಂಡ ಪೇದೆಯನ್ನು ಎಸ್ಪಿ ಉಮಾ ಪ್ರಶಾಂತ್ ಅಮಾನತು ಮಾಡಿದ್ದಾರೆ.ಹರಿಹರ ನಗರ ಇನ್ಸ್ಪೆಕ್ಟರ್ ದೇವಾನಂದ್ ನೀಡಿದ ವರದಿ ಆಧಾರದಲ್ಲಿ ಎಸ್ ಪಿ ಉಮಾ ಪ್ರಶಾಂತ್ ಅಮಾನತು ಮಾಡಿ ಆದೇಶಿಸಿದ್ದಾರೆ.

ಪ್ರಕರಣದ ವಿವರ: ಆರೋಪಿಗೆ ನಿನ್ನ ವಿರುದ್ಧ ಪೋಕ್ಸೋ ಕಾಯ್ದೆ ಅಡಿಯಲ್ಲಿ ನಿನ್ನ ಮೇಲೆ ಕೇಸ್ ಹಾಕಿ ಜಡಿತಿನಿ ಎಂದು ಅವಾಚ್ಯ ಶಬ್ದಗಳಿಂದ ಠಾಣೆಯಲ್ಲಿ ನಿಂದಿಸಲಾಗಿದೆ. ಅಲ್ಲದೇ
ಹೆದರಿಸಿ ಬೆದರಿಸಿ ಠಾಣೆಯಲ್ಲಿ ಸುಮಾರು ೧೨,೦೦೦ ರೂ ಹಣ ನಗದು ರೂಪದಲ್ಲಿ ಸ್ವೀಕರಿಸಲಾಗಿದೆ. ನಂತರ ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟು ನೀನು ಹೆಚ್ಚಿನ ಹಣ ನೀಡಬೇಕು ಎಂದು ಎದುರಿಸಲಾಗಿದೆ ಎಂಬ ಆರೋಪವಿದೆ.

ಪ್ರಕರಣಕ್ಕೆ ಸಂಬಂಧಪಟ್ಟ ವ್ಯಕ್ತಿಯ ಬಳಿ ಇದ್ದ ಮೊಬೈಲ್ ಫೋನ್ ಕಿತ್ತುಕೊಂಡು ಮೊಬೈಲ್ ನಲ್ಲಿ ಫೋನ್ ಪೇ ಬ್ಯಾಲೆನ್ಸ್ ಎಷ್ಟು ಇದೆ ಎಂದು ಪೇದೆ ಕೇಳಿದ್ದಾನೆ. ಅಲ್ಲದೇ
ಫೋನ್ ಪೇ ಪಿನ್ ನಂಬರ್ ಡಯಲ್ ಮಾಡು ಎಂದು ಪೇದೆ ಆರೋಪಿಗೆ ಹೇಳಿದ್ದಾನೆ. ಚೆಕ್ ಮಾಡಿದಾಗ ಖಾತೆಯಲ್ಲಿ 25,000 ಬ್ಯಾಲೆನ್ಸ್ ಇರುವುದು ಗೊತ್ತಾಗಿದೆ.

ನಂತರ ಆರೋಪಿಗೆ ಬೆದರಿಸಿ 25,000 ರೂ.ಗಳನ್ನು
ಪಿ ಸಿ ಮಂಜುನಾಥ್ ತನ್ನ ಖಾತೆಗೆ ಜಮಾ ಮಾಡಿಕೊಂಡಿದ್ದಾನೆ.‌ಈ ಸಂಬಂಧ ಎಸ್ ಪಿ ಉಮಾ ಪ್ರಶಾಂತ್ ಅವರಿಗೆ ಆರೋಪಿ ಕಡೆಯವರು ದೂರು ಸಲ್ಲಿಸಿದ್ದರು. ನಂತರ ಪೊಲೀಸ್ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ದಾಖಲೆಗಳು ಲಭ್ಯವಾಗಿವೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಇದೇ ಪೇದೆ ಕೆಲವು ವರ್ಷಗಳ ಹಿಂದೆ ಹರಿಹರ ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಇದೇ ರೀತಿ ಸಾರ್ವಜನಿಕರಿಗೆ ಬೇರೆ ಬೇರೆ ರೀತಿಯಲ್ಲಿ ತೊಂದರೆ ನೀಡುತ್ತಿದ್ದ ಎಂದು ಆರೋಪ ಕೇಳಿ ಬಂದಾಗ
ಅಂದಿನ ಐಜಿಪಿ ನಂಜುಂಡಸ್ವಾಮಿ ಈತನನ್ನು ಚನ್ನಗುರು ಠಾಣೆಗೆ ವರ್ಗಾವಣೆ ಮಾಡಿದ್ದರು‌ ಎಂಬುದನ್ನು ಸ್ಥಳೀಯರು ಹೇಳುತ್ತಾರೆ.

Share.
Leave A Reply

Exit mobile version