ದಾವಣಗೆರೆ : ಬೆಂಗಳೂರು ಗ್ರಾಮಾಂತರ. ಬಂಡೆ ಬ್ರದರ್ಸ್ ಭದ್ರಕೋಟೆ.. ಕಳೆದೊಂದು ದಶಕದಿಂದ ಈ ಕ್ಷೇತ್ರದಲ್ಲಿ ದಳಪತಿಗಳು ಕಮಕ್ ಕಿಮಕ್ ಅನ್ನೋಕೆ ಕಾಂಗ್ರೆಸ್ ಬಿಟ್ಟೇ ಇಲ್ಲ. ಇನ್ನ BJPಅಂತೂ ಅಡ್ರೆಸ್ಗೆ ಇಲ್ಲ ಬಿಡಿ. ಪರಿಸ್ಥಿತಿ ಹೀಗಿದ್ರೂ ಖ್ಯಾತ ಹೃದ್ರೋಗ ತಜ್ಡಾ.ಸಿ.ಎನ್.ಮಂಜುನಾಥ್ ಅವರನ್ನ ಕಮಲ ದಳ ಪಕ್ಷಗಳು ಇಲ್ಲಿ ತಂದು ನಿಲ್ಲಿಸಿದ್ಯಾಕೆ.? ಘಟಾನುಘಟಿ ನಾಯಕರೇ ಏನೂ ಮಾಡಲಾಗದ ಸಂದರ್ಭದಲ್ಲಿ ಪಾಪ ಡಾ. ಮಂಜುನಾಥ್ ಅವರು ಡಿಕೆ ಸುರೇಶ್ ಅವರನ್ನ ಮಣಿಸೋದಕ್ಕೆ ಆಗುತ್ತಾ.? ಹಾಗಾದ್ರೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿಪಾಸಿಟ್ ಕಳ್ಕೊಂತಾರಾ ಡಾಕ್ಟ್ರು!? ಈ ಕ್ಷೇತ್ರದ ಮೇಲೆ DK ಬ್ರದರ್ಸ್ ಬಿಗಿ ಹಿಡಿತ ಹೇಗಿದೆ ಗೊತ್ತಾ..?
ರಾಜಕಾರಣಕ್ಕೂ ಸಾಮಾನ್ಯ ಜೀವನಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ಚುನಾವಣೆಗೆ ಮೊದಲ ಸಲ ಸ್ಪರ್ಧಿಸೋರಿಗೆ ಜನ ಕೂಗೋ ಜೈಕಾರ, ತೋರಿಸೋ ಹುಸಿ ಪ್ರೀತಿಯನ್ನ ಜಡ್ಜ್ ಮಾಡೋಕೆ ಬರೋದೇ ಇಲ್ಲ. ಹೋದ ಕಡೆ ಬಂದ ಕಡೆಯೆಲ್ಲಲ್ಲಾ ಜನ ಕಿಕ್ಕಿರಿದು ಸೇರ್ತಾರೆ. ಅಥವಾ ರಾಜಕೀಯ ಪಕ್ಷಗಳು ದುಡ್ಡು ಕೊಟ್ಟು ಸೇರಿಸ್ತಾವೆ. ಇದೇ ರೀತಿ ಸಿನಿಮಾ ಸ್ಟಾರ್ಗಳು ಬಂದಾಗ್ಲೂ ಜನಸ್ತೋಮ ಸೇರೋದು ಕಾಮನ್. ಆದ್ರೆ ಚುನಾವಣೆ ಬೇರೆ, ಸಿನಿಮಾನೇ ಬೇರೆ. ಕೇಕೆ, ಶಿಳ್ಳೆ ಹಾಕೋ ಜನ್ರೆಲ್ಲಾ ತಮಗೆ ವೋಟ್ ಹಾಕ್ತಾರೆ ಅನ್ನೋದು ತಪ್ಪು ಕಲ್ಪನೆ. ಸದ್ಯ ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ್ ಅವರು ಇಂಥ ಒಂದು ತಪ್ಪು ಗ್ರಹಿಕೆಯಲ್ಲಿದ್ದಾರಾ ಅನ್ನೋ ಅನುಮಾನ ಹುಟ್ಕೊಂಡಿದೆ.
ಯಾಕಂದ್ರೆ ಡಾ. ಸಿಎನ್ ಮಂಜುನಾಥ್ ಅವರು ಎಲ್ಲೇ ಹೋದ್ರೂ ಜನ ಅತ್ಯಂತ ಪ್ರೀತಿಯಿಂದ ಬರ ಮಾಡಿಕೊಳ್ತಾಯಿದ್ದಾರೆ. ಇದನ್ನ ಕಂಡು ಡಾ. ಸಿಎನ್ ಮಂಜುನಾಥ್ ಅವರು ತಾವು ಇಲ್ಲಿಂದ ಗೆಲ್ಲೋದು ಗ್ಯಾರಂಟಿ ಅಂತದ್ಕೊಂಡಿದ್ದಾರೆ. ಕೆಲ ಮಾಧ್ಯಮಗಳು ಕೂಡ ಇಲ್ಲಿ ಹೈವೋಲ್ಟೇಜ್ ಸ್ಪರ್ಧೆ ನಡೆಯುತ್ತಿದೆ ಅಂತೇಳಿ ಬಿಂಬಿಸುತ್ತಿವೆ. ಆದ್ರೆ ಗ್ರೌಂಡ್ ರಿಪೋರ್ಟ್ ಬೇರೇನೇ ಇದೆ. ಕ್ಷೇತ್ರದ ಮೇಲೆ ಡಿಕೆ ಬ್ರದರ್ಸ್ ಬಿಗಿ ಹಿಡಿತ ಕಡಿಮೆಯಾಗಿಲ್ಲ.
ನಿಮಗೆ ಗೊತ್ತಿರ್ಲಿ, ಡಾ. ಸಿ.ಎನ್. ಮಂಜುನಾಥ್ ಅವರು ಜೆಡಿಎಸ್ ವರಿಷ್ಠ ದೇವೇಗೌಡರ ಅಳಿಯ. ಜೊತೆಗೆ ಖ್ಯಾತ ಹೃದ್ರೋಗ ತಜ್ಞ.. ಇದೇ ಮೊದಲ ಬಾರಿಗೆ ರಾಜಕಾರಣಕ್ಕೆ ಎಂಟ್ರಿಕೊಟ್ಟಿರೋದ್ರಿಂದ ಕಳಂಕ ರಹಿತ ಕ್ಲೀನ್ ಇಮೇಜ್ ಹೊಂದಿರೋ ವ್ಯಕ್ತಿ ಅನ್ನೋ ಮಾತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇವರ ಅತಿದೊಡ್ಡ ಸ್ಟ್ರೆಂಥ್ ಅಂದ್ರೆ ಪ್ರಧಾನಿ ಮೋದಿ ಅಲೆಯಲ್ಲಿ ಗೆಲ್ಲಬಹುದು ಅನ್ನೋದು. ಆದ್ರೆ 2019ರಲ್ಲಿ ಇಡೀ ರಾಜ್ಯದಲ್ಲಿ ಮೋದಿ ಅಲೆ ಇತ್ತಲ್ವಾ.? ಅಂಥ ಟೈಮಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 25ರಲ್ಲಿ ಬಿಜೆಪಿ ಗೆದ್ದಿತ್ತು. ಹಾಗಾದ್ರೆ ಬೆಂಗಳೂರು ಗ್ರಾಮಾಂತರದಲ್ಲಿ ಅದ್ಯಾಕೆ ಮೋದಿ ಅಲೆ ವರ್ಕೌಟ್ ಆಗಿರ್ಲಿಲ್ಲ.? ಅಂದ್ರೆ ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆ ಬ್ರದರ್ಸ್ ಉತ್ತಮ ಕಾರ್ಯಗಳು, ಜನ ಪರ ಆಡಳಿತದ ಮುಂದೆ ಮೋದಿ ವೇವ್ ನೆಲಕ್ಕಚ್ಚಿತ್ತು ಅಂತ ಅರ್ಥ ಅಲ್ವೇ.?
ಈ ಸಲ ಡಿಕೆ ಶಿವಕುಮಾರ್ ಅವರು ಈ ರಾಜ್ಯದ ಡಿಸಿಎಂ ಆಗಿದ್ದಾರೆ. ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಬೆನ್ನಿಗಿವೆ. ಅಷ್ಟೇ ಅಲ್ಲ, ಹಲವು ಚುನಾವಣೆಗಳನ್ನ ಯಶಸ್ವಿಯಾಗಿ ಗೆದ್ದಿರೋ ಬಂಡೆ ಬ್ರದರ್ಸ್ಗೆ ಈ ಸಲ ಬೆಂಗಳೂರು ಗ್ರಾಮಾಂತರದಲ್ಲಿ ಗೆಲ್ಲೋದು ಅಸಲಿಗೆ ಮ್ಯಾಟ್ರೇ ಅಲ್ಲ.
ಇನ್ನ ಬೆಂಗಳೂರು ಗ್ರಾಮಾಂತರ ಕ್ಷೇತ್ರ, ನಗರ ಮತ್ತು ಗ್ರಾಮೀಣ ಮತದಾರರ ಮಿಶ್ರಣವಾಗಿದೆ. ಒಟ್ಟು 27.53 ಲಕ್ಷ, ಬೆಂಗಳೂರು ಉತ್ತರದ ನಂತರ ರಾಜ್ಯದಲ್ಲಿ ಎರಡನೇ ಅತಿ ಹೆಚ್ಚು ಮತದಾರರುವ ಕ್ಷೇತ್ರವಾಗಿದೆ. 2009ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ರಚನೆಯಾದ ನಂತರ ಮೊದಲ ಚುನಾವಣೆಯಲ್ಲಿ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ 1.4 ಲಕ್ಷ ಮತಗಳ ಮುನ್ನಡೆಯೊಂದಿಗೆ ಗೆದ್ದಿದ್ದರು.
ಕುಮಾರಸ್ವಾಮಿ ಅವರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, 2013ರಲ್ಲಿ ನಡೆದ ಉಪಚುನಾವಣೆಯಲ್ಲಿ ಡಿ.ಕೆ.ಸುರೇಶ್ ಗೆಲುವು ಸಾಧಿಸಿದ್ರು. ಆನಂತರ 2014, 2019ರಲ್ಲೂ ಡಿಕೆ ಸುರೇಶ್ ಗೆದ್ದು ಹ್ಯಾಟ್ರಿಕ್ ಭಾರಿಸಿದ್ರು. ಈಗ ಮತ್ತೊಂದು ಗೆದ್ದು ಗೆಲುವಿನ ನಾಗಲೋಟ ಮುಂದುವರೆಸಲು ಮುಂದಾಗಿದ್ದಾರೆ. ಬಿಜೆಪಿಯು ಬೆಂಗಳೂರು ದಕ್ಷಿಣ, ಉತ್ತರ ಮತ್ತು ಸೆಂಟ್ರಲ್ ನಲ್ಲಿ ಎಲ್ಲಾ ಮೂರು ಲೋಕಸಭಾ ಸ್ಥಾನಗಳನ್ನು ಗೆಲ್ಲುತ್ತಿದೆ. ಆದರೆ 2008ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ರಚನೆಯಾದ ನಂತರ ಬಿಜೆಪಿ ಈ ಕ್ಷೇತ್ರವನ್ನ ಒಂದು ಸಲವೂ ಗೆದ್ದಿಲ್ಲ. ಆದಾಗ್ಯೂ, ಬಿಜೆಪಿ ಅಭ್ಯರ್ಥಿಗಳು ಯಾವಾಗಲೂ ಉತ್ತಮ ಸಂಖ್ಯೆಯ ಮತಗಳನ್ನು ಗಳಿಸಿದ್ದಾರೆ.
2019 ರಲ್ಲಿ ಬಿಜೆಪಿಯ ಮಾಜಿ ಎಂಎಲ್ಸಿ ಅಶ್ವತ್ಥನಾರಾಯಣ ಗೌಡ 6.7 ಲಕ್ಷ ಮತಗಳನ್ನು ಪಡೆದರೆ, ಆಗ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದ ಡಿಕೆ ಸುರೇಶ್ 8.7 ಲಕ್ಷ ಮತಗಳನ್ನು ಗಳಿಸಿದ್ರು ಅನ್ನೋದು ವಿಶೇಷ. ಆದ್ರೀಗ ಜೆಡಿಎಸ್ ಮೈತ್ರಿಯೊಂದಿಗೆ ಬಿಜೆಪಿ ಇಲ್ಲಿ ಕಾಲಿಡಲು ಪ್ರಯತ್ನಿಸುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೆಂಗಳೂರು ಗ್ರಾಮಾಂತರದಿಂದ ರಾಜ್ಯದಲ್ಲಿ ತಮ್ಮ ಪ್ರಚಾರವನ್ನು ಪ್ರಾರಂಭಿಸಿದರು ಮತ್ತು ಅನ್ಯಾಯದ ಆರೋಪದ ಮೇಲೆ ದಕ್ಷಿಣ ಭಾರತಕ್ಕೆ “ಪ್ರತ್ಯೇಕ ರಾಜ್ಯದ ಬೇಡಿಕೆ” ಸಂಬಂಧ ಡಿ.ಕೆ ಸುರೇಶ್ ನೀಡಿದ್ದ ಹೇಳಿಕೆವಿರುದ್ಧ ವಾಗ್ದಾಳಿ ನಡೆಸಿದ್ದರು.
ಇತ್ತ ಡಾ ಸಿ.ಎನ್. ಮಂಜುನಾಥ್ ಅವರು ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ನಿರ್ದೇಶಕರಾಗಿದ್ದರು. ಕಾಂಗ್ರೆಸ್ ಇವರನ್ನು “ವೈಟ್ ಕಾಲರ್ ಅಭ್ಯರ್ಥಿ” ಅಂತ ಬಣ್ಣಿಸುತ್ತದೆ. ಇದೇ ವೇಳೆ ಡಿಕೆ ಸುರೇಶ್ ಅವರನ್ನು ತಳಮಟ್ಟದ ನಾಯಕ ಎಂದು ಬಿಂಬಿಸುತ್ತಿದೆ.
ಹಾಗಾದ್ರೆ ಬೆಂಗಳೂರು ಗ್ರಾಮಾಂತರದಲ್ಲಿ ವೈಟ್ ಕಾಲರ್ ಅಭ್ಯರ್ಥಿ ಗೆಲ್ತಾರಾ.? ಇಲ್ಲ, ತಳಮಟ್ಟದ ನಾಯಕ ಗೆಲ್ತಾರಾ?