ದಾವಣಗೆರೆ : ಹೊನ್ನಾಳಿ ಶಾಸಕ ಶಾಂತನಗೌಡಗೆ ಡಿಸಿಸಿ ಬ್ಯಾಂಕ್ ನಿರ್ದೇಶಕ, ಶಿಮುಲ್ ಮಾಜಿ ಉಪಾಧ್ಯಕ್ಷ ಹಾಲಿ ನಿರ್ದೇಶಕ, ಕಾಂಗ್ರೆಸ್‌ನ ಎಚ್.ಕೆ.ಬಸಪ್ಪ ಹೊನ್ನಾಳಿಯಲ್ಲಿ ಸನ್ಮಾನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಬಸಪ್ಪ, ಶಾಸಕ ಶಾಂತನಗೌಡ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸುತ್ತಿದ್ದು, ಜನರ ನೋವು, ಸಮಸ್ಯೆಗಳಿಗೆ ಪರಿಹಾರವನ್ನು ಸ್ಥಳದಲ್ಲಿಯೇ ಹುಡುಕುವರು ಎಂದರು.
ಮುಂಬರುವ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವುದರಲ್ಲಿ ಸಂಶಯವೇ ಇಲ್ಲ. ಇಂದು ಅವರ ಜನ್ಮ ದಿನಾಚರಣೆಗೆ ಸಾಕಷ್ಟು ಅಭಿಮಾನಿಗಳು ಬಂದಿದ್ದು, ಸನ್ಮಾನಿಸಿದ್ದಾರೆ. ಅಲ್ಲದೇ ಕಾರ್ಯಕರ್ತರ ಮನಗೆಲ್ಲುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದಾರೆ. ಆದ್ದರಿಂದ ಶಾಸಕ ಶಾಂತನಗೌಡ ಇನ್ನಷ್ಟು ಬೆಳೆಯಲಿ ಎಂದು ಕಾಂಗ್ರೆಸ್ ನಾಯಕ ಎಚ್.ಕೆ.ಬಸಪ್ಪ ಹಾರೈಸಿದರು.