ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಪಟಾಕಿ ಟುಸ್

ದಾವಣಗೆರೆ: ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ದಾಪುಗಾಲು ಇಡುತ್ತಿದ್ದು, ಇಷ್ಟು ರಾಜ್ಯಗಳಲ್ಲಿ ಬಹುಮತ ಪಡೆಯುತ್ತೇವೆ. ಇಲ್ಲಿ ಇನ್ನು ಕಾಂಗ್ರೆಸ್ ಪಟಾಕಿ ಟುಸ್ ಆಗಿದೆ ಎಂದು ಬಿಜೆಪಿ ಯುವ ಮುಖಂಡ ಜಿ.ಎಸ್. ಅನೀತ್ ಕುಮಾರ್ ಹೇಳಿದ್ದಾರೆ.

ಗ್ಯಾರಂಟಿ ಯೋಜನೆಗಳಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್

ದಾವಣಗೆರೆ ವಿಜಯದೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಂಚರಾಜ್ಯ ಚುನಾವಣೆಯಲ್ಲಿ ಯೂ ಗ್ಯಾರಂಟಿಗಳನ್ನು ಘೋಷಣೆ ಮಾಡಿತು. ಆದರೆ ಆ ಗ್ಯಾರಂಟಿಗಳು ವರ್ಕೌಂಟ್ ಆಗಲಿಲ್ಲ. ನಿರೀಕ್ಷೆಯಂತೆ ಮಧ್ಯಪ್ರದೇಶ ದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ.

ಮಿಜೋರಾಂ ನಲ್ಲಿ ಬಿಜೆಪಿಗೆ ಬೆಂಬಲ

ರಾಜಸ್ಥಾನ ದಲ್ಲಿಯೂ ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆ. ಇನ್ನು ಛತ್ತೀಸ್ ಗಢ್ ನಲ್ಲಿ ನೇರ ಹಣಾಹಣಿ ಇದ್ದರೂ, ಸಹ ಅಲ್ಲಿಯೂ ಅಧಿಕಾರಕ್ಕೆ ಬರುತ್ತೇವೆ. ಮಿಜೋರಾಂ ನಲ್ಲಿ ಬಿಜೆಪಿಗೆ ಬೆಂಬಲ ದೊರೆಯಲಿದೆ.

ಮೂರು ರಾಜ್ಯದ ಗೆಲುವು ದಿಕ್ಸೂಚಿ ಆಗಲಿದೆ

ರಾಜ್ಯದಲ್ಲಿ ಅಧಿಕಾರ ಇರುವ ಕಾಂ ಗ್ರೆಸ್ ಘೋಷಿಸಿರುವ 2000 ರೂ. ಕೊಡಲು ಆಗುತ್ತಿಲ್ಲ, ವಿದ್ಯುತ್ ದರ ಏರಿಸಿದೆ, ಆರ್ಥಿಕವಾಗಿ ರಾಜ್ಯವನ್ನು ಕುಸಿಯುವಂತೆ ಮಾಡಿದೆ.ಮುಂದಿನ ಲೋಕಸಭಾ ಚುನಾವಣೆ ಗೆ ಮೂರು ರಾಜ್ಯದ ಗೆಲುವು ದಿಕ್ಸೂಚಿ ಆಗಲಿದೆ‌.

Share.
Leave A Reply

Exit mobile version