ದಾವಣಗೆರೆ : ಅತ್ತ ತಿರುಗಿ ಇತ್ತ ತಿರುಗಿ ಮಂಡ್ಯ ಲೋಕಸಭಾ ಅಖಾಡದಲ್ಲಿ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿಯಅವರೇ ಸ್ಪರ್ಧೆಗಿಳಿದಿದ್ದಾರೆ.. ಹೆಚ್​ಡಿಕೆ ತಮಗೆ ಟಿಕೆಟ್ ಕೈ ತಪ್ಪಿಸಿದ್ದಕ್ಕೆ ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಒಳಗೊಳಗೆ ಖುದ್ದು ಹೋಗಿದ್ದಾರೆ.. ಮತ್ತೊಂದು ಕಡೆ ಈ ಸಲ ಮಂಡ್ಯದಲ್ಲಿ ಕುಮಾರಸ್ವಾಮಿ ಗೆಲ್ಲಲ್ಲ ಅಂತೇಳಿ ಸಿಎಂ ಸಿದ್ದರಾಮಯ್ಯ ಭವಿಷ್ಯ ಹೇಳಿದ್ದಾರೆ. ಹಾಗಾದ್ರೆ ಏನಿದು ಮಂಡ್ಯ ರಣಕಣದ ಅಸಲಿ ಪಿಕ್ಚರ್ ಅಂದ್ರಾ?

ಮಂಡ್ಯ ರಾಜಕಾರಣ ಅಂದ್ರೆ ಇಡಿ ಇಂಡ್ಯಾನೇ ತಿರುಗಿ ನೋಡುವಂತೆ ಮಾಡುತ್ತೆ ಅನ್ನೋ ಮಾತಿದೆ. ಅದರಂತೆ ಈ ಸಲವೂ ಮಂಡ್ಯ ರಣಕಣ ಹೈವೋಲ್ಟೇಜ್ ಕಣವಾಗಿ ಮಾರ್ಪಡುತ್ತೆ ಅನ್ನೋ ಮಾತುಗಳಿದ್ವು. ಯಾಕಂದ್ರೆ ಮಂಡ್ಯದಲ್ಲಿ ಸಂಸದೆ ಸುಮಲತಾ ಅವರಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿದ್ರೆ ಸುಮಲತಾ ರಣಚಂಡಿಯಂತೆ ರೊಚ್ಚಿಗೇಳ್ತಾರೆ. BJP ಬಂಡಾಯ ಅಭ್ಯರ್ಥಿಯಾಗಿ ಮತ್ತೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಅನ್ನೋ ಮಾತುಗಳಿದ್ವು. ಆದ್ರೆ ಮಂಡ್ಯ ಲೋಕಸಭಾ ಕ್ಷೇತ್ರವನ್ನ ಬಿಜೆಪಿ ಜೆಡಿಎಸ್​​ಗೆ ಬಿಟ್ಟುಕೊಟ್ಟಿದ್ದು, ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿಯವರೇ ಮಂಡ್ಯದ ದೋಸ್ತಿ ಅಭ್ಯರ್ಥಿ ಅನ್ನೋ ವಿಷ್ಯ ಹೊರ ಬಿದ್ದು 2 ದಿನ ಆಯ್ತು. ಆದ್ರೂ ಸುಮಲತಾ ಈ ಬಗ್ಗೆ ಎಲ್ಲೂ ಬಹಿರಂಗವಾಗಿ ರಿಯಾಕ್ಟ್ ಮಾಡಿಲ್ಲ.. ಇದ್ರ ಜೊತೆಗೆ ಇವತ್ತು ತಮ್ಮ ಬೆಂಬಲಿಗರ ಸಭೆ ನಡೆಸಲಿದ್ದು, ನಿರ್ಧಾರ ತಿಳಿಸೋ ಸಾಧ್ಯತೆ ಇದೆ. ಹೀಗಾಗಿ ಸುಮಲತಾ ಅವರ ನಿರ್ಧಾರ ಏನು ಅನ್ನೋ ಕುತೂಹಲ ಗರಿಗೆದರಿದೆ. 

ಪರಿಸ್ಥಿತಿ ಹೀಗಿರೋವಾಗ್ಲೇ, ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಈ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ. ಸಂಸದೆ ಸುಮಲತಾ ಅವರು ಈಗ ಸಮಾಧಾನದಿಂದ ಇರಬೇಕು. ಮುಂದಿನ ದಿನ ಅವರಿಗೆ ಒಳ್ಳೆಯ ಅವಕಾಶ, ಸೂಕ್ತ ಸ್ಥಾನಮಾನ ಸಿಗುತ್ತೆ ಅಂತೇಳಿದ್ದಾರೆ. ಆದ್ರೆ ಬೀಸೋ ದೊಣ್ಣೆಯಿಂದ ಪಾರಾದ್ರೆ ಸಾವಿರ ವರ್ಷ ಅನ್ನೋ ಮಾತಿದೆ. ಹೀಗಾಗಿ ಬಿಜೆಪಿ ಸುಮಲತಾ ಅವರ ಬೀಸೋ ದೊಣ್ಣೆಯಿಂದ ಪಾರಾಗೋ ರಣತಂತ್ರದ ಮೊರೆ ಹೋಗಿದ್ದಾರಾ ಅನ್ನೋ ಅನುಮಾನಗಳು ವ್ಯಕ್ತವಾಗ್ತಾಯಿವೆ. ಅಷ್ಟೇ ಅಲ್ಲ, ಸುಮಲತಾ ಅವರು ಈಗ ರೆಬೆಲ್ ಆಗಿಲ್ಲ ಅಂದ್ರೆ ಬಿಜೆಪಿ ನಾಯಕರು ಸುಮಲತಾ ಅವರಿಗೆ ಯಾವ ಅವಕಾಶವನ್ನೂ ಮಾಡಿಕೊಡಲ್ಲ.. ಇದೆಲ್ಲಾ ಸುಮಲತಾ ಅವರ ಕಣ್ಣೀರೊರೆಸೋ ರಣತಂತ್ರ ಅನ್ನೋ ಮಾತುಗಳೂ ಕೇಳಿಬರ್ತಾಯಿವೆ. 

ಇತ್ತ ರಾಜ್ಯ ಕಾಂಗ್ರೆಸ್ ನಾಯಕರು ಮಾತ್ರ ಮಂಡ್ಯದಲ್ಲಿ ಈ ಸಲ ಕಾಂಗ್ರೆಸ್ ಅಭ್ಯರ್ಥಿ ಮತ್ತು ಸ್ಥಳೀಯ ಮುಖಂಡ ಸ್ಟಾರ್ ಚಂದ್ರು ಗೆಲ್ಲೋದು ಶತ ಸಿದ್ಧ ಅಂತಿದ್ದಾರೆ.. ಸುಮಲತಾ ಪಕ್ಷೇತರವಾಗಿ ನಿಲ್ತಾರೋ ಬಿಡ್ತಾರೋ ಅದು ಬೇರೆ ವಿಚಾರ. ಆದ್ರೆ ಹೆಚ್​ಡಿ ಕುಮಾರಸ್ವಾಮಿ ಮಂಡ್ಯದಿಂದ ಮೊದ್ಲು ಮಾಜಿ ಸಚಿವ CS ಪುಟ್ಟರಾಜು ಅವರ ಹೆಸರನ್ನ ತೇಲಿಬಿಟ್ಟಿದ್ರು. ಆನಂತರ ತಮ್ಮ ಮಗ ನಿಖಿಲ್ ಕುಮಾರಸ್ವಾಮಿ ಅವರ ಹೆಸರೂ ಮುಂಚೂಣಿಗೆ ಬಂದಿತ್ತು. ಕೊನೆಗೆ ಅವರ್ ಬಿಟ್ಟು ಇವರ್ ಬಿಟ್ಟು ನಾನೇ ಮಂಡ್ಯ ಅಭ್ಯರ್ಥಿ ಅಂತೇಳಿದ್ಧಾರೆ. ಇದಕ್ಕೆ ತಿರುಗೇಟು ಕೊಟ್ಟಿರೋ ಸಚಿವ ಚಲುವರಾಯಸ್ವಾಮಿ ಹಳ್ಳಿಯ ಒಂದು ಗಾದೆಯನ್ನ ಹೇಳಿದ್ದಾರೆ.

ಮತ್ತೊಂದು ಕಡೆ ಈ ಸಲ ಕುಮಾರಸ್ವಾಮಿ ಮಂಡ್ಯದಲ್ಲಿ ಗೆಲ್ಲೋದೇ ಇಲ್ಲ ಅಂತೇಳಿರೋ ಸಿಎಂ ಸಿದ್ದರಾಮಯ್ಯ, ಕಳೆದ ಸಲ ಅವರು ಸಿಎಂ ಆಗಿದ್ದಾಗ ಅವರ ಮಗನನ್ನೇ ಗೆಲ್ಲಿಸಿಕೊಳ್ಳೋಕೆ ಸಾಧ್ಯವಾಗಿರ್ಲಿಲ್ಲ. ಈಗ ಅವರು ಗೆಲ್ಲೋದಕ್ಕೆ ಸಾಧ್ಯವಾಗುತ್ತಾ.? ಚಾನ್ಸೇ ಇಲ್ಲ ಅಂತಿದ್ದಾರೆ. 

ಹಾಗಾದ್ರೆ ಸಿಎಂ ಸಿದ್ದರಾಮಯ್ಯನವರು ಹೇಳಿದಂತೆ ಈ ಸಲ ಮಂಡ್ಯದಲ್ಲಿ ಕುಮಾರಸ್ವಾಮಿ ಗೆಲ್ಲಲ್ವಾ.? ಮಂಡ್ಯ ಬಿಟ್ಟು ಬೇರೆ ಕಡೆ ಸ್ಪರ್ಧೆ ಮಾಡಲ್ಲ. ಬಿಜೆಪಿ ಅಭಿಪ್ರಾಯ ತಿಳಿಸ್ಲಿ ಅಮೇಲೆ ನಮ್ಮ ಅಭಿಪ್ರಾಯ ತಿಳಿಸ್ತೀನಿ ಅಂತೇಳಿ ಮಂಡ್ಯ ಸಂಸದೆ ಸುಮಲತಾ ಅವರು ಸೈಲೆಂಟ್ ಆಗಿರೋದ್ರ ಬಗ್ಗೆ ನೀವೇನಂತಿರಾ?

Share.
Leave A Reply

Exit mobile version