ದಾವಣಗೆರೆ: ದಾವಣಗೆರೆಯಲ್ಲಿ ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರ ವಿರುದ್ದ ಕಾಂಗ್ರೆಸ್ ನಾಯಕರು ಬೃಹತ್ ಪ್ರತಿಭಟನೆ ನಡೆಸುವುದಲ್ಲದೇ, ಹಾಲಿ ಎಂಪಿ ವಿರುದ್ದ ಹರಿಹಾಯ್ದರು.

ಅಂಬೇಡ್ಕರ್ ವೃತ್ತದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಹದಡಿ ರಸ್ತೆಯಲ್ಲಿರುವ ಆದಾಯ ತೆರಿಗೆ ಇಲಾಖೆ ಕಚೇರಿಗೆ ಪ್ರತಿಭಟನಾ ನಿರತರು ತೆರಳಿ ಮನವಿ ಸಲ್ಲಿಸಿದರು

ಸಂಸದ ಡಾ. ಜಿ.ಎಂ. ಸಿದ್ದೇಶ್ವರ ಅವರು ಕಳೆದ 8-10 ವರ್ಷದಿಂದ 500 ಕೋಟಿಗೂ ಅಧಿಕ ಹಣದ ಹವಾಲ ಹಗರಣ ನಡೆಸಿದ್ದಾರೆ ಎಂಬ ಆರೋಪದ ಬಗ್ಗೆ ಇಡಿ ತನಿಖೆ ನಡೆಸಬೇಕು ಎಂದ ಕಾಂಗ್ರೆಸ್ ಮುಖಂಡರು ಸಂಸದ ಸಿದ್ದೇಶ್ವರ್ ಹಲವಾರು ವರ್ಷಗಳಿಂದ ಹವಾಲಾ ಹಗರಣ ನಡೆಸುತ್ತಿದ್ದಾರೆ.

ಮೂವತ್ತು ಪೈಸೆ ಕಮಿಷನ್ ಗಾಗಿ ಕಳೆದ ಹಲವಾರು ವರ್ಷದಿಂದ ನನ್ನ ಕಾರಿನಲ್ಲೇ ಹಣ ಸಾಗಿಸುತ್ತಿದ್ದೇ ಎಂಬುದಾಗಿ ಚಾಲಕ ಸ್ವಾಮಿ ಮತ್ತು ಅನುಪಮ ಎಂಬುವರು ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿರುವ ದೂರಿನ ಬಗ್ಗೆ ತನಿಖೆ ನಡೆಸಬೇಕು ಎಂದು ಪ್ರತಿಭಟನಾ ನಿರತರು ಒತ್ತಾಯಿಸಿದರು.

ಪ್ರತಿಭಟನಾ ಮೆರವಣಿಗೆಯುದ್ದಕ್ಕೂ ಸಂಸದ ಸಿದ್ದೇಶ್ವರರನ್ನು ವಶಕ್ಕೆ ಪಡೆದು, ಮಂಪರು ಪರೀಕ್ಷೆಗೆ ಒಳಪಡಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಘೋಷಣೆ ಕೂಗುತ್ತಾ, ಆದಾಯ ತೆರಿಗೆ ಇಲಾಖೆಗೆ ಮನವಿ ಅರ್ಪಿಸಲಾಯಿತು.

ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡರು, ಸಂಸದ ಸಿದ್ದೇಶ್ವರ ವಿರುದ್ಧ ಕೇಳಿ ಬಂದಿರುವ ಹವಾಲಾ ದಂಧೆಯ ಗಂಭೀರ ಆರೋಪವನ್ನು ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಗಂಭೀರವಾಗಿ ಪರಿಗಣಿಸಬೇಕು. ತಕ್ಷಣವೇ ಸಂಸದ ಸಿದ್ದೇಶ್ವರರನ್ನು ವಶಕ್ಕೆ ಪಡೆದು, ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಅಲ್ಲದೇ
ಕಳೆದ 8-10 ವರ್ಷದಿಂದಲೂ ಹವಾಲ ಹಗರಣ ನಡೆಸಿದ್ದಾರೆಂಬ ಆರೋಪದ ಸತ್ಯಾಸತ್ಯತೆ ಬಗ್ಗೆ ಸಮಗ್ರ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.

ಸಿದ್ದೇಶ್ವರ ಹೇಳಿಕೆ ಅನುಮಾನಸ್ಪದ

ಸಂಸದ ಸಿದ್ದೇಶ್ವರ ಅನೇಕ ವರ್ಷದಿಂದ ಹವಾಲ ವ್ಯವಹಾರ ನಡೆಸುತ್ತಿದ್ದಾರೆ. ಹವಾಲಾ ಹಗರಣ ಬೆಳಕಿಗೆ ಬರುತ್ತಿದ್ದಂತೆಯೇ ತಮಗೆ ಜೀವ ಬೆದರಿಕೆ ಇದೆ. ವಿಷ ಹಾಕಬಹುದೆಂದೆಲ್ಲಾ ಮಾಧ್ಯಮಗಳಿಗೆ ಹೇಳಿಕೆ ನೀಡಿರುವುದು ಸಾಕಷ್ಟು ಅನುಮಾನಕ್ಕೂ ಆಸ್ಪದ ಮಾಡಿಕೊಟ್ಟಿದೆ.

ಜೀವ ಬೆದರಿಕೆ ಸಂಸದರಿಗೆ ಯಾಕಿರುತ್ತದೆ? ದಾವಣಗೆರೆ ಜನರು ಹಾಲು ನೀಡುವಂತಹ ಮನಸ್ಥಿತಿಯವರೇ ಹೊರತು, ವಿಷ ನೀಡುವವರಲ್ಲ. ದಾವಣಗೆರೆ ಕ್ಷೇತ್ರದಿಂದ ಪುನಃ ಸ್ಪರ್ಧಿಸುವ ಘೋಷಣೆ ಮಾಡುವ ಸಿದ್ದೇಶ್ವರ ಕ್ಷೇತ್ರದಲ್ಲಿ ಏನು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆಂಬ ಬಗ್ಗೆ ಅಭಿವೃದ್ಧಿ ಕಾರ್ಡ್ ತೋರಿಸಲಿ, ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ವರದಿಯಾದಂತೆ ಹವಾಲ ಹಗರಣಕ್ಕೆ ಸಂಬಂಧಿಸಿದಂತೆ ಸಂಸದರನ್ನು ವಶಕ್ಕೆ ಪಡೆದು, ತನಿಖೆಗೆ ಒಳಪಡಿಸದಿದ್ದರೆ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಪ್ರತಿಭಟನಾ ನಿರತರು ಎಚ್ಚರಿಸಿದರು.

ಹರಿಹರ ಮಾಜಿ ಶಾಸಕ ಎಸ್‌.ರಾಮಪ್ಪ ಮಾತನಾಡಿ, ಬಿಜೆಪಿಯವರು ಸಾಕಷ್ಟು ಹಗರಣ ಮಾಡಿದ್ದು, ಸುಖಾಸುಮ್ಮನೆ ಡಿ.ಕೆ.ಶಿವಕುಮಾರ ಮೇಲೆ ಆರೋಪ ಮಾಡಿ, ಜೈಲಿಗೆ ಹಾಕಿಸಿದ್ದರು. ದಾವಣಗೆರೆ ಸಂಸದ ಸಿದ್ದೇಶ್ವರ ಅವರ ಬಹಳ ಹಗರಣಗಳಿವೆ. ಆದರೆ, ಅವು ಯಾರಿಗೂ ಗೊತ್ತಿಲ್ಲವೆಂದು ತಿಳಿದುಕೊಂಡಿದ್ದಾರಷ್ಟೇ.

ಬಿಜೆಪಿಯವರು ರಾಮನ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿಯವರಷ್ಟೇ ಹಿಂದುಗಳಲ್ಲ. ಕಾಂಗ್ರೆಸ್ಸಿನವರೂ ಹಿಂದುಗಳೇ ಎಂಬುದನ್ನು ಮರೆಯಬಾರದು. ಮುಂದಿನ ದಿನಗಳಲ್ಲಿ ಬಿಜೆಪಿಯವರಿಗೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದರು.

ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ.ಶೆಟ್ಟಿ, ಮಾಜಿ ಶಾಸಕ ಎಸ್.ರಾಮಪ್ಪ, ಕೆಪಿಸಿಸಿ ವಕ್ತಾರ ಡಿ.ಬಸವರಾಜ, ಮಾಜಿ ಮೇಯರ್ ಅನಿತಾಬಾಯಿ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಲತೀಫ್‌, ಸದಸ್ಯರಾದ ಜಿ.ಎಸ್.ಮಂಜುನಾಥ ಗಡಿಗುಡಾ
ಳ್, ಕೆ.ಚಮನ್ ಸಾಬ್‌, ಕೆ.ಜಿ.ಶಿವಕುಮಾರ, ಹರಿಹರ ರೇವಣಸಿದ್ದಪ್ಪ, ಎಲ್.ಎಂ.ಎಚ್.ಸಾಗರ್, ಎಸ್.ಮಲ್ಲಿಕಾರ್ಜುನ, ಕೋಳಿ ಇಬ್ರಾಹಿಂ, ಅಲ್ತಾಫ್ ಹುಸೇನ್, ಅಯೂಬ್ ಪೈಲ್ವಾನ್, ವಕೀಲ ಅನೀಸ್ ಪಾಷ, ಜಯಕುಮಾರ, ನಂಜಾನಾಯ್ಕ, ಅಲಿ ರಹಮತ್‌, ಶುಭ ಮಂಗಳ, ಸುನೀತಾ ಭೀಮಣ್ಣ, ದಾಕ್ಷಾಯಣಮ್ಮ, ಸುಷ್ಮಾ ಪಾಟೀಲ, ಕವಿತಾ ಚಂದ್ರಶೇಖರ, ರಾಜೇಶ್ವರಿ, ಎಚ್.ಜೆ.ಮೈನುದ್ದೀನ್, ಡಿ.ಎನ್‌.ಜಗದೀಶ, ಎಚ್‌.ಗುರುರಾಜ, ಇಬ್ರಾಹಿಂ ಖಲೀಲುಲ್ಲಾ, ಬಾಬುರಾವ್‌, ರವಿ ಇತರರು ಇದ್ದರು.

Share.
Leave A Reply

Exit mobile version