ದಾವಣಗೆರೆ (ಹೊನ್ನಾಳಿ) : ಕಾಂಗ್ರೆಸ್ ಅಲ್ಪಸಂಖ್ಯಾತರ ತುಷ್ಟಿಕಾರಣದಿಂದಾಗಿ ಇಂದು ರಾಜ್ಯದಲ್ಲಿ ಬಹುಸಂಖ್ಯಾತ ಹಿಂದೂಗಳು ತಮ್ಮ ಹಬ್ಬಗಳನ್ನು ಸರ್ಕಾರದ ನೀಡಿದ ನಿಯಮಾವಳಿಯಂತೆ ಆಚರಣೆ ಮಾಡುವ ದುಸ್ಥಿತಿ ಬಂದೋದಗಿದೆ ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದ ಗಲಭೆ ಉದ್ದೇಶಿಸಿ ಮಾತನಾಡಿದ ಅವರು, ಕೃತ್ಯವು ಪೂರ್ವನಿಯೋಜಿತದಂತೆ ಮೇಲ್ನೋಟಕ್ಕೆ ಕಾಣುತ್ತಿದ್ದು ತಲವಾರ್, ಪೆಟ್ರೋಲ್ ಬಾಂಬ್, ಲಾಂಗ್ ನಂತಹ ಮಾರಕಾಸ್ತ್ರಗಳನ್ನು ಒಮ್ಮೆಲೇ ಬಂದಿದ್ದರು ಹೇಗೆ…? ಗೃಹಸಚಿವರು ಈ ಬಗ್ಗೆ ಉತ್ತರ ನೀಡುವಂತೆ ಒತ್ತಾಯಿಸಿದ್ದಾರೆ.

ಗಭೆಯಿಂದಾಗಿ ನಷ್ಟ ಉಂಟಾದ ಅಂಗಡಿ ಮಾಲೀಕರಿಗೆ ಸರ್ಕಾರ ನಷ್ಟ ಭರಿಸುವ ಮೂಲಕ ಅವರ ಸಂಕಷ್ಟಕ್ಕೆ ಸ್ಪಂದಿಸುವಂತೆ ಅದನ್ನು ಗಲಭೆ ಮಾಡಿದವರಿಂದ ವಸೂಲಿ ಮಾಡುವ ಮೂಲಕ ಅವರಿಗೆ ಬಿಸಿ ಮುಟ್ಟಿಸಬೇಕಿದೆ ಎಂದರು

ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಿಲ್ಲೊಂದು ಕೋಮು ಗಲಾಭೆಗಳು ಆಗುತ್ತಿದ್ದರು ಗೃಹಸಚಿವ ಪರಮೇಶ್ವರ್ ಕಠಿಣ ಕ್ರಮ ಕೈಗೊಳ್ಳದ ಹಿನ್ನಲೆ ಇದು ಮುಂದುವರೆಯುತ್ತಿದೆ ಗೃಹಸಚಿವರಿಗೆ ಇದು ಸಣ್ಣ ಗಲಭೆಯ ರೀತಿ ಕಾಣುತ್ತಿದೆ ಹಿಂದೂಗಳು ಒಗ್ಗಟ್ಟಾಗಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಮಾಡುವ ಮೂಲಕ ಬಿಸಿ ಮುಟ್ಟಿಸುವಂತೆ ಕರೆ ನೀಡಿದರು.
ನಾವು ಮುಸ್ಲಿಂಗಳ ವಿರೋಧಿಗಳಲ್ಲ ಆದರೆ ನೀವು ಅವರ ಕೃತ್ಯಗಳಿಗೆ ತುಷ್ಟಿಕರಣ ನೀಡುತ್ತಿರುವುದೇಕೆ…?.ಮುಸ್ಲಿಂ ಹಬ್ಬಗಳಲ್ಲಿ ಪಾಲ್ಗೊಳ್ಳುವ ನೀವು ಯಾವುದೇ ಶರತ್ತುಗಳನ್ನು ಹಾಕದೆ ಹೊಟ್ಟೆತುಂಬಾ ಬಿರಿಯಾನಿ ತಿಂದು ಕುಣಿದು ಕುಪ್ಪಳಿಸುತ್ತೀರಾ..ಹಿಂದೂಗಳ ಹಬ್ಬಗಳಿಗೇಕೆ ನಿಯಮವಾಳಿ ಚೌಕಟ್ಟಿನಲ್ಲಿ ಹಬ್ಬ ಆಚರಿಸುವಂತೆ ಮಾಡುತ್ತೀರಾ ಇದ್ಯಾವ ಸೀಮೆ ನ್ಯಾಯ.ಹಿಂದೂ ಹಬ್ಬಗಳಲ್ಲಿ ಮೆರವಣಿಗೆ ದಾರಿ ಸೇರಿದಂತೆ ಪ್ರಸಾದಕ್ಕೂ ಅನುಮತಿ ಪಡೆಯುವಂತೆ ನಿಯಮಾವಳಿ ರೂಪಿಸುತ್ತೀರಾ..ಅದೇ ಕಷ್ಟ ಬಂದ ಕೂಡಲೇ ದೇವಸ್ಥಾನಗಳಿಗೆ ಓಡೋಡಿ ಬರುವ ನೀವು ದೇವಸ್ಥಾನಗಳ ಆದಾಯವನ್ನೇಕೆ ಸರ್ಕಾರಕ್ಕೆ ಪಡೆಯುತ್ತಿರಾ ಎಂದು ಪ್ರಶ್ನೆಗಳ ಸುರಿಮಳೆ ಗೈದರು…

Share.
Leave A Reply

Exit mobile version