ಚನ್ನಗಿರಿ:  ಚನ್ನಗಿರಿ ತಾಲೂಕಿನ ವ್ಯಾಪ್ತಿಯ ನಲ್ಲೂರು, ಹಿರೇಮಳಲಿ, ಮಾವಿನಕಟ್ಟೆ ಗ್ರಾಮಗಳಿಗೆ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಪ್ರಬಲ ಆಕಾಂಕ್ಷಿ ಜಿ.ಬಿ. ವಿನಯ್‌ಕುಮಾರ್ ಪಾದಯಾತ್ರೆಯ ಮೂಲಕ ಜನರ ಸಮಸ್ಯೆಗಳನ್ನು ಆಲಿಸಿದರು.

ನಲ್ಲೂರು ಗ್ರಾಮದಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಸ್ವಾಗತ ಕೋರಿ ಮನೆ ಮನೆಗೆ ತೆರಳಿ ಜನರ ಸಂಕಷ್ಟಗಳನ್ನು ಆಲಿಸಿದ ವಿನಯ್‌ಕುಮಾರ್ ಮಾತನಾಡಿ,  ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದು ಅಂತಹ ಸಮಸ್ಯೆಗಳಿಂದ ಮುಕ್ತಿಯನ್ನು ಹೊಂದಬೇಕಾದರೆ ಪ್ರಜ್ಞಾವಂತ ಮತದಾರರು ಪ್ರಜ್ಞಾವಂತ ನಾಯಕರನ್ನು ಆಯ್ಕೆ ಮಾಡಿಕೊಳ್ಳಬೇಕಿದೆ.

ಈ ಹಿಂದೆ ಆಯ್ಕೆಯಾದಂತಹ ಸಂಸದರು ನಿಮ್ಮ ಗ್ರಾಮಕ್ಕೆ ಎಷ್ಟುಬಾರಿ ಬಂದು ಜನರ ಸಂಕಷ್ಟಗಳನ್ನು ಕೇಳಿದ್ದಾರೆ. ಈ ಗ್ರಾಮಗಳಿಗೆ ಬರಲು ಸಮಯಕ್ಕೆ ಸರಿಯಾಗಿ ಬಸ್‌ಗಳ ವ್ಯವಸ್ಥೆ ಇಲ್ಲವೆಂದು ತಾಯಂದಿರು ಹೇಳುತ್ತಿದ್ದು, ಇಂತಹ ಮುಂದುವರೆದ ದಿನಗಳಲ್ಲಿ ಜನರು ಈ ಸಮಸ್ಯೆಗಳನ್ನು ಅನುಭವಿಸಬೇಕೆ. 

ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಯುವಕರು ನಿರುದ್ಯೋಗವನ್ನು ಅನುಭವಿಸುತ್ತಿದ್ದು ಶಿಕ್ಷಣಕ್ಕೆ  ಹೆಚ್ಚಿನ ಮಹತ್ವ ನೀಡಬೇಕಿದೆ. ವಿದ್ಯಾರ್ಥಿಗಳು  ನಾವು ವಿದ್ಯಾಬ್ಯಾಸವನ್ನು ಮಾಡುವಂತಹ ಸಂದರ್ಭದಲ್ಲಿ ನಮ್ಮ ಗುರಿ ಐ.ಎ.ಎಸ್. ಮತ್ತು ಐ.ಪಿ.ಎಸ್  ಎಂದು ಇಟ್ಟುಕೊಂಡು ಶೈಕ್ಷಣಿಕ ಚಟುವಟಿಕೆಗಳ ಕಡೆ ಗಮನಹರಿಸಬೇಕು ಎಂದರು. 

ಈ ಸಂದರ್ಭದಲ್ಲಿ  ಮಲ್ಲಿಗೇನಹಳ್ಳಿ ಗ್ರಾಮಸ್ಥರಾದ ಟಿ.ಆರ್.ರಮೇಶ್, ಹಾಲೇಶ್, ತಿಪ್ಪೇಶ್, ಹನುಂಮತಪ್ಪ, ವೆಂಕಟೇಶ್, ನಲ್ಲೂರು ಗ್ರಾಮದರಾಮು, ಗುಡ್ಡೇಶ್  ಇತರರು ಹಾಜರಿದ್ದರು.

Share.
Leave A Reply

Exit mobile version