ಸತೀಶ್ ಪವಾರ್ ಚನ್ನಗಿರಿ

 ದೇವರ ದರ್ಶನ ಪಡೆದು ವಾಪಸ್ ಊರಿಗೆ ಹೋಗುತ್ತಿರುವಾಗ ಟಾಟಾ ಏಸ್ ವಾಹನ ಪಲ್ಟಿಯಾಗಿರುವ ಘಟನೆ ತಾಲೂಕಿನ  ಗೋಪನಹಾಳ್ ಗ್ರಾಮದ ಬಳಿ  ಪಲ್ಟಿಯಾಗಿದೆ.

ಈ ಟಾಟಾ ಏಸ್ ಚಿಕ್ಕಜಾಜೂರು ಸಮೀಪದ ಕೊಡಗವನಹಳ್ಳಿ  ಗ್ರಾಮದಿಂದ  ಚನ್ನಗಿರಿ ತಾಲೂಕಿನ ಅಮ್ಮನಗುಡ್ಡ ದೇಗುಲಕ್ಕೆ  ತೆರಳಿ  ಗ್ರಾಮಕ್ಕೆ  ವಾಪಾಸ್ ಬರುತ್ತಿತ್ತು. ಈ ವಾಹನದಲ್ಲಿ  ಮಕ್ಕಳು  ಸೇರಿದಂತೆ  ಸುಮಾರು 20 ಜನರು ಪ್ರಯಾಣಿಸುತ್ತಿದ್ದು 8 ಜನರಿಗೆ  ತೀವ್ರತರನಾದ ಪೆಟ್ಟಾಗಿದೆ.   ಹೆಚ್ಚಿನ  ಚಿಕಿತ್ಸೆಗಾಗಿ ಶಿವಮೊಗ್ಗ  ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು  10  ಜನರನ್ನು  ಚನ್ನಗಿರಿಯ  ಸಾರ್ವಜನಿಕ  ಆಸ್ಪತ್ರೆಗೆ ದಾಖಲಿಸಲಾಗಿದೆ.   ಘಟನೆಗೆ  ಸಂಬಂದ್ಇಸಿದಂತೆ  ಚನ್ನಗಿರಿ ಪೋಲಿಸ್ ಠಾಣೆಯಲ್ಲಿ   ಪ್ರಕರಣ ದಾಖಲಾಗಿದೆ.

Share.
Leave A Reply

Exit mobile version