ಚನ್ನಗಿರಿ: ಚನ್ನಗಿರಿ ತಾಲೂಕಿನ ಮಾವಿನಹೊಳೆ  ಕ್ಷೇತ್ರದಲ್ಲಿ  ಶ್ರೀ ಗುರುಮಹಾರುದ್ರಸ್ವಾಮಿ ಮಹಾಶಿವರಾತ್ರಿ ಜಾಗರಣೆ  ಮತ್ತು ಜಾತ್ರಾ  ಮಹೋತ್ಸವ ಕಾರ್ಯಕ್ರಮವು  ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.

ದೇಗುಲದ ಸಮಿತಿಯ ವತಿಯಿಂದ ಪ್ರತಿವರ್ಷವೂ ಮಹಾಶಿವರಾತ್ರಿಯ ೩ ದಿನಗಳವರೆಗೆ ಪೂಜಾ ಕಾರ್ಯಕ್ರಮನಡೆಯಲಿದ್ದು,  ಶ್ರೀಮಠದ ಮನೆಯಿಂದ ಶ್ರೀ ಗುರುಮಹಾರುದ್ರಸ್ವಾಮಿಯ ಅಡ್ಡಪಲ್ಲಕ್ಕಿಯ ಉತ್ಸವ ನಡೆಸಲಾಯಿತು. 

ಬಾಣ ಬಿರುಸು,ಪುರಂತರ ಊರವಣಿ, ವೀರಗಾಸೆ ನೃತ್ಯ, ಕೋಲಾಟ, ಭಜನೆ,ಡೊಳ್ಳು ಕುಣಿತ, ಮಂಗಳವಾದ್ಯಗಳೊಂದಿಗೆ ಮಠಕ್ಕೆ  ತೆರಳಿತು.

ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದಲ್ಲಿ ಮಹಾರುದ್ರಾಭಿಷೇಕ, ಅಷ್ಟೋತ್ತರ,ದೀಪೋತ್ಸವ, ಸಹಸ್ರ ಬಿಲ್ವಾರ್ಚನೆ, ಶತನಾಮಾವಳಿ ಸ್ತೋತ್ರ, ಪಾದಪೂಜೆ ಪ್ರಸಾದ ನಡೆಸಲಾಯಿತು.

ಯಡೆಯೂರು ರೇಣುಕಾ ಶಿವಾಚಾರ್ಯ ಶ್ರೀ ಸ್ವಾಮಿಯ ಮಹಾಪೂಜೆ, ಮಹಾಮಂಗಳಾರತಿಗಳೊಂದಿಗೆ ಜಾತ್ರಾ ಮಹೋತ್ಸವಕ್ಕೆ  ಚಾಲನೆ ನೀಡಿದರು. ನಂತರ  ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ದಾಸೋಹದ ವ್ಯವಸ್ಥೆಯನ್ನು ಮಾಡಲಾಯಿತು. ದಾಸೋಹಕ್ಕೆ  ಜಾತ್ರಾ ಮಹೋತ್ಸವಕ್ಕೆ  ಆಗಮಿಸಿದ್ದ  ಭಕ್ತಾದಿಗಳು  ಅಕ್ಕಿ, ಬೇಳೆ, ಬೆಲ್ಲ. ತರಕಾರಿಗಳನ್ನು  ನೀಡಿದ್ದು  ಸುಮಾರು ೨೫.೦೦೦ ಜನ ಭಕ್ತಾದಿಗಳು ಪಾಯಸ, ಪಲ್ಯ, ಕೋಸಂಬರಿ, ಪಲಾವ್, ಅನ್ನ ಸಾಂಬರ್ ಸವಿದರು.  ಊಟ ಮಾಡಿದರು. ಭಾನುವಾರ ಭದ್ರಮಹಾಕಾಳಿ ಅಮ್ಮನವರ ಜಾತ್ರೆ ಮತ್ತು ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ಇದ್ದು   ಚನ್ನಗಿರಿ ತಾಲೂಕು  ಸೇರಿದಂತೆ  ರಾಜ್ಯದ  ನಾನಾ ಭಾಗಗಳಿಂದ ಭಕ್ತಾದಿಗಳು ಆಗಮಿಸಿದ್ದರು.

Share.
Leave A Reply

Exit mobile version