ಚನ್ನಗಿರಿ: ಜನರಲ್ಲಿ ಸಾಕಷ್ಟು ಹಣ ಅಂತಸ್ತು ಎಲ್ಲಾ ಇದ್ದರೂ ಉತ್ತಮ ಆರೋಗ್ಯ ಇಲ್ಲದೇ ಇದ್ದರೇ ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಆದ್ದರಿಂದ ಒತ್ತಡದ ಜೀವನದಲ್ಲಿ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.
ಪಟ್ಟಣದ ಜೂನಿಯರ್ ಕಾಲೇಜು ಪ್ರೌಢಶಾಲೆಯ ಆವರಣದಲ್ಲಿ ಶಿವಮೊಗ್ಗದ ವಿನ್ಲೈಪ್ ಟ್ರಸ್ಟ್ ಮತ್ತು ಶಿವಮೊಗ್ಗ ಮೆಟ್ರೋ ಆಸ್ಪತ್ರೆ ಮತ್ತು ಬೆಂಗಳೂರು ಮಣಿಪಾಲ ಆಸ್ಪತ್ರೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ಉತ್ಸವ ಅಧ್ಯಾಯ 3 ಮತ್ತು ಮಧುಮೇಹ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಕೋವಿಡ್ ಜನರಿಗೆ ಅರೋಗ್ಯದ ಕುರಿತು ಉತ್ತಮ ಪಾಠ ಕಲಿಸಿದೆ. ಇತ್ತೀಚಿನ ದಿನಗಳಲ್ಲಿ ಜನರು ಒತ್ತಡದ ಬದುಕಿನಿಂದ ಮಧುಮೇಹ ರೋಗಕ್ಕೆ ತುತ್ತಾಗುತ್ತಿದ್ದಾರೆ ಎಂದರು.
ಹೆದರಿಕೆ ಬೇಡ, ನಾವು ಜನಸ್ಮೇಹಿ ಪೊಲೀಸ್.
ಪೋಲಿಸ್ ಇಲಾಖೆಯ ಬಗ್ಗೆ ಜನರಲ್ಲಿ ಭಯದ ವಾತಾವರಣ ಇದೆ. ಆದರೆ ಪೊಲೀಸರು ಜನಸ್ನೇಹಿ ಪೋಲಿಸ್ ಕೆಲಸ ಮಾಡುತ್ತಿದ್ದೇವೆ. ಅಪರಾಧಗಳನ್ನು ತಡೆಗಟ್ಟುವಂತಹ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜನರು ಪೊಲೀಸ್ ಇಲಾಖೆಯ ತುರ್ತು ಸೇವೆಗಳಿಗೆ 112 ನಂಗೆ ಕರೆ ಮಾಡಿ. ಮತ್ತು ಮಕ್ಕಳಿಗೆ ಸಂಬಂಧಿಸಿದ ವಿಷಯಗಳಿಗೆ 1098 ನಂ. ಗೆ ಕರೆ ಮಾಡಿ, ಸೈಬರ್ಕ್ರೈಂಗಳು ಮತ್ತು ಆಧಾರ್ ಬಳಿಸಿ ಬ್ಯಾಂಕ್ ಖಾತೆಗಳಲ್ಲಿ ಹಣವನ್ನು ದುರುಪಯೋಗ ಮಾಡಿಕೊಂಡರೆ 1930 ಹೆಲ್ಪಲೈನ್ಗೆ ಕರೆ ಮಾಡಿ ಎಂದರು.
ಚಿಕ್ಕಮಕ್ಕಳಲ್ಲಿ ಮಧುಮೇಹ
ವಿನ್ಲೈಪ್ನ ಮ್ಯಾನೇಜೀಂಗ್ ಟ್ರಸ್ಟಿ ಮತ್ತು ಮೆಟ್ರೋ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಪೃಥ್ವಿ ಮಾತನಾಡಿ, ಜನರ ಆರೋಗ್ಯ ಜನರ ಕೈಯಲ್ಲಿ ಇದೆ. ಆದರೆ ಅವರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಚಿಕ್ಕ ಪ್ರಯತ್ನ ನಮ್ಮದಾಗಿದೆ.
ಇತ್ತೀಚಿನ ದಿನಗಳಲ್ಲಿ ಚಿಕ್ಕಮಕ್ಕಳಲ್ಲಿ ಸಹ ಮಧುಮೇಹ ಬರುತ್ತಿದ್ದು ಜನರು ಭಯಬೀತಿಯಿಂದ ಬದುಕುತ್ತಿದ್ದಾರೆ. ಸಾಕಷ್ಟು ಮಧುಮೇಹ ಬಂದಂತವರು ಡಯಾಲಿಸಿಸ್, ಇಂಜೆಕ್ಷನ್ಗಳ ಮೊರೆ ಹೋಗುತ್ತಿದ್ದಾರೆ. ಸಕ್ಕರೆ ಖಾಯಿಲೆಗೆ ಸಾಕಷ್ಟು ಕಾರಣಗಳು ಇದ್ದರೂ ಸರಿಯಾದ ಊಟದ ವ್ಯವಸ್ಥೆ ಸೇರಿದಂತೆ ಸಹ ಪ್ರಾರಂಭಿಕ ಹಂತಗಳಲ್ಲಿ ತಡೆಗಟ್ಟಬಹುದಾಗಿದೆ.
ಯಾವುದೇ ಕಾಯಿಲೆಗಳು ಆಗಲಿ ವೈದ್ಯರ ಸಲಹೆಯಂತೆ ಉತ್ತಮವಾದ ಚಿಕಿತ್ಸೆಯನ್ನು ಪಡೆದರೆ ಖಾಯಿಲೆಗಳಿಂದ ಮುಕ್ತಿ ಹೊಂದಬಹುದಾಗಿದೆ. ಇತ್ತೀಚಿನ ದಿನಮಾನಗಳಲ್ಲಿ ಎಲ್ಲಾ ಆಹಾರ ಪದಾರ್ಥಗಳಲ್ಲಿ ಸಹ ಸಕ್ಕರೆ ಪ್ರಮಾಣ ಇದ್ದು ಜನರು ಹೆಚ್ಚು ಹೆಚ್ಚು ಹಸಿರು ತರಕಾರಿಗಳನ್ನು ಸೇವಿಸಬೇಕು ಎಂದರು.
ತಹಶೀಲ್ದಾರ್ ಯರ್ರಿಸ್ವಾಮಿ ಮಾತನಾಡಿ, ಇಂದಿನ ದಿನಗಳಲ್ಲಿ ಆರೋಗ್ಯ ಸಂರಕ್ಷಣೆಗೆ ಅದ್ಯಾತ್ಮ ಮತ್ತು ವಿಜ್ಞಾನ ಎರಡರ ಸಹಕಾರ ಬೇಕಿದೆ. ವೈದ್ಯರು ಇಂಗ್ಲೀಷ್ ಮೆಡಿಸನ್ ಮಾತ್ರಗಳನ್ನು ಮಾತ್ರವಲ್ಲದೇ ಯೋಗ, ಧ್ಯಾನ, ಆಯುರ್ವೇದ ಮತ್ತು ಆಹಾರ ಪದಾರ್ಥಗಳ ಬಳಕೆಯ ವಗ್ಗೆ ಮಾಹಿತಿ ನೀಡುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಡಿವೈಎಸ್ಪಿ. ಪ್ರಶಾಂತ್ ಮುನೋಳಿ, ಮೆಟ್ರೂ ಆಸ್ಪತ್ರೆಯ ಅಧ್ಯಕ್ಷ ಡಾ.ಪಿ.ಲಕ್ಷ್ಮೀಮನಾರಾಯಣ ಆಚಾರ್, ಆಸ್ಪತ್ರೆಯ ಸಿ.ಇ.ಓ. ಡಾ.ತೇಜಸ್ವಿ ಹುಂಡೈ ಶೋರಂ ಮಾಲೀಕರಾದ ಕೆ.ಜಾವಿದ್ ಸಾಬ್, ವಿನ್ಲೈಫ್ ಸಂಸ್ಥೆಯ ನಿರ್ದೇಶಕರುಗಳಾದ ಡಾ.ಶಂಕರ್, ಡಾ.ವಿಜಯ್ಕುಮಾರ್, ರೆಹಮತ್, ಬದ್ರಿನಾಥ್, ರಿಯಾನ್ ಹಾಜರಿದ್ದರು.