![](https://davangerevijaya.com/wp-content/uploads/2025/01/IMG-20250116-WA0145.jpg)
ಚನ್ನಗಿರಿ: ಚನ್ನಗಿರಿ ಪಟ್ಟಣದ ಉಪ್ಪಾರ ಸಮುದಾಯದ ಕುಲದೇವತೆ ಅಂತರಗಟ್ಟಮ್ಮ ಜಾತ್ರಾ ಮಹೋತ್ಸವ ಅಂಗವಾಗಿ ದೇವಿಗೆ ವಿಶೇಷ ಅಲಂಕಾರ ಮತ್ತು ಪೂಜೆಯನ್ನು ಭಕ್ತಾದಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿಸಲಾಯಿತು.
ಸಮುದಾಯದ ಗೌಡರಾದ ರವಿಕುಮಾರ್ ಮಾತನಾಡಿ, ಈ ಆಚರಣೆಯನ್ನು ನಮ್ಮ ಪೂರ್ವಕರು ಅನಾದಿಕಾಲದಿಂದಲೂ ನಡೆಸಿಕೊಂಡು ಬಂದಿದ್ದು ಪ್ರತಿ ವರ್ಷವೂ ಅಂತರಗಟ್ಟೆ ಜಾತ್ರೆಯಂದು ಇಲ್ಲಿಯೂ ಆಚರಣೆ ಮಾಡಲಾಗುತ್ತದೆ. ನಂತರ 3 ವರ್ಷಕ್ಕೊಮ್ಮೆ ದೊಡ್ಡ ಜಾತ್ರೆ ಮತ್ತು ರಥೋತ್ಸವ ಕಾರ್ಯಕ್ರಮ ನಡೆಸಲಾಗುತ್ತದೆ ಎಂದರು.
ಮೂಲದೇವತೆಯು ಹೊಸದುರ್ಗ ಬಳಿ ಇರುವ ಅಂತರಗಟ್ಟಮ್ಮ ದೇವತೆಯಾಗಿದ್ದು ಪ್ರತಿ ವರ್ಷವೂ ಅಲ್ಲಿ ಜಾತ್ರೆ, ಬಾನ ನಡೆಯುವ ಸಂದರ್ಭದಲ್ಲಿ ಚನ್ನಗಿರಿ ಪಟ್ಟಣದ ದೇಗುಲದಲ್ಲಿ ವಿಶೇಷ ಅಲಂಕಾರ ಮಾಡಿ ದೇವರನ್ನು ಪೂಜಿಸಲಾಗುತ್ತದೆ.
ಸಮುದಾಯದ ಎಲ್ಲಾ ಮನೆಯ ಹೆಣ್ಣು ಮಕ್ಕಳು ಹೊರಡುವ ಅಮ್ಮನವರಿಗೆ ಕಳಶ ಬೆಳಗುವುದು ವಾಡಿಕೆಯಾಗಿದ್ದು 100 ಕ್ಕೂ ಹೆಚ್ಚು ಜನ ಹೆಣ್ಣು ಮಕ್ಕಳು ದೇವಿಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇಗುಲಕ್ಕೆ ಆಗಮಿಸಿದ್ದ ಭಕ್ತಾಧಿಗಳಿಗೆ ಪ್ರಸಾದವನ್ನು ವಿತರಿಸಲಾಯಿತು
.