ಚಳ್ಳಕೆರೆ : ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ದಲ್ಲಿ ಬಸ್ ಇಳಿದು ಬರುತ್ತಿದ್ದ ಆಶಾ ಎಂಬುವವರಿಗೆ ಗಂಡನಾದ ಕುಮಾರ್ ರವರು ಮಚ್ಚಿನಿಂದ ಇಂದು ಹಲ್ಲೆ ನಡೆಸಿದ್ದಾರೆ.
ತಾಲೂಕಿನ ಚೆನ್ನಮ್ಮನಾಗತಿಹಳ್ಳಿ ಗ್ರಾಮದ ಕುಮಾರ್(30) ವರ್ಷ ಎಂಬುವವರು ಕಳೆದ ಮೂರು ವರ್ಷದ ಹಿಂದೆ ವಿವಾಹ ವಾಗಿದ್ದರು ಆದರೆ ಎರಡು ವರ್ಷದ ದಾಂಪತ್ಯ ಜೀವನ ನಡೆಸಿದ ನಂತರ ದಾಂಪತ್ಯದಲ್ಲಿ ಹೊಡಕು ಮೂಡಿ ಹೆಂಡತಿ ಆಶಾ(25) ವಿವಾಹ ವಿಚ್ಚೇದನ ಕ್ಕೆ ಕೋರ್ಟ್ ಮೊರೆ ಹೊಗಿದ್ದರು ಎನ್ನಲಾಗಿದೆ.
ಇಂದು ವಿಚ್ಛೇದನಕ್ಕೆ ಚಳ್ಳಕೆರೆ ನ್ಯಾಯಾಲಯಕ್ಕೆ ಹಾಜರಾಗಬೇಕಿದ್ದ ಸಂಧರ್ಭದಲ್ಲಿ ಮುಂಜಾನೆ ಬಸ್ ನಿಲ್ದಾಣದಲ್ಲಿ ಕಾದು ಕುಳಿತಿದ್ದ ಗಂಡ ಕುಮಾರ್ ನಿಂದ ಈ ಕೃತ್ಯ ನಡೆದಿದೆ.
ಇನ್ನೂ ಮಚ್ಚಿನಿಂದ ಆಶಾ ತಲೆಗೆ ಹಾಗೂ ಕೈಗೆ ಘಾಯಗಳಾಗಿದ್ದು ಸಾವು ಬದುಕಿನ ಮದ್ಯೆ ಹೋರಾಟ ನಡೆಸುತ್ತಿದ್ದಾಳೆ, ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗೆ ಚಿತ್ರದುರ್ಗ ಜಿಲ್ಲಾಆಸ್ವತ್ರೆಗೆ ದಾಖಲುಮಾಡಿದೆ.
ಇನ್ನೂ ಆರೋಪಿ ಗಂಡನನ್ನು ಚಳ್ಳಕೆರೆ ಪೋಲಿಸ್ ರವರು ಕ್ಷಣ ಮಾತ್ರದಲ್ಲಿ ಪತ್ತೆ ಹಚ್ಚಿ ತಮ್ಮ ವಶಕ್ಕೆ ಪಡೆದಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿ ತನಿಖೆನಂತರ ಹೊರಬೀಳಲಿದೆ.