ದಾವಣಗೆರೆ : ಕರ್ಮ… ಇದನ್ನ ಎಲ್ರೂ ಕೇಳಿರ್ತೀರಾ.. ನಾವು ಇತರರಿಗೆ ಒಳ್ಳೆದನ್ನ ಮಾಡಿದ್ರೆ ನಮಗೆ ಕಂಡಿತ ಒಳ್ಳೆದಾಗುತ್ತೆ. ಕೆಟ್ಟದನ್ನ ಮಾಡಿದ್ರೆ ನಮಗೂ ಕೆಟ್ಟದ್ದಾಗುತ್ತೆ ಅಂತೇಳಿ ಜನ ನಂಬ್ತಾರೆ.
ಬಿಜೆಪಿ ವಿಷ್ಯದಲ್ಲೂ ಇಂಥದ್ದೇ ಆಗುತ್ತಾ ಅನ್ನೋ ಮಾತುಗಳು ಇದೀಗ ರಾಜಕೀಯ ವಲಯದಲ್ಲಿ ದಟ್ಟವಾಗಿ ಕೇಳಿಬರ್ತಾಯಿವೆ. ಕರ್ನಾಟಕದ ವಿಷ್ಯದಲ್ಲಿ ಕೇಂದ್ರ ಬಿಜೆಪಿ ನಾಯಕರು ನಡೆದುಕೊಂಡ ರೀತಿ ಇದೀಗ ಆ ಪಕ್ಷಕ್ಕೆ ತಿರುಗುಬಾಣವಾಗೋ ಸಾಧ್ಯತೆ ಇದೆ. ಈ ಬಗ್ಗೆ ಚೊಂಬನ್ನ ಪತ್ರಿಕಾ ಜಾಹೀರಾತು ಕೊಡೋದ್ರ ಮೂಲಕ ರಾಜ್ಯ ಕಾಂಗ್ರೆಸ್ ಬಿಜೆಪಿಯನ್ನ ಕುಟುಕಿದೆ. ಹಾಗಾದ್ರೆ ಏನಿದು ಚೊಂಬಿನ ಸಿಂಬಲ್ ಅರ್ಥ ಅಂದ್ರಾ?
ಕರ್ನಾಟಕ ಲೋಕಸಭಾ ಚುನಾವಣಾ ದಿನಾಂಕ ಹತ್ತಿರವಾಗ್ತಾಯಿದೆ. ಈ ನಡುವೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಡುವೆ ಪರಸ್ಪರ ವಾಗ್ದಾಳಿ, ಕೆಸರೆರಚಾಟಗಳು ನಡೆದು ಹೋಗ್ತಾಯಿವೆ. ಪರಿಸ್ಥಿತಿ ಹೀಗಿರೋವಾಗ್ಲೇ, ಕರ್ನಾಟಕ ಕಾಂಗ್ರೆಸ್ ಬಿಜೆಪಿ ವಿರುದ್ಧ ಪತ್ರಿಕಾ ಜಾಹೀರಾತಿನ ಮೂಲಕ ಕುಟುಕಿದೆ.
ಹೌದು ಓದುಗರೇ, ಇವತ್ತು ಪತ್ರಿಕೆಯಲ್ಲಿ ‘ಚೊಂಬು’ ಜಾಹೀರಾತು ನೀಡುವ ಮೂಲಕ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನೇರವಾಗಿ ಅಟ್ಯಾಕ್ ಮಾಡಿದೆ. ಕರ್ನಾಟಕಕ್ಕೆ ಮೋದಿ ಸರ್ಕಾರ ಕೊಟ್ಟ ಕೊಡುಗೆ ಚೊಂಬು! ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತನೀಡಿ ಎಂದು ಮತಯಾಚನೆ ಮಾಡಿದೆ. ಹಾಗಾದರೆ ಕಾಂಗ್ರೆಸ್ ಕೊಟ್ಟಿರೋ ಜಾಹೀರಾತಿನಲ್ಲಿ ಏನಿದೆ ಗೊತ್ತಾ.?
ಕರ್ನಾಟಕಕ್ಕೆ ಮೋದಿ ಸರ್ಕಾರ ಕೊಟ್ಟ ಕೊಡುಗೆ ಚೊಂಬು!
* ಎಲ್ಲರ ಖಾತೆಗೆ 15 ಲಕ್ಷ ಹಣ ಹಾಕುವ ಚೊಂಬು
* ತೆರಿಗೆ ಹಂಚಿಕೆಯಲ್ಲಿ ಚೊಂಬು
* ರೈತರ ಆದಾಯ ಡಬಲ್ ಮಾಡುವ ಚೊಂಬು
* ಬರ/ನೆರೆ ಪರಿಹಾರದ ಚೊಂಬು
ಹೀಗೆ 4 ಅಂಶಗಳನ್ನ ಹೈಲೈಟ್ ಮಾಡಿರೋ ರಾಜ್ಯ ಕಾಂಗ್ರೆಸ್ ಕೇಂದ್ರ ಸರ್ಕಾರದ ಚೊಂಬಿನ ಕಹಾನಿಯನ್ನ ಬಿಚ್ಚಿಟ್ಟಿದೆ. ರಾಜ್ಯದ 27 ಜನ ಬಿಜೆಪಿ/ಜೆಡಿಎಸ್ ಸಂಸದರು ರಾಜ್ಯಕ್ಕೆ ನೀಡಿದ ಕೊಡುಗೆ ಕೇವಲ ಚೊಂಬು. ಈ ಸಲದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ನಾವು ನೀಡೋಣ ಇದೇ ಚೊಂಬನ್ನ. ಕನ್ನಡಿಗರ ಹಿತ ಕಾಪಾಡಲು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಅಂತೇಳಿ ಜಾಹೀರಾತು ನೀಡಿದೆ. ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಏಪ್ರಿಲ್ 26ಕ್ಕೆ ಶುರುವಾಗಲಿದೆ. ಏಪ್ರಿಲ್ 26ರಂದು ರಾಜ್ಯದ 14 ಕ್ಷೇತ್ರಕ್ಕೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭರ್ಜರಿ ಪ್ರಚಾರ ಆರಂಭಿಸಿದೆ. ನರೇಂದ್ರ ಮೋದಿ ಹೆಸರೇಳಿಕೊಂಡು ಮತಯಾಚನೆ ಮಾಡುವ ಅಭ್ಯರ್ಥಿಗಳನ್ನು ಸೋಲಿಸಲು ಕಾಂಗ್ರೆಸ್ ಜಾಹೀರಾತಿನ ಮೂಲಕ ಪ್ರಚಾರ ಆರಂಭಿಸಿದೆ.
ಮೊದಲ ಹಂತದಲ್ಲಿ ಕರ್ನಾಟಕದ ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು-ಕೊಡಗು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಈ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಿರುಸಿನ ಪ್ರಚಾರ ಆರಂಭಿಸಿದೆ. ಮೋದಿ ಆಡಳಿತದ ಅವಧಿಗೂ ಮುನ್ನ ನೀಡಿ ಈಡೇರದ ಭರವಸೆಗಳ ಬಗ್ಗೆ ಕಾಂಗ್ರೆಸ್ ಮತದಾರರಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತಿದೆ. ನಿರುದ್ಯೋಗ, ರೈತರ ಆದಾಯ, ಬರ ಪರಿಹಾರ, ಖಾತೆಗೆ ಹಣ ಇಂತೆಲ್ಲಾ ಭರವಸೆಗಳನ್ನು ಬಿಜೆಪಿ ಅಧಿಕಾರಕ್ಕೂ ಮುನ್ನ ನೀಡಿ ಜನರ ಕಣ್ಣಿಗೆ ಮಣ್ಣೆರೆಚಿದೆ. ಹೀಗಾಗಿ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಅಂತೇಳಿ ಕಾಂಗ್ರೆಸ್ ಮನವಿ ಮಾಡಿಕೊಂಡಿದೆ.
ಬೆಂ. ಕೇಂದ್ರದಲ್ಲಿ PC ಮೋಹನ್ಗೆ ಪುಕಪುಕ?
ಹೌದು ಓದುಗರೇ, ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿಗೆ ಸೋಲಿನ ಭೀತಿ ಎದುರಾಗಿದೆ. ಜೊತೆಗೆ ಕನ್ನಡಿಗರು ಮೋದಿ ಅವರ ಮಾತುಗಳ ಮೇಲೆ ವಿಶ್ವಾಸವನ್ನ ಕಳೆದುಕೊಂಡಿದ್ದಾರೆ ಅನ್ನೋ ಮಾತುಗಳೂ ಕೇಳಿಬರ್ತಾಯಿವೆ. ಈ ನಡುವೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಕಳೆದ 15 ವರ್ಷಗಳಿಂದ ಮೋದಿ ಹೆಸರಲ್ಲಿ ಗೆಲ್ತಾ ಬಂದಿರೋ ಬಿಜೆಪಿಯ ಹಾಲಿ ಸಂಸದ ಪಿಸಿ ಮೋಹನ್ ಅವರಿಗೆ ಈ ಸಲ ಗೆಲುವು ಅಂದುಕೊಂಡಷ್ಟು ಸುಲಭ ಇಲ್ಲ.ಇವರ ಮುಂದೆ ಕಾಂಗ್ರೆಸ್ ಅಭ್ಯರ್ಥಿ ಮತ್ತು ಯುವ ಮುಖಂಡ ಮನ್ಸೂರ್ ಅಲಿಖಾನ್ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇದ್ರಿಂದ ಹತಾಶಗೊಂಡಿರೋ ಪಿಸಿ ಮೋಹನ್ ಅವರು, ಬೆಂಗಳೂರು ಕೇಂದ್ರದಲ್ಲಿ ಮೆಟ್ರೊ ಸೇವೆಗಳು, ನಿರ್ಗತಿಕರಿಗೆ ವಸತಿ, ಆಯುಷ್ಮಾನ್ ಭಾರತ್ ಅಡಿಯಲ್ಲಿ ಆರೋಗ್ಯ ಮತ್ತು ಇತರ ಹಲವಾರು ಯೋಜನೆಗಳಂತಹ ಉಪಕ್ರಮಗಳ ಮೂಲಕ ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಅಪಾರವಾದ ಕೊಡುಗೆ ನೀಡಿದ್ದೇವೆ. ಆದರೆ ಕಾಂಗ್ರೆಸ್ ಪಕ್ಷ ಬೆಂಗಳೂರು ಮಾತ್ರವಲ್ಲದೆ ದೇಶದಾದ್ಯಂತ ತನ್ನ ವಿಶ್ವಾಸಾರ್ಹತೆ ಕಳೆದುಕೊಂಡಿದೆ ಅಂತೇಳಿ ಪ್ರಚಾರ ನಡೆಸುತ್ತಿದ್ದಾರೆ.
ಆದ್ರೆ ಜನ ಮಾತ್ರ ಇವರ ಮಾತುಗಳ ಮೇಲೆ ವಿಶ್ವಾಸ ಇಡ್ತಾಯಿಲ್ಲ. ಬೆಂಗಳೂರು ಕೇಂದ್ರದಲ್ಲಿ ಪಿಸಿ ಮೋಹನ್ ಅವರ ಅಸಲಿ ಕೊಡುಗೆ ಏನು.? ಇವರು ಹೇಳಿರೋ ಎಲ್ಲ ಕಾರ್ಯಗಳು ಈ ಕ್ಷೇತ್ರದಲ್ಲಿ MP ಇದ್ರೂ ನಡೀತಾಯಿದ್ವು. ಇಲ್ಲದಿದ್ರೂ ನಡೀತಾಯಿದ್ವು. ಒಂದು ನಗರ ಬೆಳೀತಾಯಿದೆ ಅಂದ್ರೆ ಅದಕ್ಕೆ ಪೂರಕವಾದ ಕೆಲಸಗಳು ಕೂಡ ನಡೀತಾಯಿರ್ತಾವೆ. ಆಡಳಿತ ಸೇವಾ ವರ್ಗ ತನ್ನ ಕೆಲಸಗಳನ್ನ ತಾನು ಮಾಡ್ಕೊಂಡು ಹೋಗ್ತಾಯಿರುತ್ತೆ. ಆದ್ರೆ ಅದನ್ನೇ ಪಿಸಿ ಮೋಹನ್ ಅವರು ತಮ್ಮ ಸಾಧನೆ ಅಂತ ಜಂಭ ಕೊಚ್ಕೊಂತಿದ್ದಾರೆ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮತದಾರರು ಪ್ರಜ್ಞಾವಂತರಾಗಿದ್ದು, ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮೋದಿ ಹೇಳಿದಂತೆ ವಿದೇಶಗಳಲ್ಲಿರೋ ಭಾರತೀಯರ ಕಪ್ಪು ಹಣ ಯಾಕೆ ವಾಪಸ್ ತರ್ಲಿಲ್ಲ.? ಪ್ರತಿ ಬಡವರ ಖಾತೆಗಳಿಗೆ ತಲಾ 15 ಲಕ್ಷ ಹಣವನ್ನ ಅದ್ಯಾಕೆ ಹಾಕ್ಲಿಲ್ಲ.? ಪ್ರತಿ ವರ್ಷ 2 ಕೋಟಿ ಉದ್ಯೋಗವನ್ನ ಯಾಕೆ ಸೃಷ್ಟಿ ಮಾಡಿಲ್ಲ.? ರೈತರ ಆದಾಯವನ್ನ ಹೇಳಿದಂತೆ ಅದ್ಯಾಕೆ ಡಬಲ್ ಮಾಡಿಲ್ಲ. ಇವೆಲ್ಲ ಮೋದಿ ಕೊಟ್ಟಿದ್ದ ಬಂಡಲ್ ಭರವಸೆಗಳಲ್ವೇ ಅಂತೇಳಿ ಬೆಂಗಳೂರು ಕೇಂದ್ರದ ಮತದಾರರು ಕೇಳ್ತಾಯಿದ್ದಾರೆ.
ಹೀಗಾಗಿ ಸುಳ್ಳು ಭರವಸೆಗಳ ವಿರುದ್ಧ ಬೇಸತ್ತಿರೋ ಜನ ಈ ಸಲದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಿಸಿ ಮುಟ್ಟಿಸಲು ಕಾದು ಕೂತಿದ್ದಾರೆ.
ಹಾಗಾದ್ರೆ ಕಳೆದ 10 ವರ್ಷಗಳಿಂದ ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ನೀಡಿದ ಕೊಡುಗೆ ಕೇವಲ ಚೊಂಬು. ಈ ಸಲದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ನಾವು ನೀಡೋಣ ಇದೇ ಚೊಂಬನ್ನ ಅಂತೇಳುತ್ತಿರೋ ರಾಜ್ಯ ಕಾಂಗ್ರೆಸ್ ಮಾತಿನ ಬಗ್ಗೆ ನೀವೇನಂತಿರಾ?