ದಾವಣಗೆರೆ : ಕೈಲಾಗದ ಕಮಲ ದಳ ಪಕ್ಷಗಳು ಮೈ ಪರಚಿಕೊಳ್ತಾಯಿವೆಯಾ.? ಈ ಸಲದ ಲೋಕಸಭಾ ಚುನಾವಣೆಯಲ್ಲಿ 400 ಸೀಟುಗಳನ್ನ ಗೆಲ್ತಿವಿ ಅಂತೇಳಿದ್ದ ಬಿಜೆಪಿಗೆ 200 ಸೀಟು ಗೆಲ್ಲೋದು ಕೂಡ ಕಷ್ಟವಾಗ್ತಿದೆಯಾ.? ಜೆಡಿಎಸ್ ಜೊತೆ ದೋಸ್ತಿ ಮಾಡ್ಕೊಂಡಿರೋ ಬಿಜೆಪಿಗೆ ಕರ್ನಾಟಕದಲ್ಲಿ ಗೆಲುವು ಗಗನ ಕುಸುಮವಾಗ್ತಿದೆಯಾ.? ಈ ಸಲ ‘10ರಿಂದ 15 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಪತನ’ ಅಂತೇಳಿ ಕಾಂಗ್ರೆಸ್​​ನ ಹಿರಿಯ ಮುಖಂಡ ಹೇಳಿದ್ದೇಕೆ?

ಪ್ರಜ್ವಲ್ ಪೆನ್​ಡ್ರೈವ್ ಪ್ರಕರಣ ಜೆಡಿಎಸ್​​ಗಷ್ಟೇ ಲಾಸ್ ಮಾಡ್ತಿಲ್ಲ. ಬಿಜೆಪಿಗೂ ಬೆಂಬಿಡದ ಬೇತಾಳನಂತೆ ಕಾಡ್ತಿದೆ. ಪ್ರಜ್ವಲ್​ಗೆ ಮತ ಹಾಕಿದ್ರೆ ಅದು ನೇರವಾಗಿ ಮೋದಿಗೆ ಹಾಕಿದಂತೆ ಅಂತೇಳಿ ಖುದ್ದು ಪ್ರಧಾನಿ ಮೋದಿಯೇ ಹಾಸನದಲ್ಲಿ ನಿಂತು ಹೇಳಿಕೆ ಕೊಟ್ಟಿದ್ರು. ಆದ್ರೆ ಪೆನ್​ಡ್ರೈವ್ ಪ್ರಕರಣ ಹೆಚ್​ಡಿ ರೇವಣ್ಣ ಕುಟುಂಬಕ್ಕೆ ಕಾರ್ಮೋಡದಂತೆ ಕವಿಯುತ್ತಿದ್ದಂತೆ ಹೆಚ್​ಡಿ ಕುಮಾರಸ್ವಾಮಿ ಕೂಡ ಅದು ನಮ್ಮ ಫ್ಯಾಮಿಲಿ ಅಲ್ಲ. ನಮ್ದು ಬೇರೆ ಫ್ಯಾಮಿಲಿ ಅಂತಿದ್ದಾರೆ. ಇತ್ತ ಬಿಜೆಪಿ ನಾಯಕರು ಕೂಡ ಅದು ಅವರ ಪಾರ್ಟಿಯ ವಿಷ್ಯ.. ಅದಕ್ಕೂ ನಮಗೂ ಸಂಬಂಧನೇ ಇಲ್ಲ ಅಂತೇಳಿ ಆ ಪ್ರಕರಣದ ಬಗ್ಗೆ ತುಟಿ ಬಿಚ್ಚದಂತೆ ಮೌನವಹಿಸುತ್ತಿದ್ದಾರೆ.

ಇದನ್ನ ನೋಡಿದ್ರೆ ಬಿಜೆಪಿಯ ಬೇಳೆ ಈ ಸಲ ಕರ್ನಾಟಕ ಮಾತ್ರವಲ್ಲ. ದೇಶದ ಹಲವು ರಾಜ್ಯಗಳಲ್ಲಿ ಬೇಯಲ್ಲ ಅನ್ನೋದು ಸ್ಪಷ್ಟವಾಗುತ್ತಿದೆ. ಸದ್ಯ ರಾಜ್ಯ ಬಿಜೆಪಿ ನಾಯಕರ ಕೈಯಲ್ಲಿ ಕಾಂಗ್ರೆಸ್​ಅನ್ನ ಕಟ್ಟಿಹಾಕಲು ಯಾವ ಬ್ರಹ್ಮಾಸ್ತ್ರಗಳೂ ಇಲ್ಲ. ಆದ್ರೆ ಸಿಎಂ ಸಿದ್ದರಾಮಯ್ಯ ಮಾತ್ರ ಉತ್ತರ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಪ್ರಧಾನಿ ಮೋದಿ ಕೊಟ್ಟಿದ್ದ ಸುಳ್ಳು ಭರವಸೆಗಳನ್ನೇ ಬೊಟ್ಟು ಮಾಡಿ ವಾಗ್ದಾಳಿ ನಡೆಸ್ತಿದ್ದಾರೆ. ಮೋದಿ ಒಳ್ಳೆಯ ನಾಟಕಕಾರ.. ಮೋದಿ ಅಷ್ಟು ಸುಳ್ಳು ಹೇಳಿದ ಪ್ರಧಾನಿಯನ್ನ ನಾನು ಹಿಂದೆಂದೂ ನೋಡಿರ್ಲಿಲ್ಲ ಅಂತೇಳಿ ಸಿದ್ದರಾಮಯ್ಯ ಕುಟುಕಿದ್ರು. ಇದೇ ವಿಷ್ಯದ ಬಗ್ಗೆ ಕಿಡಿಕಾರಿರೋ ರಾಜ್ಯ ಬಿಜೆಪಿ ನಾಯಕರು ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ಆದ್ರೆ ಇರೋ ಸತ್ಯವನ್ನ ಹೇಳಿದ್ರೆ ಬಿಜೆಪಿಗರಿಗ್ಯಾಕೆ ಉರಿ ಅನ್ನೋ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ. ಮತ್ತೊಂದು ಕಡೆ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಕೂಡ ಬಿಜೆಪಿ ವಿರುದ್ಧ ಕೆಂಡಾಕಾರಿದ್ದಾರೆ. ಮೋದಿ ಮತ್ತವರ ಬಳಗ ಮತ್ತು ಬಿಜೆಪಿಯವರ ಸುಳ್ಳುಗಳನ್ನು ಜನ ಅರಿತಿದ್ದು, ಈ ಸಲ ಸರಿಯಾಗಿ ಪಾಠ ಕಲಿಸಲಿದ್ದಾರೆ ಅಂತೇಳಿ ಕುಟುಕಿದ್ದಾರೆ. ಬಿಜೆಪಿಯವರು ಸುಳ್ಳಿನ ಮೇಲೆ ಸಾಮ್ರಾಜ್ಯ ಕಟ್ಟುತ್ತಾರೆ. ಇಲ್ಲದ್ದನ್ನು ಅಚ್ಚುಕಟ್ಟಾಗಿ ಸೃಷ್ಟಿಸುತ್ತಾರೆ. ಭ್ರಮೆಗಳನ್ನು ಬಿತ್ತಿ ಮುಗ್ಧ ಜನರ ಮತ ಕೇಳುತ್ತಾರೆ. ಇದೆಲ್ಲದರಿಂದ ಬೇಸತ್ತು ತಾವು ಬಿಜೆಪಿ ತೊರೆಯಬೇಕಾಯಿತು ಅಂತೇಳಿದ್ದಾರೆ..

ಇನ್ನ ಕರ್ನಾಟಕದಲ್ಲಿ ಇದೇ ಮೇ 07ರಂದು 14 ಕ್ಷೇತ್ರಗಳಿಗೆ ಎರಡನೇ ಹಂತದ ಲೋಕಸಭಾ ಚುನಾವಣೆಯ ನಡೆಯುತ್ತಿದ್ದು 14ರಲ್ಲಿ ಬಿಜೆಪಿ ಎರಡಾದ್ರೂ ಗೆಲ್ಲುತ್ತಾ ಅನ್ನೋ ಆತಂಕ ಬಿಜೆಪಿ ನಾಯಕರನ್ನೇ ಕಾಡ್ತಾಯಿದೆ. ಶಿವಮೊಗ್ಗದಲ್ಲಿ ಈಶ್ವರಪ್ಪನವರನ್ನ ಎದುರು ಹಾಕಿಕೊಂಡು, ಇಡೀ ರಾಜ್ಯದಲ್ಲಿ ಕುರುಬ ಸಮುದಾಯದ ಮತಗಳನ್ನ ಬಿಜೆಪಿ ಕಳೆದುಕೊಳ್ಳೋ ಆತಂಕ ತಲೆ ತೋರಿದೆ. ಮತ್ತೊಂದು ಕಡೆ ಲಿಂಗಾಯತ ಪ್ರಾಬಲ್ಯದ ಹಾವೇರಿ, ಹುಬ್ಬಳ್ಳಿ, ಮತ್ತು ಬೆಳಗಾವಿ ಈ ಮೂರು ಭದ್ರಕೋಟೆಗಳನ್ನು ಉಳಿಸಿಕೊಳ್ಳುತ್ತಾ ಬಿಜೆಪಿ ಅನ್ನೋ ಅನುಮಾನಗಳು ವ್ಯಕ್ತವಾಗ್ತಾಯಿವೆ. ಕ್ರಮವಾಗಿ ಶೆಟ್ಟರ್, ಬೊಮ್ಮಾಯಿ ಮತ್ತು ಜೋಶಿ ಕಣದಲ್ಲಿರುವ ಬೆಳಗಾವಿ, ಹಾವೇರಿ ಮತ್ತು ಹುಬ್ಬಳ್ಳಿ ಕ್ಷೇತ್ರಗಳ ಚುನಾವಣೆಯು ಲಿಂಗಾಯತ ಸಮುದಾಯದ ಮತಗಳು ಯಾವ ರೀತಿಯಲ್ಲಿ ಬದಲಾಗುತ್ತವೆ ಎಂಬುದರ ಮೇಲೆ ಹೆಚ್ಚಾಗಿ ಅವಲಂಬಿತವಾಗಿದೆ. ಬಿಜೆಪಿಯ ಈ ಮೂರು ಘಟಾನುಘಟಿ ನಾಯಕರು ಕ್ಷೇತ್ರದ ಅಭಿವೃದ್ಧಿಗಿಂತ ‘ಮೋದಿ ಅಲೆಯನ್ನೇ’ ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ. ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟು ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಬೆಳಗಾವಿ ಮತ್ತು ಹಾವೇರಿ ಕ್ಷೇತ್ರಗಳಲ್ಲಿ ಲಿಂಗಾಯತ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದೆ.

ಸದ್ಯದ ಮಟ್ಟಿಗೆ ಈ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಬ್ಬರದ ಪ್ರಚಾರ ನಡೆಸ್ತಾ ಗ್ಯಾರಂಟಿ ಅಸ್ತ್ರಗಳನ್ನ ಜಳಪಿಸುತ್ತಿದೆ.. ಇನ್ನ ಜೆಡಿಎಸ್​ ಜೊತೆ ಬಿಜೆಪಿ ದೋಸ್ತಿ ಮಾಡ್ಕೊಂಡಿದ್ದು, ಪೆನ್​ಡ್ರೈವ್ ಪ್ರಕರಣ ಮೋದಿ ಅಲೆ ಕೊಚ್ಚಿ ಹೋಗುವಂತೆ ಮಾಡಿದೆ. ಇಂಥ ಸಂದರ್ಭದಲ್ಲಿ ಜೆಡಿಎಸ್ ಮುಖಂಡರು ಬಿಜೆಪಿ ಪರ ಪ್ರಚಾರ ಮಾಡೋದಿರ್ಲಿ, ಪ್ರಚಾರದಲ್ಲಿ ಕಾಣಿಕೊಂಡ್ರೂ ಅದು ಬಿಜೆಪಿಗೆ ದೊಡ್ಡ ಹಿನ್ನಡೆಯನ್ನುಂಟು ಮಾಡುತ್ತೆ. ಹೀಗಾಗಿ ರಾಜ್ಯದ ಜನ ಕಾಂಗ್ರೆಸ್ ಬೆನ್ನಿಗೆ ನಿಂತಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಾಯಿವೆ.

ಇನ್ನ ಪ್ರಜ್ವಲ್ ರೇವಣ್ಣ ಪೆನ್​ಡ್ರೈವ್ ಪ್ರಕರಣ ರಾಜ್ಯದಲ್ಲಿ ಮಾತ್ರವಲ್ಲ., ದೇಶ, ವಿದೇಶಗಳಲ್ಲೂ ಈಗ ಸದ್ದು ಮಾಡ್ತಾಯಿದೆ. 2000ಕ್ಕೂ ಹೆಚ್ಚು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ. ಇದನ್ನ ನಾವು ಖಂಡಿಸುತ್ತೇವೆ. ಇದು ನಾಗರಿಕ ಸಮಾಜ ತಲೆ ತಗ್ಗಿಸುವಂತಾ ವಿಚಾರ ಅಂತೇಳಿ ಕಾಂಗ್ರೆಸ್ ನಾಯಕರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇತ್ತ ಮೋದಿ ಈ ವಿಚಾರದ ಬಗ್ಗೆ ರಿಯಾಕ್ಟ್ ಮಾಡದೇ ಇರೋದು ಬಿಜೆಪಿಗರ ಅಸಲಿ ಬಂಡವಾಳವನ್ನ ಬಿಚ್ಚಿಡ್ತಾಯಿದೆ. ಇದು ಈ ಸಲದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ದೇಶದ ಉದ್ದಗಲಕ್ಕೂ ನೆಗೆಟಿವ್ ಪರಿಣಾಮ ಬೀರೋ ಸಾಧ್ಯತೆ ಇದೆ. ಇದೆಲ್ಲವನ್ನೂ ಗಮನಿಸಿರೋ ಕಾಂಗ್ರೆಸ್‌ ಹಿರಿಯ ನಾಯಕ ಪವನ್‌ ಖೇರಾ ಅಚ್ಚರಿಯ ಭವಿಷ್ಯ ನುಡಿದಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯ ನಂತರ ಕೇಂದ್ರದಲ್ಲಿ ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬರಲಿದ್ದು, 10 ರಿಂದ 15 ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಪತನವಾಗಲಿದೆ ಅಂತೇಳಿದ್ದಾರೆ..

ಹಾಗಾದ್ರೆ ಬಿಜೆಪಿಯ ಸುಳ್ಳು ಭರವಸೆಗಳು, ಪ್ರಜ್ವಲ್ ಪೆನ್​ಡ್ರೈವ್​ ವಿಚಾರದಲ್ಲಿ ಬಿಜೆಪಿ ಸೈಲೆಂಟ್ ಆಗಿರೋದು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯನ್ನುಂಟು ಮಾಡುತ್ತಾ..? ಬಿಜೆಪಿಗರು ವೋಟ್​ಬ್ಯಾಂಕ್​​ಗಾಗಿ ಮಾತ್ರ ಹಿಂದೂ ಮುಸ್ಲಿಂ ವಿಚಾರಗಳನ್ನ ಎಳೆದು ತಂದು ಲಾಭ ಗಿಟ್ಟಿಸಿಕೊಳ್ತಾಯಿದ್ದಾರೆ ಅನ್ನೋದು ಪ್ರಜ್ಞಾವಂತ ಮತದಾರರಿಗೆ ಅರ್ಥವಾಗಿದ್ದು, ಈ ಸಲದ ಚುನಾವಣೆಯಲ್ಲಿ ಬಿಜೆಪಿಗೆ ಬಿಸಿ ಮುಟ್ಟಿಸ್ತಾರಾ?

Share.
Leave A Reply

Exit mobile version